ಶೀಘ್ರದಲ್ಲಿಯೇ ಕರ್ಕ ರಾಶಿಯಲ್ಲಿ ವೈಭವದಾತನ ಉದಯ, ಶುಕ್ರದೆಸೆಯಿಂದ ಈ ರಾಶಿಗಳ ಜನರ ಮೇಲೆ ಹಣದ ಸುರಿಮಳೆ!
ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ದೈತ್ಯರ ಗುರು ಎಂದು ಭಾವಿಸಲಾಗಿದೆ. ಶುಕ್ರ ವೈಭವ ಹಾಗೂ ಐಶ್ವರ್ಯಕಾರಕ ಗ್ರಹ ಎಂದೂ ಕೂಡ ಭಾವಿಸಲಾಗುತ್ತದೆ (Spiritual News In Kannada). ಹೀಗಿರುವಾಗ ಶೀಘ್ರದಲ್ಲಿಯೇ ಕರ್ಕ ರಾಶಿಯಲ್ಲಿ ಶುಕ್ರನ ಉದಯ ನೆರವೇರಲಿದ್ದು, ಇದು ಮೂರು ರಾಶಿಗಳ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನೀಡಿ ಅಪಾರ ಧನ-ಸಂಪತ್ತನ್ನು ಕರುಣಿಸಲಿದೆ.
ವೃಷಭ ರಾಶಿ: ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಶುಕ್ರನ ಉದಯ ನೆರವೇರುತ್ತಿದೆ. ಇದರಿಂದ ನಿಮ್ಮ ಧೈರ್ಯ-ಸಾಹಸ-ಪರಾಕ್ರಮ ಹೆಚ್ಚಾಗಲಿದೆ. ಆರ್ಥಿಕ ದೃಷ್ಟಿಯಿಂದ ಈ ಉದಯ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕವಾಗಿರಲಿದೆ. ಇನ್ನೊಂದೆಡೆ ಶುಕ್ರ ನಿಮ್ಮ ಜಾತಕದ ಲಗ್ನ ಹಾಗೂ ಷಷ್ಟಮ ಭಾವಕ್ಕೆ ಅಧಿಪತಿಯಾಗಿರುವ ಕಾರಣ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹುರುಪು ಚೈತನ್ಯ ಕಾಣಿಸಿಕೊಳ್ಳಲಿದೆ. ವಿದೇಶ ವ್ಯಾಪಾರ ಸಂಬಂಧ ಹೊಂದಿದವರಿಗೆ ಭಾರಿ ಲಾಭ ಸಿಗಲಿದೆ.
ಕುಂಭ ರಾಶಿ: ಕುಂಭ ರಾಶಿಯವರ ಗೋಚರ ಜಾತಕದ ಆರನೇ ಮನೆಯಲ್ಲಿ ಶುಕ್ರನ ಈ ಉದಯ ನೆರವೇರುತ್ತಿದೆ. ಹೀಗಾಗಿ ಇದು ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ಇನ್ನೊಂದೆಡೆ ಶುಕ್ರ ನಿಮ್ಮ ಜಾತಕದ ನಾಲ್ಕನೇ ಹಾಗೂ ಒಂಬತ್ತನೇ ಮನೆಗೆ ಅಧಿಪತಿ ಕೂಡ ಹೌದು. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಎಲ್ಲಾ ರೀತಿಯ ಭೌತಿಕ ಸುಖಗಳು ಪಾಪ್ರ್ತಿಯಾಗಲಿವೆ. ವಾಹನ-ಆಸ್ತಿಪಾಸ್ತಿ ಖರೀದಿಸುವಿರಿ. ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಲಿವೆ. ವಿದೇಶ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ.
ಕನ್ಯಾರಾಶಿ: ನಿಮ್ಮ ಗೋಚರ ಜಾತಕದ ಆದಾಯ ಹಾಗೂ ಲಾಭ ಸ್ಥಾನದಲ್ಲಿ ಶುಕ್ರನ ಈ ಉದಯ ನೆರವೇರುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೀವು ಗಮನಿಸುವಿರಿ. ವ್ಯಾಪಾರದಲ್ಲಿಯೂ ಕೂಡ ಉತ್ತಮ ಧನಲಾಭವಾಗಲಿದೆ. ಹೊಸ ಡೀಲ್ ಗಳನ್ನು ಮಾಡಿಕೊಳ್ಳುವಿರಿ. ಇನ್ನೊಂದೆಡೆ ಕೆಲವರಿಗೆ ಪಿತ್ರಾರ್ಜಿತ ಆಸ್ತಿಯಿಂದ ಲಾಭ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)