ಕೆಲವೇ ಗಂಟೆಗಳನ್ನು ಶುಕ್ರನ ವಕ್ರನಡೆ ಆರಂಭ, ಧನದ ಅಧಿದೇವತೆ ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಧನವೃಷ್ಟಿ!
ಜೋತಿಷ್ಯ ಶಾಸ್ತ್ರದ ಪ್ರಕಾರ ಧನ-ವೈಭವ ಕರುಣಿಸುವಾತ ಶುಕ್ರ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ. ಅಸ್ತ ಭಾವದಲ್ಲಿ ಶುಕ್ರನ ಈ ವಕ್ರ ನಡೆ ಹಲವು ರಾಶಿಗಳ ಜಾತಕದವರಿಗೆ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಶುಕ್ರನ ಈ ವಕ್ರ ನಡೆ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಆಕಷ್ಮಿಕ ಧನಲಾಭದ ಜೊತೆಗೆ ಸಾಕಷ್ಟು ಉನ್ನತಿಯನ್ನು ಕರುಣಿಸಲಿದೆ.ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಕರ್ಕ ರಾಶಿ: ಮೊದಲನೆಯದಾಗಿ ಹೇಳುವುದಾದರೆ, ಕರ್ಕ ರಾಶಿಯಲ್ಲಿಯೇ ಶುಕ್ರ ತನ್ನ ವಕ್ರನಡೆಯನ್ನು ಆರಂಭಿಸಲಿದ್ದಾನೆ. ಆತ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ವಕ್ರನಾಗುತ್ತಿದ್ದಾನೆ. ಇದಲ್ಲದೆ ಆತ ನಿಮ್ಮ ಗೋಚರ ಜಾತಕದ ಚತುರ್ಥ ಹಾಗೂ ಆದಾಯ ಭಾವಕ್ಕೆ ಅಧಿಪತಿ ಕೂಡ ಹೌದು, ಹೀಗಾಗಿ ಶುಕ್ರನ ಈ ವಕ್ರನಡೆ ನಿಮ್ಮ ಪಾಲಿಗೆ ಸಾಕಷ್ಟು ಶುಭ ಫಲಿತಾಂಶಗಳನ್ನು ದಯಪಾಲಿಸಲಿದೆ. ಈ ಅವಧಿಯಲ್ಲಿ ನಿಮಗೆ ಎಲ್ಲಾ ರೀತಿಯ ಭೌತಿಕ ಶುಖಗಳು ಪ್ರಾಪ್ತಿಯಾಗಲಿವೆ. ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ವಾಹನ, ಆಸ್ತಿಪಾಸ್ತಿ ಇತ್ಯಾದಿಗಳನ್ನು ನೀವು ಖರೀದಿಸಬಹುದು. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವಾಗುವ ಸಾಧ್ಯತೆ ಇದೆ. ಹೊಸ ಹೊಸ ಮೂಲಗಳಿಂದ ಹಣ ಬರಲಿದೆ ವಿವಾಹಿತರ ವೈವಾಹಿಕ ಜೀವನ ಈ ಅವಧಿಯಲ್ಲಿ ಉತ್ತಮವಾಗಿರಲಿದೆ.
ತುಲಾ ರಾಶಿ: ಶುಕ್ರ ನಿಮ್ಮ ರಾಶಿಗೆ ರಾಶ್ಯಾಧಿಪತಿಯಾಗಿದ್ದಾನೆ ಹಾಗೂ ಆತ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ತನ್ನ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಹೀಗಾಗಿ ಶುಕ್ರನ ಈ ವಕ್ರ ನಡೆ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸು ಸಿಗುವ ಸಾಧ್ಯತೆ ಇದೆ. ಕಲೆ, ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಖ್ಯಾತಿ ಹೆಚ್ಚಾಗಿ ಅದರಿಂದ ನಿಮಗೆ ಲಾಭ ಕೂಡ ಉಂಟಾಗಲಿದೆ. ವ್ಯಾಪಾರ ವರ್ಗದ ಜನರಿಗೆ ಒಳ್ಳೆಯ ಆರ್ಡರ್ ಸಿಗುವ ಸಾಧ್ಯತೆ ಇದೆ. ಹೊಸ ಕೆಲಸ ಆರಂಭಿಸಲು ಇದು ಸಕಾಲ ಎಂದರೆ ತಪ್ಪಾಗಲಾರದು.
ಮೀನ ರಾಶಿ: ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಶುಕ್ರನ ಈ ವಕ್ರನಡೆ ಆರಂಭವಾಗಲಿದೆ. ಹೀಗಾಗಿ ಇದು ನಿಮ್ಮ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ಇನ್ನೊಂದೆಡೆ ಆತ ನಿಮ್ಮ ಗೋಚರ ಜಾತಕದ ತೃತೀಯ ಹಾಗೂ ಅಷ್ಟಮ ಭಾವಕ್ಕೆ ಅಧಿಪತಿ ಕೂಡ ಹೌದು, ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮ ಎರಡೂ ಹೆಚ್ಚಾಗಲಿವೆ. ವಿದೇಶದಿಂದ ನಿಮಗೆ ಹೆಚ್ಚಿನ ಲಾಭ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಧನಸಂಪತ್ತು ಹೆಚ್ಚಿಸುವ ಉತ್ತಮ ಅವಕಾಶಗಳು ನಿಮಗೆ ಒದಗಿಬರಲಿವೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು. ಷೇರುಪೇಟೆ, ಲಾಟರಿ ವ್ಯವಹಾರಗಳಲ್ಲಿ ಸಾಕಷ್ಟು ಲಾಭ ನಿಮ್ಮದಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)