ಸಿಂಹ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಧನದ ಅಧಿದೇವತೆಯ ಕೃಪೆಯಿಂದ ಈ ರಾಶಿಗಳ ಮೇಲೆ ಹಣದ ಸುರಿಮಳೆ!

Thu, 17 Aug 2023-4:34 pm,

ವೃಷಭ ರಾಶಿ: ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಈ ಯುತಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಇಂದು ನಿಮ್ಮ ದಿನ ಅತ್ಯುತ್ತಮವಾಗಿ ಕಳೆದುಹೋಗಲಿದೆ . ಕುಟುಂಬದ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಸುಖ-ಸೌಕರ್ಯಗಳ ಜೊತೆಗೆ ನಿಮಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.   

ಮಿಥುನ ರಾಶಿ:ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಈ ಯುತಿ ನೆರವೇರುತ್ತಿದ್ದು , ನೀವು ಸಾಕಷ್ಟು ಲವಲವಿಕೆಯಿಂದ ತುಂಬಿರುವಿರಿ. ಅಷ್ಟೇ ಅಲ್ಲ ನೀವು ಇಂದು ಸಾಕಷ್ಟು ಆತ್ಮವಿಶ್ವಾಸದಿಂದ ತುಂಬಿರುವಿರಿ. ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆದುಹೋಗಲಿದೆ. ನೌಕರ ವರ್ಗದ ಜನರಿಗೆ ಭಾರಿ ಧನಲಾಭದ ಸಾಧ್ಯತೆಗಳಿವೆ.   

ತುಲಾ ರಾಶಿ: ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಈ ಯುತಿ ನೆರವೇರುತ್ತಿದೆ. ಹೀಗಿರುವಾಗ ಈ ರಾಶಿಗಳ ಜಾತಕದ ಜನರಿಗೆ ಸಮಾಜದಲ್ಲಿ ಅಪಾರ ಘನತೆ ಗೌರವ ಪಾರ್ಪ್ತಿಯಾಗಲಿದೆ. ಪ್ರತಿಯೊಬ್ಬರು ನಿಮ್ಮ ಕೆಲಸದ ಕುರಿತು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ನಿಮ್ಮೊಳಗೆ ನೇತೃತ್ವ ವಹಿಸುವ ಅಪಾರ ಕ್ಷಮತೆ ಇದೆ, ಅದು ಮತ್ತಷ್ಟು ಹೆಚ್ಚಾಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಬಯಸುತ್ತಿದ್ದರೆ, ಈ ಅವಧಿಯಲ್ಲಿ ನೀವು ಆರಂಭಿಸಬಹುದು, ಅದರಿಂದ ನಿಮಗೆ ಭವಿಷ್ಯದಲ್ಲಿ ಅಪಾರ ಧನಲಾಭ ಉಂಟಾಗಲಿದೆ. ಆಕಷ್ಮಿಕ   ಧನಲಾಭದ ಎಲ್ಲಾ ಸಾದ್ಯತೆಗಳು ಗೋಚರಿಸುತ್ತಿವೆ.   

ವೃಶ್ಚಿಕ ರಾಶಿ: ಚತುರ್ಗ್ರಹಿ ಯೋಗ ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ನೆರವೇರುತ್ತಿದೆ. ಇದರಿಂದ ವೃಶ್ಚಿಕ ರಾಶಿಯ ಜನರಿಗೆ ಅಪಾರ ಉನ್ನತಿಯ ಯೋಗವಿದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳು ನಿಮ್ಮ ಕೆಲಸದ ಕುರಿತು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಇದರಿಂದ ನಿಮಗೆ ಪದೋನ್ನತಿ-ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಆದಾಯದ ಹೊಸಹೊಸ ಮೂಲಗಳು ಸೃಷ್ಟಿಯಾಗಲಿವೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link