ಮನಿ ಪ್ಲಾಂಟ್ ಗೆ ಈ ಒಂದು ವಸ್ತುವನ್ನು ಕಟ್ಟಿನೋಡಿ, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಮನೆಯ ತಿಜೋರಿ ಹಣ-ಹೊನ್ನಿನಿಂದ ತುಂಬಿ ತುಳುಕುತ್ತೆ!

Mon, 14 Aug 2023-6:38 pm,

ವಾಸ್ತು ಶಾಸ್ತ್ರದಲ್ಲಿ ಹಲವು ಸಸ್ಯಗಳ ಉಲ್ಲೇಖಿಸಲಾಗಿದ್ದು, ಇವುಗಳನ್ನು ಅತ್ಯಂತ ಮಂಗಳಕರ ಸಸ್ಯಗಳೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಈ ಗಿಡಗಳನ್ನು ನೆಡುವುದರಿಂದ ಪ್ರಗತಿಯ ಹಾದಿ ತೆರೆದು ಹಣ ಬರಲು ಶುರುವಾಗುತ್ತದೆ. ಮನಿ ಪ್ಲಾಂಟ್ ಅನ್ನು ಈ ಸಸ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇಂದು ನಾವು ಮನಿ ಪ್ಲಾಂಟ್‌ನ ಕೆಲವು ಉಪಾಯಗಳ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲಿದ್ದೇವೆ.   

ಮನಿ ಪ್ಲಾಂಟ್ ಸಂಪತ್ತು ಮತ್ತು ಪ್ರಗತಿಗೆ ದಾರಿ ತೆರೆಯುತ್ತದೆ. ಮನೆಯಲ್ಲಿ ಮನಿ ಪ್ಲಾಂಟ್ ನೆಡುವ ಮೊದಲು, ಕೆಲವು ವಿಷಯಗಳನ್ನು ಕಾಳಜಿ ವಹಿಸುವುದು ಬಹಳ ಮುಖ್ಯ.  

ಪ್ಲಾಸ್ಟಿಕ್ ಬಾಟಲ್ ಅಥವಾ ಮಡಕೆ ಮತ್ತು ಕಬ್ಬಿಣ ಅಥವಾ ತವರದಲ್ಲಿ ಮನಿ ಪ್ಲಾಂಟ್ ಅನ್ನು ಎಂದಿಗೂ ನೆಡಬೇಡಿ. ಈ ಸಸ್ಯವನ್ನು ಯಾವಾಗಲೂ ಮಣ್ಣಿನ ಮಡಕೆ ಮತ್ತು ಗಾಜಿನ ಬಾಟಲಿ ಅಥವಾ ಜಾರ್‌ನಲ್ಲಿ ಮಾತ್ರ ನೆಡಬೇಕು.  

ಮನಿ ಪ್ಲಾಂಟ್ ಅಥವಾ ಮಡಕೆಯಲ್ಲಿ ಕೆಂಪು ಬಣ್ಣದ ರಿಬ್ಬನ್ ಅಥವಾ ಕೆಂಪು ದಾರವನ್ನು ಕಟ್ಟಲು ಮರೆಯಬೇಡಿ. ಇದರಿಂದ ಮನೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಮತ್ತೊಂದೆಡೆ, ಶುಕ್ರವಾರದಂದು ಮನಿ ಪ್ಲಾಂಟ್‌ನಲ್ಲಿ ಹಸಿ ಹಾಲನ್ನು ನೀರಿನಲ್ಲಿ ಬೆರೆಸಿ ಅರ್ಪಿಸುವುದರಿಂದ ಲಕ್ಷ್ಮಿ ದೇವಿಯು ಸಂತೋಷಗೊಂಡು ಸಂಪತ್ತನ್ನು ನೀಡುತ್ತಾಳೆ.   

ಮನಿ ಪ್ಲಾಂಟ್ ನೆಡಲು ಆಗ್ನೇಯ ದಿಕ್ಕನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಸುಖ-ಸಮೃದ್ಧಿ ಹೆಚ್ಚುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link