Stairway to Heaven: ಸ್ವರ್ಗಕ್ಕಿರುವ ಈ ಮೆಟ್ಟಿಲುಗಳನ್ನು ತೆರವುಗೊಳಿಸಲಿದೆ ಹೊನೊಲುಲು ಆಡಳಿತ, ಕಾರಣ ಇಲ್ಲಿದೆ

Mon, 13 Sep 2021-2:06 pm,

1. ಸರ್ವಸಮ್ಮತಿಯಿಂದ ನಡೆದ ಮತದಾನ - ಹೊನೊಲುಲು ಅಧಿಕಾರಿಗಳು ಈ ಜನಪ್ರಿಯ ತಾಣವನ್ನು ತೆರವುಗೊಳಿಸಲು ಯೋಜನೆ ರೂಪಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಸ್ವರ್ಗದ ಮೆಟ್ಟಿಲುಗಳು ಬಹಳ ಅಪಾಯಕಾರಿ ಪ್ರವಾಸಿ ತಾಣ ಎಂದು ಅವರು ಬಣ್ಣಿಸಿದ್ದಾರೆ.  Honolulu City Council  ಕಳೆದ ಬುಧವಾರ ಈ ನಿಟ್ಟಿನಲ್ಲಿ ಸರ್ವಾನುಮತದಿಂದ ಮತ ಚಲಾಯಿಸಿದೆ ಎನ್ನಲಾಗುತ್ತಿದೆ.

2. ನಿತ್ಯ 200 ಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ - ಎರಡನೇ ಮಹಾಯುದ್ಧದ  (World War II) ವೇಳೆ ಬಳಕೆಯಾದ ರಹಸ್ಯ ಮಿಲಿಟರಿ ರೇಡಿಯೋ ನೆಲೆಯನ್ನು ಪ್ರವೇಶಿಸಲು ಯುಎಸ್ ನೌಕಾಪಡೆಯು  (US Navy) 1940 ರಲ್ಲಿ ಈ ಮೆಟ್ಟಿಲುಗಳನ್ನು ನಿರ್ಮಿಸಿತು ಎಂದು ವರದಿ ಹೇಳುತ್ತದೆ. 1987 ರಲ್ಲಿ, ಕೋಸ್ಟ್ ಗಾರ್ಡ್ ಭದ್ರತಾ ಕಾರಣಗಳಿಗಾಗಿ ಅದನ್ನು ಮುಚ್ಚಿಹಾಕಿತ್ತು. ಆದರೂ ಕೂಡ ಈ ಅಪಾಯಕಾರಿ ತಾಣವು ಪ್ರತಿದಿನ 200 ಕ್ಕೂ ಹೆಚ್ಚು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.

3. 2480 ಅಡಿ ಎತ್ತರದವರೆಗೆ ಸುಮಾರು 3,922 ಮೆಟ್ಟಿಲುಗಳಿವೆ - ಈ ಮೆಟ್ಟಿಲುಗಳನ್ನು ಏರುವುದು ಕಾನೂನುಬಾಹಿರ, ಆದರೂ ಪ್ರತಿ ವರ್ಷ ಸುಮಾರು 4,000 ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ನಿಯಮವನ್ನು ಉಲ್ಲಂಘಿಸುವವರಿಗೆ $ 1,000 ದಂಡ ವಿಧಿಸಲಾಗುತ್ತದೆ, ಆದರೂ ಕೂಡ ಜನರು ಅದನ್ನು ನಿಯಮಗಳನ್ನು ಪಾಲಿಸುವುದಿಲ್ಲ. ಸ್ವರ್ಗದ ನಿಚ್ಚಣಿಕೆ ಎಂದೇ ಖ್ಯಾತ ಇದು 2,480 ಅಡಿ ಎತ್ತರ ಮತ್ತು 3,922 ಕಿರಿದಾದ ಮೆಟ್ಟಿಲುಗಳನ್ನು ಹೊಂದಿವೆ.

