29 ಭಾರಿ ಸರ್ಜರಿ ಮಾಡಿಸಿಕೊಂಡಿದ್ದ ಶ್ರೀದೇವಿ..ಸಾಯುವ ಮುನ್ನ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಖ್ಯಾತ ನಟಿ..?

Sat, 24 Aug 2024-2:05 pm,

ತಮ್ಮ ಫಿಟ್ನೆಸ್‌ ಅಷ್ಟೆ ಅಲ್ಲ ತಮ್ಮ ಸೌಂದರ್ಯಕ್ಕೂ ಹೆಚ್ಚು ಆಧ್ಯತ ಕೊಡುವ ನಟಿಯರು ಇಂದಿಗೂ ಚಿತ್ರರಂಗದಲ್ಲಿದ್ದಾರೆ. ಹಾಗೆ ವಯಸ್ಸು ಹೆಚ್ಚಾಗುತ್ತಿದ್ದಂತೆ ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ನಟಿ ಸರ್ಜರಿಯ ಮೊರೆ ಹೋಗಿದ್ದರು. ಒಂದಲ್ಲ ಎರಡಲ್ಲ ಬರೋಬ್ಬರಿ 29 ಭಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಷ್ಟಕ್ಕೂ ಆ ನಟಿ ಬೇರಾರೂ ಅಲ್ಲ ಖ್ಯಾತ ನಟಿ ಶ್ರೀದೇವಿ.

ನಟಿ ಶ್ರೀದೇವಿಯ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಲಿ, ಒಂದಾನೊಂದು ಕಾಲದಲ್ಲಿ ತಮ್ಮ ನಟನೆಯಿಂದ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದಿಂದಲೂ ಸಿನಿಮಾ ಜಗತ್ತನ್ನು ಆಳಿದ ನಟಿ ಈಕೆ.  

ಆಗಿನ ಕಾಲಕ್ಕೆ ಸ್ಟಾರ್‌ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆದು ಸ್ಟಾರ್‌ ನಟರನ್ನೂ ಕೂಡ ಬೀಟ್‌ ಮಾಡಿದ್ದ ಈಕೆ ತನ್ನಸೌಂದರ್ಯ ಕಾಪಾಡಿಕೊಳ್ಳುವುದಕಾಗಿ ಬರೋಬ್ಬರಿ 29 ಭಾರಿ ಶಸ್ತ್ರ ಚಿಕಿತ್ಸೆಯ ಮೊರ ಹೋಗಿದ್ದಾರೆ.   

ತನ್ನ ಸೌಂದರ್ಯದಿಂದ ಇಂಡಸ್ಟ್ರಿಯನ್ನು ಆಳಿದ್ದ ನಟಿ ತಪ್ಪು ನಿರ್ಧಾರ ಕೈ ಗೊಂಡಿದ್ದರು. ಅದೊಂದು ನಿರ್ಧಾರ ಅವರ ಜೀವನವನ್ನೇ ಕೊನೆಗಳಿಸಿತು.  

ಅಷ್ಟಕ್ಕೂ ನಾವು ಮಾತನಾಡುತ್ತಿರುವುದು ನಟಿ ಶ್ರೀದೇವಿ ಅವರ ಬಗ್ಗೆ. ನಟಿ ಶ್ರೀದೇವಿ ಆಗಿನ ಕಾಲಕ್ಕೆ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರ ಹೃದಯ ಕದ್ದ ಸುಂದರಿ.  

ನಟಿ ಶ್ರೀದೇವಿ ಒಂದಲ್ಲ, ಎರಡಲ್ಲ, ಬರೋಬ್ಬರಿ 29 ಭಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳು ಸರ್ಜರಿ ಮೊರೆ ಹೋಗಿದ್ದಾರೆ.ಇತ್ತೀಚೆಗೆ ಶ್ರೀದೇವಿ ಅವರ ಹಳೆಯ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ಫೋಟೊದಲ್ಲಿ ನಟಿಯನ್ನು ಗುರುತಿಸುವುದು ಕೂಡ ಕಷ್ಟ.  

ಶ್ರೀದೇವಿ ತಮ್ಮ ಬಾಲಿವುಡ್ ವೃತ್ತಿಜೀವನದಲ್ಲಿ ಹಲವು ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತದೆ. ಆ ಹಳೆಯ ಚಿತ್ರಗಳಲ್ಲಿ ಒಂದು ಇತ್ತೀಚೆಗೆ ಹೆಚ್ಚು ವೈರಲ್ ಆಗುತ್ತಿದೆ, ಇದು ಅಭಿಮಾನಿಗಳಿಗೆ ಗುರುತಿಸಲು ತುಂಬಾ ಕಷ್ಟಕರವಾಗಿದೆ.  

ಶ್ರೀದೇವಿಗೆ ತನ್ನ ಸೌಂದರ್ಯದ ಬಗ್ಗೆ ತುಂಬಾ ಅರಿವಿತ್ತು, ಅವರು ಯಾವಾಗಲೂ ಯಂಗ್ ಆಗಿ ಮತ್ತು ಸುಂದರವಾಗಿ ಕಾಣಲು ಇದುವರೆಗೆ 29 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವರದಿಗಳನ್ನು ನಂಬುವುದಾದರೆ, ಶ್ರೀದೇವಿ ಸಾಯುವ ಮೊದಲು ತುಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.   

ಇದಲ್ಲದೆ ಸ್ಕಿನ್ ಸರ್ಜರಿ, ಸಿಲಿಕಾನ್ ಬ್ರೆಸ್ಟ್ ಕರೆಕ್ಷನ್, ಬೊಟಾಕ್ಸ್, ಬಾಡಿ ಟಕಿಂಗ್, ಫೇಸ್ ಲಿಫ್ಟ್ ಸರ್ಜರಿ ಮುಂತಾದ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಶ್ರೀದೇವಿ 28 ಫೆಬ್ರವರಿ 2018 ರಂದು ಇಹಲೋಕ ತ್ಯಜಿಸಿದರು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link