Athiya Shetty-KL Rahul Wedding: ಜ.23ಕ್ಕೆ ಅಥಿಯಾ ಶೆಟ್ಟಿ ಜೊತೆಗೆ ಸಪ್ತಪದಿ ತುಳಿಯಲಿರುವ ಕೆ.ಎಲ್.ರಾಹುಲ್?
ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಕೆ.ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಸಜ್ಜಾಗಿದ್ದಾರೆ. ವರದಿಗಳ ಪ್ರಕಾರ ಈ ಜೋಡಿ ಜ.23ರಂದು ಅದ್ಧೂರಿಯಾಗಿ ಮದುವೆಯಾಗಲಿದ್ದಾರೆಂದು ಹೇಳಲಾಗಿದೆ.
ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಹಲವಾರು ವರ್ಷಗಳಿಂದ ಪರಸ್ಪರ ಡೇಟಿಂಗ್ ನಡೆಸುತ್ತಿದ್ದರು. ಇವರಿಬ್ಬರ ಮದುವೆ ಬಗ್ಗೆ ನಾನಾ ವದಂತಿಗಳು ಹಬ್ಬಿದ್ದವು. ಆದರೆ ತಮ್ಮ ಸಂಬಂಧದ ಯಾವುದೇ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.
ಬಾಲಿವುಡ್ ನಟ ಸುನೀಲ್ ಶೆಟ್ಟಿಯವರಿಗೆ ಸೇರಿದ ಭವ್ಯ ಬಂಗಲೆಯಲ್ಲಿ ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ಅದ್ಧೂರಿಯಾಗಿ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆಂದು ವರದಿಯಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಪರ್ವತಗಳಲ್ಲಿರುವ ಒಂದಾಗಿರುವ ಗಿರಿಧಾಮ ಖಂಡಾಲಾದಲ್ಲ ಸುನೀಲ್ ಶೆಟ್ಟಿಯವರ ಭವ್ಯ ಬಂಗಲೆ ಇದೆ. ಇಲ್ಲಿಯೇ ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ಮದುವೆ ಶಾಸ್ತ್ರಗಳು ನಡೆಯಲಿದೆ. ಖಂಡಾಲಾದಲ್ಲಿ 3 ದಿನ ಮದುವೆ ಸಂಭ್ರಮದಿಂದ ನಡೆಯಲಿದೆಯಂತೆ.
ಜನವರಿ 23ರಂದು ಅಥಿಯಾ ಶೆಟ್ಟಿ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿರುವ ಕ್ರಿಕೆಟಿಗ ಕೆ.ಎಲ್.ರಾಹುಲ್ ನಾಳೆಯಿಂದ ನ್ಯೂಜಿಲ್ಯಾಂಡ್ ವಿರುದ್ಧ ನಡೆಯಲಿರುವ 3 ದಿನಗಳ ಏಕದಿನ ಸರಣಿ ಮತ್ತು ಟಿ-20 ಸರಣಿಯಲ್ಲಿ ಆಡುತ್ತಿಲ್ಲ.