ಶೀಘ್ರದಲ್ಲೇ ಶುಕ್ರ-ಚಂದಿರರ ಮೈತ್ರಿಯಿಂದ ಕಲಾತ್ಮಕ ಯೋಗ ನಿರ್ಮಾಣ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ 3 ರಾಶಿಗಳ ಜನರಿಗೆ ಸಿಗಲಿದೆ ಅಪಾರ ಧನ ಸಂಪತ್ತು!

Thu, 10 Aug 2023-5:40 pm,

ಪಂಚಾಂಗದ ಪ್ರಕಾರ ಪ್ರಸ್ತುತ ಶುಕ್ರಗ್ರಹ ತನ್ನ ವಕ್ರಾವಸ್ಥೆಯಲ್ಲಿ ಕರ್ಕ ರಾಶಿಗೆ ಪ್ರವೇಶಿಸಿದ್ದಾನೆ ಮತ್ತು ಅಸ್ತ ಭಾವದಲ್ಲಿದ್ದಾನೆ. ಇದರ ಜೊತೆಗೆ ಆಗಸ್ಟ್ 13 ಬೆಳಗ್ಗೆ 4 ಗಂಟೆ 25 ನಿಮಿಷಕ್ಕೆ ಚಂದ್ರ ಕೂಡ ಕರ್ಕರಾಶಿಗೆ ಪ್ರವೇಶಿಸಲಿದ್ದಾನೆ ಮತ್ತು ಆತ ಅಲ್ಲಿ ಆಗಸ್ಟ್ 16, 2023ರ ಸಂಜೆ 4 ಗಂಟೆ 47 ನಿಮಿಷಗಳವರೆಗೆ ಇರಲಿದ್ದಾನೆ.   

ಮಿಥುನ ರಾಶಿ: ಶುಕ್ರ ಚಂದಿರರ ಯುತಿಯಿಂದ ನಿರ್ಮಾಣ ಗೊಳ್ಳುತ್ತಿರುವ ಈ ಕಲಾತ್ಮಕ ಯೋಗ ಮಿಥುನ ರಾಶಿಯ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ವಿದೇಶಕ್ಕೆ ಹೋಗುವ ಭಾಗ್ಯ ಪ್ರಾಪ್ತಿಯಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಬಿಸ್ನೆಸ್ ನಲ್ಲಿ ನೀವು ಪಟ್ಟ ಶ್ರಮಕ್ಕೆ ತಕ್ಕ ಫಲ ಪ್ರಾಪ್ತಿಯಾಗಲಿದೆ. ಇದಲ್ಲದೆ ಸಮಾಜದಲ್ಲಿ ನಿಮ್ಮ ಘನತೆ ಗೌರವ ಸಾಕಷ್ಟು ಹೆಚ್ಚಾಗಲಿದೆ.   

ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಶುಕ್ರ ವಕ್ರನಾಗಿದ್ದಾನೆ. ಹೀಗಿರುವಾಗ ಕಲಾತ್ಮಕ ರಾಜಯೋಗ ಕರ್ಕ ಜಾತಕದವರಿಗೆ ಸಾಕಷ್ಟು ಲಾಭಗಳನ್ನು ತಂದುಕೊಡಲಿದೆ. ಒಂದು ಸುಖದಿಂದ ಕೂಡಿದ ವ್ಯಕ್ತಿತ್ವದಲ್ಲಿ ಭಾರಿ ಬದಲಾವಣೆ ಕಂಡುಬರುವ ಸಕಲ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನಿಮಗೆ ಕುಟುಂಬ ಸದಸ್ಯರ ಸಾಥ್ ಸಿಗಲಿದೆ. ಅವರು ನೀಡಿದ ಸಲಹೆಯನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಧನಲಾಭವಾಗುವ ಸಂಪೂರ್ಣ ಸಾಧ್ಯತೆಗಳಿವೆ. ರಚನಾತ್ಮಕ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ.   

ಮಕರ ರಾಶಿ: ಕಲಾತ್ಮಕ ರಾಜಯೋಗ ನಿಮಗೂ ಕೂಡ ಅತ್ಯಂತ ಶುಭ ಸಾಬೀತಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ನೀವು ಯಾವುದಾದರೊಂದು ವಿಶೇಷ ವಿಷಯದ ಮೇಲೆ ಚರ್ಚೆ ನಡೆಸುವ ಸಾಧ್ಯತೆ ಇದೆ. ದೀರ್ಘಾವಧಿಯಿಂದ ನಡೆದುಕೊಂಡು ಬಂದಿರುವ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಬಾಳಸಂಗಾತಿಯ ಜೊತೆಗೆ ಸೇರಿ ಅಧಿಕ ಖರ್ಚು ಮಾಡುವಿರಿ. ಆದರೆ ಇದರೊಂದಿಗೆ ಆದಾಯದ ಹೊಸ ಮೂಲಗಳು ಕೂಡ ತೆರೆದುಕೊಳ್ಳಲಿದ್ದು, ನಿಮಗೆ ಧನಲಾಭದ ಜೊತೆಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link