ಮುಂದಿನ 10 ದಿನಗಳ ಕಾಲ ಈ ರಾಶಿಗಳ ಜನರಿಗೆ ಅಷ್ಟೈಶ್ವರ್ಯ ಕರುಣಿಸಲಿದ್ದಾಳೆ ಐಶ್ವರ್ಯ ಲಕ್ಷ್ಮಿ!

Tue, 08 Aug 2023-1:30 pm,

ಮೇಷ ರಾಶಿ: ಸೂರ್ಯ-ಶುಕ್ರರ ಯುತಿಯಿಂದ ನಿರ್ಮಾಣಗೊಂಡಿರುವ ಈ ರಾಜಯೋಗ ಹಲವು ಜಾತಕದವರ ಪಾಲಿಗೆ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಈ ಯೋಗ ಸಾಕಷ್ಟು ಸಮೃದ್ಧಿಯನ್ನು ತರಲಿದೆ. ಇದರಿಂದ ಮೇಷ ಜಾತಕದವರ ಆರ್ಥಿಕ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಇರಲಿದೆ. ತಂದೆ-ತಾಯಿ ತೀರ್ಥ ಯಾತ್ರೆಗೆ ತೆರಳುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಉನ್ನತಿ ಇರಲಿದೆ. ಇದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ನಡೆಯಲಿವೆ.  

ಕರ್ಕ ರಾಶಿ: ನಿಮ್ಮ ರಾಶಿಯಲ್ಲಿಯೇ ಸೂರ್ಯ-ಶುಕ್ರರ ಯುತಿಯಿಂದ ಈ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ಮೈತ್ರಿ ನಿಮ್ಮ ಪಾಲಿಗೆ ಅತ್ಯಧಿಕ ಅನುಕೂಲಕರವಾಗಿದೆ. ಸಮಾಜದಲ್ಲಿ ಪ್ರತಿಷ್ಠೆ -ಗೌರವ ಹೆಚ್ಚಾಗಲಿದೆ. ಸಾಮಾಜಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ವಿತ್ತೀಯ ಲಾಭಗಳ ಎಲ್ಲಾ ಸಾಧ್ಯತೆಗಳಿವೆ. ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಸಮಯ ಕಳೆಯುವಲ್ಲಿ ಯಶಸ್ವಿಯಾಗುವಿರಿ.   

ತುಲಾ ರಾಶಿ: ತುಲಾ ರಾಶಿಯ ಜಾತಕದವರ ಪಾಲಿಗೆ ಈ ರಾಜಯೋಗ ಅತ್ಯಂತ ಲಾಭದಾಯಕವಾಗಿರಲಿದೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಸಿಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಳಿವೆ. ಕಾರ್ಯಸ್ಥಳದಲ್ಲಿ ನಿಮ್ಮ ಸ್ಥಿತಿ ಸುಧಾರಣೆಯಾಗಲಿದೆ ಮತ್ತು ನಿಮಗೆ ಮುಂದಾಳತ್ವ ವಹಿಸಿಕೊಳ್ಳುವ ಅವಕಾಶ ಸಿಗಲಿದೆ. ಹೀಗಿರುವಾಗ ಪ್ರಮೋಷನ್ ಹಾಗೂ ಇಂಕ್ರಿಮೆಂಟ್ ನ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.  

ಧನು ರಾಶಿ: ಸೂರ್ಯ-ಶುಕ್ರರ ಈ ಶುಭ ಸಂಯೋಗದಿಂದ ರೂಪುಗೊಂಡಿರುವ ಈ ರಾಜಯೋಗ ನಿಮ್ಮ ಪಾಳಿಗೂ ಕೂಡ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುವುದರಿಂದ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. ಸಹೋದ್ಯೋಗಿಗಳು ಹಾಗೂ ಹಿರಿಯರ ಜೊತೆಗೆ ಒಡನಾಟ ಹೆಚ್ಚಾಗುವುದರಿಂದ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಉನ್ನತ ಅಧಿಕಾರಿಗಳ ಭೇಟಿ ಭವಿಷ್ಯದಲ್ಲಿ ನಿಮಗೆ ಅತ್ಯುತ್ತಮ ಫಲಗಳನ್ನು ನೀಡಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link