SPLENDOR+ BS6 ಹೊಸ ಮಾಡೆಲ್ ಲಾಂಚ್ , ವೈಶಿಷ್ಟ್ಯಗಳೇನು ತಿಳಿಯಿರಿ

Sun, 14 Mar 2021-4:08 pm,

SPLENDOR + BS6 ಅನ್ನು 97.2 ಸಿಸಿ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಬ್ರೇಕ್ ಡ್ರಮ್‌ಗಳು 130 ಎಂಎಂನದ್ದಾಗಿದೆ. ಅಲ್ಲದೆ ಟ್ಯೂಬ್‌ಲೆಸ್ ಟೈರ್‌ಗಳನ್ನು  ಒದಗಿಸಲಾಗಿದೆ.  

ಕಿಕ್ ಮತ್ತು ಸೆಲ್ಫ್ ಸ್ಟಾರ್ಟ್ ಎರಡೂ ಆವೃತ್ತಿಗಳಲ್ಲಿ SPLENDOR + BS6 ಅನ್ನು ಪರಿಚಯಿಸಲಾಗಿದೆ. ಕಿಕ್ ಸ್ಟಾರ್ಟ್ SPLENDOR + BS6 ಸುಮಾರು 110 ಕೆಜಿ ತೂಕವಿದ್ದರೆ, ಸೆಲ್ಫ್ ಸ್ಟಾರ್ಟ್ ಬೈಕ್ ನ ತೂಕವು ಸುಮಾರು 112 ಕೆಜಿ ಯಷ್ಟಾಗಿದೆ.   

SPLENDOR + BS6 ಅನ್ನು ಸಮಯಕ್ಕನುಗುಣವಾಗಿ ಅಗತ್ಯಕ್ಕನುಗುಣವಾಗಿ ಅತ್ಯುತ್ತಮ ತಂತ್ರಜ್ಞಾನದೊಂದಿಗೆ ರಚಿಸಲಾಗಿದೆ. ಇನ್ನು ಬೆಲೆಯೂ ದುಬಾರಿಯಾಗಿಲ್ಲ ಎನ್ನಲಾಗಿದೆ. ದೆಹಲಿಯಲ್ಲಿ KICK START DRUM BRAKE ALLOY WHEEL-FI ಎಕ್ಸ್‌ಶೋರೂಂ ಬೆಲೆ 61,785 ರೂ ಮತ್ತು SELF START DRUM BRAKE ALLOY WHEEL-FI ಬೆಲೆ 64,085 ರೂ ಆಗಿದೆ.

SPLENDOR + BS6 ನ ಹೊಸ ಮಾದರಿಯು 9.8 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. SPLENDOR + BS6 ಹಳೆಯ SPLENDOR ನಂತೆ ಅತ್ಯುತ್ತಮ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 

ಭಾರತದ ಹೀರೋ ಮತ್ತು ಜಪಾನ್‌ನ ಹೋಂಡಾ ಕಂಪನಿ ಜಂಟಿಯಾಗಿ SPLENDOR ಪ್ರೊಡಕ್ಷನ್ ಶುರು ಮಾಡಿತ್ತು. . 2010 ರ ನಂತರ, ಹೀರೋ ಮತ್ತು ಹೋಂಡಾ ಕಂಪನಿ ಪ್ರತ್ಯೇಕಗೊಂಡವು. ನಂತರ ಕೂಡಾ SPLENDOR ನ ಕ್ರೇಜ್ ಮಾತ್ರ ಕಡಿಮೆಯಾಗಲಿಲ್ಲ.  SPLENDOR ನ ಲ್ಲಾ ಶ್ರೇಣಿಯ ಬೈಕ್ ಗಳನ್ನು ಮೊದಲಿನಂತೆಯೇ ಜನ ಷ್ಟಪಡುತ್ತಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link