ಚಂದನ್‌ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ಗೆ ಸೃಜನ್‌ ಲೋಕೇಶ್‌ ಕಾರಣವಾದ್ರಾ?

Sat, 08 Jun 2024-2:29 pm,

ಚಂದನ್ ಶೆಟ್ಟಿ ನಿವೇದಿತಾ ಗೌಡ ಫ್ರೆಂಡ್ಲಿ ಡಿವೋರ್ಸ್‌ ಪಡೆದಾಗಿದೆ. ಬೆಂಗಳೂರು ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿದೆ. 

ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಶೇರ್‌ ಮಾಡಿದ್ದಾರೆ. 

ಚಂದನ್ ಶೆಟ್ಟಿ ನಿವೇದಿತಾ ದಾಂಪತ್ಯದಲ್ಲಿ ಬಿರುಕು ಮೂಡಲು ಸೃಜನ್‌ ಲೋಕೇಶ್‌ ಕಾರಣ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಶುರುವಾಗಿದೆ. 

ಸೃಜನ್ ಲೋಕೇಶ್‌ ಕಾರಣಕ್ಕೆ ಚಂದನ್ ನಿವೇದಿತಾ ದೂರವಾದರು ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

ಚಂದನ್ ಹಾಗೂ ನಿವೇದಿತಾ ಮಾಡಿರುವ ಡಿವೋರ್ಸ್ ಪೋಸ್ಟ್‌ ನ ಕಾಮೆಂಟ್ ಬಾಕ್ಸ್‌ನಲ್ಲಿ ಸಹ ಅನೇಕರು ಇದಕ್ಕೆ ಸೃಜನ್ ಲೋಕೇಶ್ ಕಾರಣ ಎಂಬಂತೆ ಕಾಮೆಂಟ್ ಮಾಡುತ್ತಿದ್ದಾರೆ.  

ಇನ್ನೂ ನಿವೇದಿತಾ ಹುಟ್ಟುಹಬ್ಬದ ದಿನ ಸೃಜನ್ ಲೋಕೇಶ್ ಪೋಸ್ಟ್‌ ಮಾಡಿದ ವೀಡಿಯೋ ಒಂದು ಭಾರೀ ವೈರಲ್‌ ಆಗಿದೆ. ಅದರಲ್ಲಿ ನಿವೇದಿತಾ ಜೊತೆಗೆ ಸೃಜನ್‌ ಇರುವ ಹಲವು ಫೋಟೋಗಳಿವೆ. 

ಈ ವಿಡಿಯೋ ವೈರಲ್ ಆಗಿದ್ದು, ಕಾಮೆಂಟ್ ಬಾಕ್ಸ್‌ನಲ್ಲಿ ಚಂದನ್‌ ಜೊತೆಗಿನ ಡಿವೋರ್ಸ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. 

ಚಂದನ್ ಹಾಗೂ ನಿವೇದಿತಾ ದೂರಾಗಲು ಸೃಜನ್ ಕಾರಣ ಎನ್ನುವಂತೆ ಟ್ರೋಲ್‌ ಮಾಡಲಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link