ಇಂದಿನಿಂದ ಅಕ್ಟೋಬರ್ 4ವರೆಗೆ 3 ರಾಶಿಗಳ ಜನರಿಗೆ ಅಷ್ಟಶ್ವರ್ಯ ಪ್ರಾಪ್ತಿ, ಹಣದಿಂದ ತುಂಬಿ ತುಳುಕಲಿದೆ ತಿಜೋರಿ!

Fri, 18 Aug 2023-5:39 pm,

Mangal Gochar 2023 In Kanya: ವೈದಿಕ ಜೋತಿಷ್ಯಶಾಸ್ತ್ರದ ಪ್ರಕಾರ ಇಂದು ಅಂದರೆ ಆಗಸ್ಟ್ 18 ರಂದು ಭೂಮಿಪುತ್ರ ಮಂಗಳನ ಕನ್ಯಾ ರಾಶಿ ಗೋಚರ ನೆರವೇರಿದ್ದು,  ಇದರಿಂದ ಮೂರು ರಾಶಿಗಳ ಜನರಿಗೆ ಭಾರಿ ಧನಪ್ರಾಪ್ತಿಯ ಯೋಗ ನಿರ್ಮಾಣವಾಗಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ.  

ಧನು ರಾಶಿ: ಮಂಗಳ ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಸಂಚರಿಸಲಿದ್ದಾನೆ. ಹಾಗಾಗಿ ಈ ಅವಧಿಯಲ್ಲಿ ನಿಮ್ಮ ಜೀವನೋಪಾಯ ಕ್ಷೇತ್ರದಲ್ಲಿ ಭಾರಿ ವೃದ್ಧಿ ಇರಲಿದ್ದು, ಮಂಗಳನ ಈ ಕನ್ಯಾ ಗೋಚರ ನಿಮ್ಮ ಪಾಲಿಗೆ ಶುಭ ಸಾಬೀತಾಗಲಿದೆ. ಹಲವು ಯೋಜನೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ವ್ಯಾಪಾರ ವರ್ಗದ ಜನರಿಗೆ ಬಿಸ್ನೆಸ್ ನಲ್ಲಿ ಲಾಭ ಸಿಗಲಿದೆ. ವ್ಯಾಪಾರ ವಿಸ್ತರಣೆಯ ಎಲ್ಲಾ ಸಾಧ್ಯತೆಗಳಿವೆ. ನಿರುದ್ಯೋಗಿಗಳ ನೌಕರಿಯ ಮಾತುಕತೆ ನಡೆಯುವ ಸಾಧ್ಯತೆ ಇದೆ. ಆಸ್ತಿಪಾಸ್ತಿಗಳಲ್ಲಿ ನೀವು ಹಣ ಹೂಡಿಕೆ ಮಾಡುವಲ್ಲಿ ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ಪುಷ್ಯರಾಗ ರತ್ನ ಧಾರಣೆ ನಿಮಗೆ ಸಾಕಷ್ಟು ಯಶಸ್ಸನ್ನು ತಂದು ಕೊಡಲಿದೆ.    

ಸಿಂಹ ರಾಶಿ: ಸಿಂಹ ರಾಶಿಯ ಜಾತಕದರಿಗೆ ಮಂಗಳನ ಕನ್ಯಾ ಗೋಚರ ಸಾಕಷ್ಟು ಅಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಮಂಗಳ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಹೂಡಿಕೆಗೆ ಈ ಸಮಯ ಅತ್ಯಂತ ಅದ್ಭುತವಾಗಿದೆ. ಈ ಅವಧಿಯಲ್ಲಿ ನೀವು ಮಾಡುವ ಹೂಡಿಕೆ ನಿಮಗೆ ಭಾರಿ ಧನಲಾಭವನ್ನು ತಂದುಕೊಡಲಿದೆ. ವ್ಯಾಪಾರಿಗಳ ಸಿಲುಕಿಬಿದ್ದ ಹಣ ವಾಪಸ್ ಬರಲಿದೆ. ನಿಮ್ಮ ಮಾತಿನಲ್ಲಿ ಪ್ರಭಾವ ಇತರರ ಮೇಲಾಗಲಿದೆ. ಮಂಗಳ ನಿಮ್ಮ ಗೋಚರ ಜಾತಕದ ಪಂಚಮ ಹಾಗೂ ನವಮ ಭಾವದ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಇರಲಿದ್ದು. ಸಂತಾನ ಪಕ್ಷದ ಕಡೆಯಿಂದ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.     

ಮೇಷ ರಾಶಿ: ನಿಮ್ಮ ರಾಶಿಗೆ ಮಂಗಳ ಅಧಿಪತಿ.  ಇದಲ್ಲದೆ ಆತ ನಿಮ್ಮ ಗೋಚರ ಜಾತಕದ ಶಷ್ಟಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಮಂಗಳನ ಈ ಗೋಚರ ನಿಮ್ಮ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮ ಹೆಚ್ಚಾಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವೃಗೆ ಸಮಯ ಅತ್ಯಂತ ಅದ್ಭುತವಾಗಿದ್ದು, ಉಚಿತ ಫಲಿತಾಂಶ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮಗೆ ವಾಹನ ಅಥವಾ ಆಸ್ತಿಪಾಸ್ತಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ.     

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)    

ZEENEWS TRENDING STORIES

By continuing to use the site, you agree to the use of cookies. You can find out more by Tapping this link