Photo Gallery: ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಸಂಭ್ರಮ
ಪುಣ್ಯಕ್ಷೇತ್ರ ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ಸಂಭ್ರಮ ಮನೆಮಾಡಿದೆ. ಶ್ರೀಮಠದಲ್ಲಿ ಇಂದು ರಾಯರ ಮಧ್ಯಾರಾಧನೆ ನಡೆಯಲಿದೆ. ಮಧ್ಯಾರಾಧನೆ ನಿಮಿತ್ಯ ಶ್ರೀಮಠದಲ್ಲಿ ವಿಶೇಷ ಪೂಜೆ ಆರಂಭವಾಗಲಿದೆ. ನಿರ್ಮಾಲ್ಯ ವಿಸರ್ಜನೆ, ಉತ್ಸವ, ರಾಯರ ಪಾದಪೂಜೆ ನಡೆಯಲಿದೆ.
ರಾಯರ 351ನೇ ಆರಾಧನಾ ಸಂಭ್ರಮ ಹಿನ್ನೆಲೆ ತಿರುಪತಿಯಿಂದ ಮಂತ್ರಾಲಯಕ್ಕೆ ಶೇಷವಸ್ತ್ರ ಆಗಮಿಸಲಿದೆ. ಶ್ರೀಮಠ ಮುಖ್ಯ ದ್ವಾರದಿಂದ ವಾದ್ಯ ಮೆರವಣಿಗೆಯೊಂದಿಗೆ ಶೇಷವಸ್ತ್ರಕ್ಕೆ ಸ್ವಾಗತ ಕೊರಲಾಗುವುದು. ಪ್ರಾಂಗಣದಲ್ಲಿ ಶೇಷವಸ್ತ್ರದೊಂದಿಗೆ ಪ್ರದಕ್ಷಿಣೆ ನಡೆಯಲಿದೆ. ಆ ಬಳಿಕ ರಾಯರ ಮೂಲ ಬೃಂದಾವನಕ್ಕೆ ಶೇಷವಸ್ತ್ರ ಸಮರ್ಪಣೆಯಾಗಲಿದೆ.
ಮಂಗಳಾರತಿ ನಂತರ ಉಯ್ಯಾಲೆ ವೇದಿಕೆ ಬಳಿ ಟಿಟಿಡಿ ಸದಸ್ಯರಿಗೆ ಶ್ರೀಮಠದಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ, ಪ್ರಾತಃ ಕಾಲದಲ್ಲಿ ಸುವರ್ಣ ರಥೋತ್ಸವ ನಡೆಯಲಿದೆ. ಮೂಲರಾಮ ದೇವರ ಪೂಜೆ ಬಳಿಕ ಶ್ರೀಮಠದಿಂದ ಪ್ರಸಾದ ವಿತರಣೆ ನಡೆಯಲಿದೆ.
ಸಂಜೆ ಯೋಗಿಂದ್ರ ಮಂಟಪದಲ್ಲಿ ಅನುಗ್ರಹ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಶ್ರೀಮಠದ ಪ್ರಾಂಗಣದಲ್ಲಿ ವಿಶೇಷ ಉತ್ಸವಗಳು, ನವರತ್ನ ರಥೋತ್ಸವ ಜೊತೆಗೆ ಪಲ್ಲಕ್ಕಿ ವಾಹನ ಉತ್ಸವ ಸಹ ನಡೆಯಲಿದೆ.
ರಾಯರ 351ನೇ ಆರಾಧನಾ ಸಂಭ್ರಮ ಹಿನ್ನೆಲೆ ಇಂದು ಶ್ರೀಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಲಿದ್ದಾರೆ. ಇಂದು ಮಂತ್ರಾಲಯಕ್ಕೆ ಲಕ್ಷಾಂತರ ಭಕ್ತಜನಸಾಗರ ಹರಿದು ಬರಲಿದೆ. ಹೀಗಾಗಿ ಶ್ರೀಮಠದಿಂದ ಭಕ್ತರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ.