ಶ್ರಾವಣ ಮಾಸದಲ್ಲಿ ಈ ರಾಶಿಗಳ ಮೇಲಿರಲಿದೆ ಶಿವನ ಶ್ರೀರಕ್ಷೆ: ರಾಜವೈಭೋಗ ಸಿದ್ಧಿ-ಸಂಪತ್ತಿನಿಂದ ತಿಜೋರಿ ತುಂಬುವುದು!
ಭಾರತದ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಾದ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ತಮಿಳುನಾಡು ಭಾಗಗಳಲ್ಲಿ ಈ ಬಾರಿ ಶ್ರಾವಣ ಮಾಸವು 18 ಜುಲೈ 2023 ರಿಂದ ಪ್ರಾರಂಭವಾಗಿ, 15 ಸೆಪ್ಟೆಂಬರ್ 2023 ರಂದು ಕೊನೆಗೊಳ್ಳುತ್ತದೆ
ಈ ಬಾರಿ ಅಧಿಕ ಮಾಸವಾದ್ದರಿಂದ ಶ್ರಾವಣ ಮಾಸವು ಎರಡು ತಿಂಗಳುಗಳ ಕಾಲ ಇರಲಿದೆ. ಇನ್ನು ಈ ಸಂದರ್ಭದಲ್ಲಿ ಅನೇಕರು ಮಾಂಸಾಹಾರ ತ್ಯಜಿಸುವುದನ್ನು ಕಾಣಬಹುದು. ಶ್ರಾವಣ ಮಾಸದ ಜೊತೆಗೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ, ಗ್ರಹಗಳ ಸ್ಥಿತಿಯು ಅಪರೂಪದ ಯೋಗವನ್ನು ಉಂಟುಮಾಡುತ್ತದೆ. ಈ ಯೋಗವು ನಿರ್ದಿಷ್ಟ ರಾಶಿಗಳ ಮೇಲೆ ಮಂಗಳಕರ ಪ್ರಭಾವವನ್ನು ಬೀರುತ್ತದೆ. ಅಷ್ಟೇ ಅಲ್ಲದೆ, ಈ ಜನರು ಶಿವನ ಕೃಪೆಯಿಂದ ಸಾಕಷ್ಟು ಹಣ, ಯಶಸ್ಸು ಮತ್ತು ಸಂತೋಷವನ್ನು ಪಡೆಯುತ್ತಾರೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ.
ಮೇಷ ರಾಶಿ: ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯು ಶಿವನ ನೆಚ್ಚಿನ ರಾಶಿಗಳಲ್ಲಿ ಒಂದಾಗಿದೆ. ಈ ಬಾರಿಯ ಶ್ರಾವಣ ಮಾಸದಲ್ಲಿ ರೂಪುಗೊಳ್ಳುತ್ತಿರುವ ಅಪರೂಪದ ಯೋಗಗಳು ಮೇಷ ರಾಶಿಯವರಿಗೆ ಅಪಾರ ಸಂತೋಷ ಮತ್ತು ಸಂಪತ್ತನ್ನು ನೀಡಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸಹ ಈ ಬಾರಿಯ ಶ್ರಾವಣ ಮಾಸವು ಅದೃಷ್ಟವನ್ನು ನೀಡಲಿದೆ. ಕೆಲಸದ ಸ್ಥಳದಲ್ಲಿ ಖ್ಯಾತಿ ಗಳಿಸುವರು. ಧನಲಾಭವಾಗಲಿದೆ.
ಧನು ರಾಶಿ - ಧನು ರಾಶಿಯವರಿಗೆ ಶ್ರಾವಣ ಮಾಸವು ವೃತ್ತಿ ಜೀವನದಲ್ಲಿ ಲಾಭವನ್ನು ನೀಡುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ವ್ಯಾಪಾರ ವರ್ಗ ಲಾಭ ಪಡೆದು ವಿದೇಶ ಪ್ರವಾಸಕ್ಕೆ ಹೋಗಬಹುದು.
ತುಲಾ - ತುಲಾ ರಾಶಿಯವರಿಗೆ ಶ್ರಾವಣ ಮಾಸವು ಉತ್ತಮ ದಿನಗಳನ್ನು ತರಲಿದೆ. ಸಂಬಳದಲ್ಲಿ ಗಣನೀಯ ಹೆಚ್ಚಳವಾಗಬಹುದು. ಜೀವನದಲ್ಲಿ ಅನೇಕ ಆಹ್ಲಾದಕರ ಬದಲಾವಣೆಗಳು ಬರುತ್ತವೆ.
ವೃಶ್ಚಿಕ ರಾಶಿ - ವೃಶ್ಚಿಕ ರಾಶಿಯ ಜನರು ಶ್ರಾವಣ ಮಾಸದಲ್ಲಿ ವಿಶೇಷ ಲಾಭಗಳನ್ನು ಪಡೆಯಬಹುದು. ಹೊಸ ಜವಾಬ್ದಾರಿಯನ್ನು ಹೆಗಲೇರಲಿದೆ. ಆರ್ಥಿಕವಾಗಿ ಸದೃಢರಾಗಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)