4. ಈ ಕಾರಣದಿಂದ ಇವುಗಳನ್ನು ಸ್ವರ್ಗದ ಮೆಟ್ಟಿಲುಗಳು ಎನ್ನಲಾಗುತ್ತದೆ - ಈ ಮೆಟ್ಟಿಲುಗಳನ್ನು ಒವಾಹುದ ಓಹು ಕೂಲೌ ಪರ್ವತ ಶ್ರೇಣಿಯಲ್ಲಿ (Oahu Koolau Mountain Range)ನಿರ್ಮಿಸಲಾಗಿದೆ. ಈ ಮೆಟ್ಟಿಲುಗಳನ್ನು ಏರಿದವರಿಗೆ ತಾವು ಮೋಡಗಳ ನಡುವೆ ತಲುಪಿದಂತೆ ಭಾಸವಾಗುತ್ತದೆ. ಇದೆ ಕಾರಣದಿಂದ ಇದನ್ನು 'ಸ್ವರ್ಗಕ್ಕೆ ಮೆಟ್ಟಿಲು' ಎಂದು ಕರೆಯಲಾಗುತ್ತದೆ.

5. ಬಂಧನದ ಭೀತಿ ಕೂಡ ಕೆಲಸಕ್ಕೆ ಬರುತ್ತಿಲ್ಲ - ಈ ವರ್ಷದ ಮಾರ್ಚ್ 14 ಮತ್ತು ಮಾರ್ಚ್ 23 ರ ನಡುವೆ ಹೊನೊಲುಲು ಪೊಲೀಸರು ಮೆಟ್ಟಿಲುಗಳನ್ನು ಏರಿದ ಸುಮಾರು 6 ಪಾದಾಚಾರಿ ಪ್ರವಾಸಿಗರನ್ನು ಬಂಧಿಸಿದ್ದರು. ಅಲ್ಲದೆ, ಪ್ರವಾಸಿಗರು ಕಾನೂನುಬಾಹಿರವಾಗಿ ಏರುವುದನ್ನು ತಡೆಯುವ ಕಾರ್ಯಾಚರಣೆಯಲ್ಲಿ 93 ನೋಟಿಸ್‌ಗಳನ್ನು ಜಾರಿಗೊಳಿಸಿದೆ. ಇದರ ಹೊರತಾಗಿಯೂ ಜನರು ಅಲ್ಲಿಗೆ ಭೇಟಿ ನೀಡುವುದನ್ನು ಬಿಡುತ್ತಿಲ್ಲ. ಈ ಕಾರಣದಿಂದಾಗಿ, ಮೆಟ್ಟಿಲುಗಳನ್ನು ತೆರವುಗೊಳಿಸಲು ಇದೀಗ ಸಿದ್ಧತೆ ನಡೆಸಲಾಗುತ್ತಿದೆ.

6. ಇದುವರೆಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ - ಕುಲಾವ್ ಪರ್ವತ ಶ್ರೇಣಿಯಲ್ಲಿ ನಿರ್ಮಿಸಲಾಗಿರುವ ಈ ಮೆಟ್ಟಿಲುಗಳನ್ನು ನಗರಾಡಳಿತ ಅಪಾಯಕಾರಿ ತಾಣವೆಂದು ಪರಿಗಣಿಸಿದ್ದರೂ, ಇದುವರೆಗೆ ಇಲ್ಲಿ ಕೇವಲ ಒಂದು ಸಾವು ದಾಖಲಾಗಿದೆ. ಗಾಯಕ ಮತ್ತು ಹಾಸ್ಯನಟ ಫ್ರಿಟ್ಜ್ ಹಸೆನ್‌ಪುಶ್ (Fritz Hasenpusch) 2012 ರಲ್ಲಿ ಇವುಗಳನ್ನು ಏರುವಾಗ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link