ದೀಪಾವಳಿ ಸಂಜೆ ಈ ಜೀವಿಗಳು ಕಾಣಿಸಿಕೊಂಡ್ರೆ ಲಕ್ಷ್ಮಿ ಆಗಮನದ ಸಂಕೇತ, ಆರ್ಥಿಕ ಸಮೃದ್ಧಿ, ಭಾರೀ ಅದೃಷ್ಟ
ದೀಪಾವಳಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ದೀಪಾವಳಿಯಲ್ಲಿ ಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ ಎಂಬ ನಂಬಿಕೆಯಿದೆ.
ದೀಪಾವಳಿಯ ಸಂಜೆ ಕೆಲವು ಜೀವಿಗಳ ಗೋಚರವು ಮನೆಯಲ್ಲಿ ಲಕ್ಷ್ಮಿ ಆಗಮನದ ಸಂಕೇತವನ್ನು ನೀಡುತ್ತದೆ. ಜೀವನದಲ್ಲಿ ಭಾರೀ ಅದೃಷ್ಟವನ್ನು ಕರುಣಿಸುವ ಆ ಜೀವಿಗಳು ಯಾವುವೆಂದರೆ...
ದೀಪಾವಳಿಯ ಸಂಜೆ ಮನೆಯಲ್ಲಿ ಹಲ್ಲಿ ಗೋಚರಿಸಿದರೆ ಲಕ್ಷ್ಮಿ ಕೃಪೆಗೆ ನೀವು ಪಾತ್ರರಾಗುವಿರಿ. ಮನೆಯಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ ಎಂಬುದರ ಸಂಕೇತವಾಗಿದೆ.
ಲಕ್ಷ್ಮಿಯ ವಾಹನ ಎಂದು ಪರಿಗಣಿಸಲಾಗಿರುವ ಗೂಬೆಯನ್ನು ದೀಪಾವಳಿಯ ರಾತ್ರಿ ಕಂಡರೆ ಮನೆಗೆ ಶೀಘ್ರದಲ್ಲೇ ಲಕ್ಷ್ಮಿ ಆಗಮನವಾಗಲಿದೆ ಎಂದರ್ಥ.
ದೀಪಾವಳಿಯಂದು ಮನೆಯಲ್ಲಿ ಇಲಿ ಅಥವಾ ಹೆಗ್ಗಣವನ್ನು ಕಂಡರೆ ಹಣದ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ ಎಂಬುದರ ಸೂಚನೆಯಾಗಿದೆ.
ದೀಪಾವಳಿಯಲ್ಲಿ ಸಂಜೆ ವೇಳೆ ಬೆಕ್ಕನ್ನು ಮನೆಯಲ್ಲಿ ಕಂಡರೆ ಸಂಪತ್ತು ಹೆಚ್ಚಾಗಲಿದೆ ಎಂಬುದರ ಸಂಕೇತ.
ಲಕ್ಷ್ಮಿಯ ಸ್ವರೂಪವೇ ಆಗಿರುವ ಗೋಮಾತೆಯನ್ನು ಮನೆಯ ಮುಂದೆ ಕಂಡರೆ ಲಕ್ಷ್ಮೀದೇವಿ ಮನೆಗೆ ಪ್ರವೇಶಿಸಲಿದ್ದಾಳೆ. ಕಷ್ಟಗಳೆಲ್ಲಾ ಕಳೆದು ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗಲಿದೆ ಎಂದರ್ಥ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.