ಸೂಪರ್‌ಸ್ಟಾರ್‌ ಜೊತೆ ಶ್ರೀದೇವಿಯ ಮದುವೆ ಫಿಕ್ಸ್‌ ಆಗಿತ್ತು ..!! ಆದರೆ ನಟಿಯ ಜೀವನದಲ್ಲಿ ಬೋನಿ ಕಪೂರ್‌ ಸಡನ್‌ ಎಂಟ್ರಿ ಕೊಟಿದ್ದು ಹೇಗೆ..?

Mon, 04 Nov 2024-7:23 am,

Sridevi: ನಟಿ ಶ್ರೀದೇವಿ ಅವರು ಬೋನಿ ಕಪೂರ್‌ ಅವರನ್ನು ಮದುವೆಯಾಗಿದ್ದು ಗೊತ್ತೆ ಇದೆ, ಆದರೆ ಬೋನಿ ಕಪೂರ್‌ ಅವರಿಗೂ ಮುಂಚೆ ಈ ಸ್ಟಾರ್‌ ನಟನ ಜೊತೆ ಮದುವೆ ಮಾಡಲು ನಟಿ ಶ್ರೀದೇವಿ ಅವರ ತಾಯಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರಂತೆ, ಹಾಗಾದರೆ ಆ ಸ್ಟಾರ್‌ ನಟ ಯಾರು ತಿಳಿಯಲು ಮುಂದೆ ಓದಿ...  

ಟಾಲಿವುಡ್‌, ಬಾಲಿವುಡ್‌ ಅಷ್ಟೆ ಅಲ್ಲದೆ ಸೌತ್‌ ಫಿಲಿಂ ಇಂಡಸ್ಟ್ರಿಯನ್ನು ಆಳಿ ಮೆರೆದ ಸ್ಟಾರ್‌ ಹೀರೋಯಿನ್‌ಗಳಲ್ಲಿ ನಟಿ ಶ್ರೀದೇವಿ ಕೂಡ ಒಬ್ಬರು.   

ಶ್ರೀದೇವಿ ಬಹುತೇಕ ಎಲ್ಲಾ ಭಾರತೀಯ ಸೂಪರ್ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ಮುಂಬೈನಲ್ಲಿ ನೆಲೆಸಿದ ನಂತರ ಶ್ರೀದೇವಿ ಸ್ಟಾರ್ ನಿರ್ಮಾಪಕ ಬೋನಿ ಕಪೂರ್ ಅವರನ್ನು ಪ್ರೀತಿಸಿ ವಿವಾಹವಾದರು.   

ಅದಾಗಲೆ ಮದುವೆಯಾಗಿ ಒಂದು ಮಗವಿದ್ದ ಬೋನಿ ಕಪೂರ್‌ ಅವರನ್ನು ನಟಿ ಶ್ರೀದೇವಿ ಅವರು ಮದುವೆಯಾಗಲು ರೆಡಿಯಾಗಿದ್ದರು, ಮದುವೆಗೂ ಮುಂಚೆಯೇ ನಟಿ ಶ್ರೀದೇವಿ ಗರ್ಭಿಣಿಯಾಗಿದ್ದರು.   

ಶ್ರೀದೇವಿ ಅವರ ಮದುವೆಯ ಕುರಿತು ಅವ ತಾಯಿಯ ಯೋಚನೆಯೇ ಬೇರೆ ಇತ್ತು. ತಮಿಳಿನ ಸ್ಟಾರ್‌ ಹೀರೋ ಜೊತೆ ಶ್ರೀದೇವಿ ಮದುವೆ ಮಾಡಬೇಕೆಂದು ಅವರ ತಾಯಿ ಇಚ್ಛಿಸಿದ್ದರು. ಆದರೆ ಆ ಕನಸು ಇಡೇರಲೆ ಇಲ್ಲ.   

ನಟಿ ಶ್ರೀದೇವಿ ಹಾಗೂ ನಟ ರಜನಿಕಾಂತ್‌ ಅವರಿಗೆ ಒಳ್ಳೆ ಒಡನಾಟವಿತ್ತು, ರಜನಿಕಾಂತ್‌ ಉಷಾರು ತಪ್ಪಿದ ಕಾರಣಕ್ಕೆ ನಟಿ 7 ದಿನಗಳ ಕಾಲ ಉಪವಾಸ ಕೂಡ ಮಾಡಿದ್ದರು.  

ನಟ ರಜನಿಕಾಂತ್‌ ಅವರಿಗೂ ಕೂಡ ನಟಿ ಶ್ರೀದೇವಿಯವರನ್ನು ಮದುವೆಯಾಗಲು ತುಂಬಾ ಆಸೆ ಇತ್ತು. ಆದರೆ, ಇದ್ಯಾವುದು ಅಂದುಕೊಂಡಂತೆ ನಡೆಯಲೇ ಇಲ್ಲ.  

ನಟಿ ಶ್ರೀದೇವಿ ಹಾಗೂ ನಟ ರಜನಿಕಾಂತ್‌ ಅವರು ಮದುವೆಯಾಗುತ್ತಾರೆ ಎನ್ನುವ ಸುದ್ದಿ ಆಗಿನ ಕಾಲನದಲ್ಲಿ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿತ್ತು. ಆದರೆ ಮದುವೆಗೂ ಮುಂಚೆಯೆ ಗರ್ಭಿಣಿಯಾದ ಶ್ರೀದೇವಿ ಬೋನಿ ಕಪೂರ್‌ ಅವರೊಂದಿಗೆ ಮದುವೆಯಾಗಿದ್ದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link