ಭರಣಿ ನಕ್ಷತ್ರಕ್ಕೆ ದೇವಗುರು ಬೃಹಸ್ಪತಿಯ ಪ್ರವೇಶ, ಲಕ್ಷ್ಮಿ ನಾರಾಯಣ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ ಯೋಗ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ದೇವಗುರು ಬೃಹಸ್ಪತಿಯ ಭರಣಿ ನಕ್ಷತ್ರ ಗೋಚರ ನೆರವೇರಿದೆ. ಗುರುವಿನ ಈ ಭರಣಿ ಗೋಚರ ಹಲವು ರಾಶಿಗಳ ಜನರಿಗೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಈ ಗೋಚರದಿಂದ ಭಾರಿ ಧನಲಾಭದ ಯೋಗ ನಿರ್ಮಾಣಗೊಂಡಿದೆ (Spiritual News In Kannada).
ತುಲಾ ರಾಶಿ: ಗುರುವಿನ ಈ ಭರಣಿ ನಕ್ಷತ್ರ ಗೋಚರ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲಿಷ್ಠವಾಗಿರಲಿದೆ. ನೌಕರವರ್ಗದ ಜನರಿಗೆ ಈ ಅವಧಿಯಲ್ಲಿ ಬಡ್ತಿ ಹಾಗೂ ಇಂಕ್ರೀಮೆಂಟ್ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಉತ್ತಮ ಆರ್ಡರ್ ಸಿಗುವ ಸಾಧ್ಯತೆ ಇದ್ದು, ಅದರಿಂದ ಸಾಕಷ್ಟು ಧನಲಾಭ ಉಂಟಾಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ನೌಕರಿಯ ಹೊಸ ಅವಕಾಶಗಳು ಪ್ರಾಪ್ತಿಯಾಗಲಿದೆ. ಏಕಾಗ್ರತೆ-ಬುದ್ಧಿಯಲ್ಲಿ ವೃದ್ಧಿಯಾಗಲಿದೆ. ಯೋಜನೆಗಳು ಕೈಗೂಡಲಿವೆ.
ಧನು ರಾಶಿ: ಗುರುವಿನ ಭರಣಿ ನಕ್ಷತ್ರ ಪ್ರವೇಶ ಧನು ರಾಶಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ಸಾಕಷ್ಟು ಲಾಭ ತರಲಿದೆ. ಅಂದರೆ, ಈ ಅವಧಿಯಲ್ಲಿ ಅವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸುವರು. ಇದಲ್ಲದೆ ಗುರು ನಿಮ್ಮ ಮಾತುಕತೆಯ ವಿಧಾನದಲ್ಲಿ ಸುಧಾರಣೆ ತರಲಿದ್ದಾನೆ. ಕಚೇರಿಯಲ್ಲಿ ನಿಮ್ಮ ಸಂಬಂಧಗಳಲ್ಲಿ ಸುಧಾರಣೆ ಕಂಡುಬರುವ ಎಲ್ಲಾ ಸಾಧ್ಯತೆಗಳಿವೆ. ಗುರುವಿನ ಪ್ರಭಾವದಿಂದ ನೀವು ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಲ್ಲಿ ಯಶಸ್ವಿಯಾಗುವಿರಿ. ಜೊತೆಗೆ ಈ ಅವಧಿಯಲ್ಲಿ ದೀರ್ಘಕಾಲದಿಂದ ಸಿಲುಕಿ ಬಿದ್ದ ಹಣ ನಿಮ್ಮ ಕೈಸೇರಲಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸಮಾಚಾರ ನಿಮಗೆ ಪ್ರಾಪ್ತಿಯಾಗುವ ಸಾಧ್ಯತೆ ಇದೆ.
ಕರ್ಕ ರಾಶಿ: ಗುರುವಿನ ಭರಣಿ ಗೋಚರ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಹೊಸ ಯೋಜನೆಗಳ ಮೇಲೆ ಕೆಲಸ ಮಾಡಿದರೆ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಭವಿಷ್ಯದಲ್ಲಿ ಈ ಯೋಜನೆಗಳು ಬೇಗ ಪೂರ್ಣಗೊಳ್ಳಲಿವೆ ಮತ್ತು ಅದರಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ವಾಹನ ಅಥವಾ ಆಸ್ತಿ-ಪಾಸ್ತಿ ಖರೀದಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಧರ್ಮ-ಕರ್ಮ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಬಯಸುವವರ ಆಸೆ ಈಡೇರುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)