ನವಾಂಶ ಜಾತಕದಲ್ಲಿ ವರ್ಗೊತ್ತಮನಾದ ಶನಿ, 4 ರಾಶಿಗಳ ಜನರ ಆದಾಯದಲ್ಲಿ ಭಾರಿ ಹೆಚ್ಚಳ!
ಮೇಷ ರಾಶಿ-ಶನಿ ವರ್ಗೊತ್ತಮನಾಗುವುದು ಮೇಷ ರಾಶಿಯ ಜಾತಕದವರಿಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸು ನಿಮ್ಮದಾಗಲಿದೆ. ಇನ್ನೊಂದೆಡೆ ನವಾಂಶ ಜಾತಕದಲ್ಲಿ ಶನಿ ಹಾಗೂ ಬುದ್ಧನ ಮೈತ್ರಿ ಕೂಡ ನೆರವೇರಿದೆ. ಇದರಿಂದ ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ನಿರ್ಮಾಣಗೊಂಡು, ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರಗಳು ಪ್ರಾಪ್ತಿಯಾಗಳಿವೆ. ಆರ್ಥಿಕ ಸ್ಥಿತಿ ಬಲಿಷ್ಠವಾಗಲಿದೆ.
ವೃಷಭ ರಾಶಿ: ಶನಿದೇವ ವರ್ಗೊತ್ತಮನಾಗುವುದು ನಿಮ್ಮ ಪಾಲಿಗೆ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಅವಧಿಯಲ್ಲಿ ನಿಮ್ಮ ಭಾಗ್ಯ ಸ್ಥಾನದಲ್ಲಿ ಶನಿ ವಿರಾಜಮಾನನಾಗಿದ್ದಾನೆ. ಹೀಗಾಗಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ನೌಕರವರ್ಗಕ್ಕೆ ಸೇರಿದ ಜನರಿಗೆ ಪ್ರಮೋಷನ್, ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಕಬ್ಬಿಣ, ಅಲ್ಯೂಮಿನಿಯಂ, ಸ್ಟೀಲ್, ಷೇರು ಮಾರುಕಟ್ಟೆಗೆ ಸಂಬಂಧಿಸ ಕೆಲಸದಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ಸಿಗಲಿದೆ. ಉದ್ಯಮಿಗಳಿಗೂ ಕೂಡ ಇದರಿಂದ ಭಾರಿ ಲಾಭ ಸಿಗಲಿದೆ.
ಮಕರ ರಾಶಿ: ಶನಿಯ ವರ್ಗೊತ್ತಮ ಸ್ಥಿತಿ ಮಕರ ಜಾತಕದವರಿಗೂ ಕೂಡ ಶುಭ ಫಲಗಳನ್ನು ನೀಡಲಿದೆ. ಏಕೆಂದರೆ, ನಿಮ್ಮ ನವಾಂಶ ಜಾತಕದಲ್ಲಿ ಶಶ ರಾಜಪುರುಷ ಯೋಗ ನಿರ್ಮಾಣಗೊಳ್ಳುತ್ತಿದೆ. ಇನ್ನೊಂದೆಡೆ ನಿಮ್ಮ ಜನ್ಮ ಜಾತಕದಲ್ಲಿ ಶನಿ ಧನ ಅಂದರೆ ಆರ್ಥಿಕ ಭಾವದಲ್ಲಿ ಕುಳಿತುಕೊಂಡಿದ್ದಾನೆ. ಇದರಿಂದ ನಿಮಗೆ ಸಕಲ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ನೌಕರವರ್ಗದ ಜನರಿಗೆ ಪ್ರಮೋಷನ್-ಇಂಕ್ರಿಮೆಂಟ್ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಘನತೆ-ಗೌರವ ಪ್ರಾಪ್ತಿಯಾಗಿ, ಆಕಸ್ಮಿಕ ಧನಲಾಭವಾಗುವ ಬಲವಾದ ಸಾಧ್ಯತೆಗಳಿವೆ.
ತುಲಾ ರಾಶಿ: ಶನಿ ವರ್ಗೊತ್ತಮನಾಗುವುದು ತುಲಾ ರಾಶಿಯ ಜಾತಕದವರಿಗೂ ಕೂಡ ಸಾಕಷ್ಟು ಅನುಕೋಲಕರ ಸಾಬೀತಾಗಲಿದೆ. ಹಾಗೆ ನೋಡಿದರೆ ನಿಮ್ಮ ರಾಶಿಗೆ ಶುಕ್ರ ರಾಷ್ಯಾಧಿಪನಾಗಿದ್ದು, ಶನಿ ಹಾಗೂ ಶುಕ್ರನ ನಡುವೆ ಸ್ನೇಹ ಭಾವದ ಸಂಬಂಧವಿದೆ. ಇನ್ನೊಂದೆಡೆ ನವಾಂಶ ಜಾತಕದಲ್ಲಿ ಚತುರ್ಥ ಭಾವದಲ್ಲಿ ಶನಿ ತನ್ನದೇ ಆದ ಮನೆಯಲ್ಲಿದ್ದು, ಆತನ ಉಚ್ಛ ದೃಷ್ಟಿ ನಿಮ್ಮ ಶರೀರ ಭಾವದ ಮೇಲೆ ಬೀಳುತ್ತಿದೆ. ಹೀಗಾಗಿ ಹೊಸ ವ್ಯಕ್ತಿಗಳ ಪರಿಚಯ ಹೆಚ್ಚಾಗಲಿದೆ. ನಿಮ್ಮ ಕಾರ್ಯಶೈಲಿಯಲ್ಲಿ ಹೊಸ ಹುರುಪು-ಹೊಳಪು ಎರಡೂ ಕಾಣಿಸಿಕೊಳ್ಳಲಿದೆ. ಇದರ ಜೊತೆಗೆ ನಿಮ್ಮ ವ್ಯಕ್ತಿತ್ವದಲ್ಲಿಯೂ ಕೂಡ ಅಪಾರ ಬದಲಾವಣೆ ಕಂಡು ಬರಲಿದೆ. ವಕೀಲಿ ವೃತ್ತಿಗೆ ಸಂಬಂಧಿಸಿದ ಜನರಿಗೆ ಈ ಕಾಲ ಅತ್ಯುತ್ತಮ ಸಾಬೀತಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)