ಆಗಸ್ಟ್ 7 ರಂದು ನಿರ್ಮಾಣಗೊಳ್ಳಲಿದೆ ಗಜಕೇಸರಿ ರಾಜಯೋಗ, ಈ ಜನರಿಗೆ ಅಪಾರ ಧನ ವೃದ್ಧಿಯೋಗ!

Thu, 03 Aug 2023-12:37 pm,

ಪ್ರಸ್ತುತ ದೇವಗುರು ಬೃಹಸ್ಪತಿ ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದು, ಆಗಸ್ಟ್ 7 ರಂದು ಮಧ್ಯಾಹ್ನ 1 ಗಂಟೆ 45 ನಿಮಿಷಕ್ಕೆ ಚಂದ್ರ ಕೂಡ ಮೇಷ ರಾಶಿಗೆ ಸಾಗಲಿದ್ದಾನೆ. ಅಲ್ಲಿ ಆತ ಆಗಸ್ಟ್ 9, 2023 ರ 7 ಗಂಟೆ 43 ನಿಮಿಷದವರೆಗೆ ಇರಲಿದ್ದಾನೆ. ಹೀಗಿರುವಾಗ ಸಂಪೂರ್ಣ ಎರಡೂವರೆ ದಿನಗಳ ಕಾಲ ಗಜಕೇಸರಿ ಯೋಗ ಇರಲಿದೆ. ಈ ಯೋಗ ಯಾರಿಗೆ ಲಾಭ ತಂದು ಕೊಡಲಿದೆ ತಿಳಿದುಕೊಳ್ಳೋಣ ಬನ್ನಿ,  

ಮೇಷ ರಾಶಿ: ಗಜಕೇಸರಿಯೋಗದಿಂದ ಮೇಷ ರಾಶಿಯ ಜಾತಕದವರಿಗೆ ಸಾಕಷ್ಟು ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ಹೊಸ ಉದ್ಯೋಗದ ಹುಡುಕಾಟದಲ್ಲಿರುವ ಜನರ ಹುಡುಕಾಟ ಅಂತ್ಯವಾಗಲಿದೆ. ಈಗಾಗಲೇ ನೌಕರಿಯಲ್ಲಿರುವವರ ಜನರಿಗೆ ಪರಿಶ್ರಮದ ಫಲ ಸಿಗಳಿದ್ದು, ನೌಕರಿಯಲ್ಲಿ ಇಂಕ್ರಿಮೆಂಟ್ ಹಾಗೂ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿದ್ದು, ಇದರಿಂದ ನಿಮಗೆ ಭಾರಿ ಧನಲಾಭ ಉಂಟಾಗುವ ಸಾಧ್ಯತೆ ಇದೆ.   

ಕರ್ಕ ರಾಶಿ: ಕರ್ಕ ರಾಶಿಯ ಜಾತಕದವರಿಗೂ ಕೂಡ ಗಜಕೇಸರಿ ಯೋಗ ಸಾಕಷ್ಟು ಲಾಭ ತಂದು ಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಸಮಯ ಯಶಸ್ಸಿನಿಂದ ಕೂಡಿರಲಿದೆ. ನೌಕರರಿಗೆ ಧನಲಾಭ ಭಾಗ್ಯ ಪ್ರಾಪ್ತಿಯಾಗಲಿದೆ. ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಸಮಯ ಅನುಕೂಲಕರವಾಗಿದೆ. ಇದರಿಂದ ಭವಿಷ್ಯದಲ್ಲಿ ಭಾರಿ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಸಂಕಷ್ಟಗಳಿನ ಮುಕ್ತಿ ಸಿಗಲಿದೆ.  

ಮಕರ ರಾಶಿ: ಮಕರ ರಾಶಿಯ ಜಾತಕದವರಿಗೂ ಕೂಡ ಗಜಕೇಸರಿ ಯೋಗ ಸಾಕಷ್ಟು ಖುಷಿಗಳನ್ನು ತಂದು ಕೊಡಲಿದೆ. ನಿಮಗೆ ಇದರಿಂದ ಸಾಕಷ್ಟು ಧನಲಾಭ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಕಾನೂನೂನು ಪ್ರಕರಣಗಳಲ್ಲಿ ಜಯ ನಿಮ್ಮದಾಗಲಿದೆ. ಸಮಾಜದಲ್ಲಿ ಘನತೆ-ಗೌರವ ಹೆಚ್ಚಾಗಲಿದೆ. ಆಸ್ತಿಪಾಸ್ತಿ ಖರೀದಿಗಾಗಿ ಯೋಚಿಸುತ್ತಿದ್ದರೆ ಸಮಯ ಸಾಕಷ್ಟು ಅನುಕೂಲಕರವಾಗಿದ್ದು, ಯಶಸ್ಸು ಕೂಡ ಪ್ರಾಪ್ತಿಯಾಗಲಿದೆ,  

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link