Photos: ಕಾಶ್ಮೀರದಲ್ಲಿ ಮಿಗ್ ಫೈಟರ್ ಜೆಟ್ ಪತನ
ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ವಾಯುಪಡೆಯ ಮಿಗ್-21 ಯುದ್ಧವಿಮಾನ ಇಂದು ಬೆಳಿಗ್ಗೆ ಪತನಗೊಂಡಿದೆ. ಶ್ರೀನಗರ ವಾಯುನೆಲೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನವು ಬಡಗಾಂ ಸಮೀಪ ಸ್ಫೋಟಗೊಂಡು, ಪತನಗೊಂಡಿದೆ.
ಬಡಗಾಂನ ಗರೆಂಡ್ ಕಲಾನ್ ಗ್ರಾಮದ ಬಳಿ ಮೈದಾನದಲ್ಲಿ ವಿಮಾನ ಪತನಗೊದ್ನಿದೆ. ಘಟನಾ ಸ್ಥಳದಿಂದ ಕಂಡು ಬಂದಿರುವ ಚಿತ್ರಗಳಲ್ಲಿ ವಿಮಾನದಲ್ಲಿ ಅಗ್ನಿ ಸಂಭವಿಸಿರುವುದನ್ನು ತೋರಿಸುತ್ತಿವೆ.
ಮಿಗ್ ಯುದ್ಧ ವಿಮಾನವು ಈ ಹಿಂದೆಯೂ ಹಲವು ಬಾರಿ ಪತನಗೊಂಡಿದೆ. ಕೆಲವು ತಿಂಗಳುಗಳ ಹಿಂದೆ ಮಿಗ್ ಯುದ್ಧ ವಿಮಾನಗಳು ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಪತನಗೊಂಡಿದ್ದವು.