ಸ್ಟಾರ್ ಕ್ರಿಕೆಟರ್ ಜೊತೆ ಲವ್ ಬ್ರೇಕಪ್.. ಸಿನಿಮಾಗಳಿಂದ ದೂರ.. ಕೊನೆಗೆ ಬಾಳಲ್ಲಿ ಒಬ್ಬಂಟಿ ಆಗಿಯೇ ಉಳಿದ ಫೇಮಸ್ ನಟಿ ಈಕೆ !
ಒಂದು ಕಾಲದ ಸ್ಟಾರ್ ನಟಿ ನಗ್ಮಾ. 90ರ ದಶಕದಲ್ಲಿ ಸ್ಟಾರ್ ನಾಯಕಿಯಾಗಿದ್ದರು. ನಟಿ ನಗ್ಮಾ ಮೊದಲ ಹೆಸರು ನಂದಿತಾ ಅರವಿಂದ ಮೊರಾರ್ಜಿ. ನಗ್ಮಾ ಅವರ ತಂದೆ ಹಿಂದೂ, ತಾಯಿ ಮುಸ್ಲಿಂ ಆಗಿದ್ದರು.
ನಟಿ ನಗ್ಮಾ ಮುಂಬೈನಲ್ಲಿ ಓದು ಮುಗಿಸಿದರು. ಬಳಿಕ ಸಲ್ಮಾನ್ ಖಾನ್ ಜೊತೆ ಬಾಘಿ ಚಿತ್ರದ ಮೂಲಕ ನಾಯಕ ನಟಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು.
1990ರಲ್ಲಿ ಬಾಘಿ ಸಿನಿಮಾ ರಿಲೀಸ್ ಆಯಿತು. ಆ ಬಳಿಕ ನಗ್ಮಾ ಹಿಂತಿರುಗಿ ನೋಡಲಿಲ್ಲ. ಯಶಸ್ಸಿನ ಶಿಖರ ಏರಿದರು. ಹಿಂದಿ ನಂತರ ತೆಲುಗು, ತಮಿಳು, ಮಲಯಾಳಂ, ಕನ್ನಡ, ಭೋಜ್‌ಪುರಿ ಸಿನಿಮಾಗಳಲ್ಲಿ ನಗ್ಮಾ ನಟಿಸಿ ಮನ್ನಣೆ ಪಡೆದರು.
ನಗ್ಮಾ ವೈಯಕ್ತಿಕ ಜೀವನದಿಂದಲೂ ಅನೇಕ ಬಾರಿ ಸುದ್ದಿಯಾಗದ್ದಾರೆ. ನಗ್ಮಾ ಪ್ರೇಮ ಸಂಬಂಧಗಳ ಬಗ್ಗೆ ಹಲವು ವದಂತಿಗಳಿವೆ. ನಾಲ್ವರು ವಿವಾಹಿತರೊಂದಿಗೆ ಸಂಬಂಧ ಹೊಂದಿದ್ದರು ಎಂಬ ಸುದ್ದಿ ಆ ಸಮಯದಲ್ಲಿ ಸಂಚಲನ ಮೂಡಿಸಿತ್ತು.
ವರದಿಗಳ ಪ್ರಕಾರ, ನಟಿ ನಗ್ಮಾ ಟೀಂ ಇಂಡಿಯಾ ನಾಯಕ ಸೌರವ್ ಗಂಗೂಲಿಯನ್ನು ಪ್ರೀತಿಸಿದ್ದರು. ತಿರುಪತಿಯಲ್ಲಿ ರಹಸ್ಯ ವಿವಾಹ ನಡೆದಿರುವ ಬಗ್ಗೆ ಸಹ ಸುಳ್ಳು ಸುದ್ದಿ ಹಬ್ಬಿತ್ತು.
ಸೌರವ್ ಗಂಗೂಲಿ ಪತ್ನಿಯಿಂದಾಗಿ ಇಬ್ಬರ ನಡುವಿನ ಪ್ರೇಮ ಸಂಬಂಧ ಮುರಿದು ಬಿದ್ದಿತ್ತು. ಆ ಬಳಿಕ ಮೂವರು ನಟರ ಜೊತೆ ನಗ್ಮಾ ಹೆಸರು ತಳಕು ಹಾಕಿಕೊಂಡಿತ್ತು.
ಸೌರವ್ ಗಂಗೂಲಿ ನಂತರ ನಟ ಶರತ್ ಕುಮಾರ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ ಎಂದು ವದಂತಿಗಳಿವೆ. ಬಳಿಕ ಖ್ಯಾತ ಭೋಜ್‌ಪುರಿ ಸೂಪರ್‌ಸ್ಟಾರ್ ರವಿಕಿಶನ್ ಜೊತೆಯೂ ಸಂಬಂಧ ಹೊಂದಿದ್ದರು ಎನ್ನಲಾಗುತ್ತದೆ.
ರವಿಕಿಶನ್ ಜೊತೆ ಬ್ರೇಕ್ ಅಪ್ ನಂತರ ನಗ್ಮಾ ಸ್ಟಾರ್ ಹೀರೋ ಮನೋಜ್ ತಿವಾರಿ ಜೊತೆ ಅಫೇರ್ ಹೊಂದಿದ್ದರು ಎಂಬ ವದಂತಿ ಶುರುವಾಯಿತು. ಈ ಸುದ್ದಿ ಬಂದಾಗ ಸೌರವ್ ಗಂಗೂಲಿ, ಶರತ್ ಕುಮಾರ್, ರವಿಕಿಶನ್ ಮತ್ತು ಮನೋಜ್ ತಿವಾರಿ ಎಲ್ಲರೂ ಮದುವೆಯಾಗಿದ್ದರು.