ಸೀರೆಯುಟ್ಟ ಶ್ರೀಲೀಲಾ... ಇದಲ್ಲವೇ ಸೌಂದರ್ಯ ಅಂದ್ರೆ..! ಫೊಟೋಸ್ ಇಲ್ಲಿವೆ
ಕನ್ನಡದ ಕಿಸ್ ಚಿತ್ರದ ಮೂಲಕ ನಟಿ ಶ್ರೀಲೀಲಾ ಸಿನಿರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರದಲ್ಲೇ ಯಶಸ್ಸು ಕಂಡ ನಟಿ, ರಾಘವೇಂದ್ರ ರಾವ್ ಅವರ ನಿರ್ದೇಶನ ಪೆಲ್ಲಿ ಸಂದಡಿ ಮೂಲಕ ಟಾಲಿವುಡ್‌ಗೆ ಕಾಲಿಟ್ಟರು.
ನಟ ಶ್ರೀಕಾಂತ್ ಅವರ ಮಗ ರೋಷನ್ ನಟನೆಯ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ತೆಲುಗು ಪ್ರೇಕ್ಷಕರ ಮನ ಗೆದ್ದಳು ಶ್ರೀಲೀಲಾ.. ಆ ನಂತರ ರವಿತೇಜ ನಟನೆಯ ಧಮಾಕಾ ಚಿತ್ರದ ಮೂಲಕ ಸೆನ್ಸೇಷನಲ್ ಆದರು.
ಇತ್ತೀಚಿಗೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟರಿಂದ ಹಿಡಿದು, ಹಿರಿಯ ಹೀರೋಗಳ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ಈ ಕನ್ನಡ ಸುಂದರಿಗೆ ಸಖತ್ ಡಿಮ್ಯಾಂಡ್ ಇದೆ.
ತೆಲುಗು ಚಿತ್ರಗಳಲ್ಲಿ ಸೆನ್ಸೇಷನಲ್ ಹೀರೋಯಿನ್ ಎಂದು ಹೆಸರು ಗಳಿಸಿರುವ ಶ್ರೀ ಲೀಲಾ ಸದ್ಯದಲ್ಲೇ ತಮಿಳು ಚಿತ್ರಗಳಿಗೂ ಎಂಟ್ರಿ ಕೊಡಲಿದ್ದಾರೆ. ಅಜಿತ್ ಅಭಿನಯದ ಗುಡ್ ಬ್ಯಾಡ್ ಆಗ್ಲಿ ಸಿನಿಮಾದಲ್ಲಿ ಶ್ರೀಗಳಿಗೆ ನಾಯಕಿ ಪಾತ್ರ ಸಿಕ್ಕಿದೆ ಎಂಬ ವರದಿಗಳಿವೆ.
ಸಿನಿಮಾಗಳ ಹೊರತಾಗಿ, ಶ್ರೀಲೀಲಾ ಪ್ರಸ್ತುತ ತಮ್ಮ ಇನ್‌ಸ್ಟಾಗ್ರಾಮ್ ಫೋಟೋಗಳ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ. ಅದರಲ್ಲೂ ಸೀರೆಯಲ್ಲಿ ಈ ಸುಂದರಿ ಶೇರ್ ಮಾಡಿರುವ ಫೋಟೋಗಳು ಎಲ್ಲರ ಮನಗೆದ್ದಿವೆ.