ಶ್ರೀದೇವಿ ಜನ್ಮದಿನ

Mon, 13 Aug 2018-1:13 pm,

ಅದ್ಭುತ ನಟನೆಯಿಂದಾಗಿ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದ 'ಚಾಂದಿನಿ' ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳು ಮಾತ್ರ ನಮ್ಮಲ್ಲಿ ಅಚ್ಚಳಿಯದೆ ಉಳಿದಿದೆ. 54 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ ಶ್ರೀದೇವಿಯವರ 55 ನೇ ಜನ್ಮದಿನ ಇಂದು.

ಈ ವರ್ಷದ ಪ್ರಾರಂಭದಲ್ಲಿ ಅಂದರೆ ಫೆಬ್ರವರಿ 24 ರಂದು ನಾವು ಈ ಮಹಾನ್ ನಟಿಯನ್ನು ಕಳೆದುಕೊಂಡಿದ್ದೇವೆ. ಸೋದರಳಿಯ ಮದುವೆಗಾಗಿ ದುಬೈಗೆ ತೆರಳಿದ್ದ ಶ್ರೀದೇವಿ, ಅಲ್ಲಿ ಹೋಟೆಲ್ ನಲ್ಲಿ ಸ್ನಾನದ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟರು.

ಬಾಲ ಕಲಾವಿದೆಯಾಗಿ ತಮ್ಮ ನಾಲ್ಕನೇ ವಯಸ್ಸಿನಲ್ಲಿ ಶ್ರೀದೇವಿ ಅಭಿನಯಿಸಿದರು. ಭಾರತ ಚಲನಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರು. 

90ರ ದಶಕದಲ್ಲಿ ಬಹಳ ಬೇಡಿಕೆಯ ಹಾಗೂ ಜನಪ್ರಿಯ ನಟಿಯಾಗಿದ್ದವರು. ಕನ್ನಡ ಸಿನೆಮಾಗಳೂ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಶ್ರೀದೇವಿ ಅವರ ಅಭಿನಯಕ್ಕಾಗಿ ಮತ್ತು ಅವರ ಅತ್ಯುತ್ತಮ ನೃತ್ಯಕ್ಕಾಗಿ ನೆನಪಾಗುತ್ತಾರೆ.

2013 ರಲ್ಲಿ ಶ್ರೀದೇವಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಬಾಲ ಕಲಾವಿದರಾಗಿ, 1971 ರಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 'ಶಾದ್ಮಾ' ಚಿತ್ರಕ್ಕಾಗಿ ಮೊದಲ ಬಾರಿಗೆ ಶ್ರೀದೇವಿ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. ಅವರಿಗೆ ಐದು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ನೀಡಲಾಗಿದೆ.

70ರ ದಶಕದಲ್ಲಿ ಶ್ರೀದೇವಿ ಅವರ ತಮಿಳು ಚಿತ್ರಗಳನ್ನು ವೀಕ್ಷಿಸಿದ್ದ ಬೋನಿ ಕಪೂರ್ ಶ್ರೀದೇವಿ ಅವರನ್ನು ಪ್ರೀತಿಸಲು ಪ್ರಾರಂಭಿಸಿದರು. ಈ ಇಬ್ಬರ ಪ್ರೇಮ ಪಯಣ ಸೂಪರ್ ಹಿಟ್ ಚಿತ್ರ 'ಮಿಸ್ಟರ್ ಇಂಡಿಯಾ' ಸಮಯದಲ್ಲಿ ಪ್ರಾರಂಭವಾಯಿತು. 1993 ರಲ್ಲಿ, ಬೋನಿ ಕಪೂರ್ ಶ್ರೀದೇವಿಗೆ ಪ್ರೊಪೋಸ್ ಮಾಡಿದರು. ನಂತರ 1996 ರಲ್ಲಿ ಬೋನಿ ಕಪೂರ್-ಶ್ರೀದೇವಿ ವಿವಾಹವಾದರು.

ಮದುವೆಯಾದ 16 ವರ್ಷಗಳ ನಂತರ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೂಲಕ ಶ್ರೀದೇವಿ ಮತ್ತೊಮ್ಮೆ ಚಿತ್ರ ಜಗತ್ತಿಗೆ ಕಾಲಿಟ್ಟರು. 'ಇಂಗ್ಲಿಷ್ ವಿಂಗ್ಲಿಷ್' ನಂತರ ಅವರು 'ಮಾಮ್' ನಲ್ಲಿ ತಮ್ಮ ಅತ್ಯುತ್ತಮ ನಟನೆಯನ್ನು ಪರಿಚಯಿಸಿದರು. 'ಮಾಮ್' ಶ್ರೀದೇವಿಯ 300 ನೇ ಚಿತ್ರ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link