ಪ್ರೀತಿಗಾಗಿ ಮುಸ್ಲಿಂ ಯುವತಿಯನ್ನ 2 ಬಾರಿ ಮದುವೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ! ಧರ್ಮವನ್ನೇ ಮೀರಿದ ಅಪರೂಪದ ಪ್ರೇಮವಿದು!

Tue, 26 Mar 2024-9:44 pm,

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾರತೀಯ ಆಲ್‌ರೌಂಡರ್ ಶಿವಂ ದುಬೆ ಆಡುತ್ತಿದ್ದಾರೆ. ಅದ್ಭುತ ಬ್ಯಾಟಿಂಗ್ ಮಾಡುತ್ತಿರುವ ಶಿವಂ ದುಬೆ ಅವರ ವೈಯಕ್ತಿಕ ಜೀವನವೂ ಬಲು ವಿಶೇಷವಾಗಿದೆ.

ಅಂದಹಾಗೆ ನಾವಿಂದು ಈ ಸುದ್ದಿಯಲ್ಲಿ ಶಿವಂ ದುಬೆ ಅವರ ಪ್ರೇಮ ಜೀವನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕುಟುಂಬದ ವಿರೋಧದ ಮಧ್ಯೆ ತನ್ನ ಪ್ರೀತಿಯನ್ನು ಕಾಪಾಡಿಕೊಂಡ ಪರಿ ಹೇಗೆ ಎಂಬುದೇ ವಿಶೇಷ.

ಟೀಂ ಇಂಡಿಯಾದ ಈ ಸ್ಟಾರ್ ಆಲ್ ರೌಂಡರ್ ಶಿವಂ ದುಬೆ ಸುಮಾರು 3 ವರ್ಷಗಳ ಹಿಂದೆ ಮದುವೆಯ ವಿಷಯಕ್ಕೇ ಭಾರೀ ಸುದ್ದಿಯಲ್ಲಿದ್ದರು. ಅಷ್ಟಕ್ಕೂ ಇವರ ಪ್ರೇಮ ಜೀವನ ಯಾವ ಸಿನಿಮಾಗೂ ಕಮ್ಮಿಯಿಲ್ಲ.

ಶಿವಂ ದುಬೆ 2021 ರಲ್ಲಿ ತನ್ನ ಪ್ರೇಯಸಿ ಅಂಜುಮ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಂದಹಾಗೆ ಶಿವಂ ದುಬೆ ಹಿಂದೂ ಧರ್ಮದಿಂದ ಬಂದರೆ, ಅಂಜುಮ್ ಖಾನ್ ಮುಸ್ಲಿಂ ಧರ್ಮಕ್ಕೆ ಸೇರಿದವರು. ಈ ಕಾರಣಕ್ಕಾಗಿ, ಶಿವಂ ಮತ್ತು ಅಂಜುಮ್ ಮದುವೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಮದುವೆಗೆ ಮೊದಲು ಶಿವಂ ಮತ್ತು ಅಂಜುಮ್ ಖಾನ್ ಒಂದು ವರ್ಷ ಡೇಟಿಂಗ್ ಮಾಡಿದ್ದರು. ಆದರೆ ಈ ಸುದ್ದಿ ಯಾರ ಕಿವಿಗೂ ಬಿದ್ದಿರಲಿಲ್ಲ. ಆದರೆ ಯಾವಾಗ ಇವರಿಬ್ಬರ ಬಗ್ಗೆ ಮನೆಯವರಿಗೆ ತಿಳಿಯಿತೋ ಆಗ, ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು.  

ಅಂಜುಮ್ ಖಾನ್ ಮೂಲತಃ ಉತ್ತರ ಪ್ರದೇಶದವರು. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಲಲಿತಕಲೆಯಲ್ಲಿ ಪದವಿ ಪಡೆದಿದ್ದಾರೆ. ಅಂಜುಮ್ ಮಾಡೆಲ್ ಕೂಡ ಹೌದು. ಅಷ್ಟೇ ಅಲ್ಲ, ಅನೇಕ ಹಿಂದಿ ಧಾರಾವಾಹಿ ಮತ್ತು ಮ್ಯೂಸಿಕ್ ಆಲ್ಬಮ್‌ಗಳಲ್ಲಿಯೂ ಕೆಲಸ ಮಾಡಿದ್ದಾರೆ.

ಅಂಜುಮ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ಶಿವಂ ಮತ್ತು ಕುಟುಂಬದೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.

ಕಡೆಗೆ ಎರಡೂ ಕಡೆಯವರನ್ನು ಒಪ್ಪಿಸಿ ಮದುವೆಯಾದ ಶಿವಂ ದುಬೆ ಮತ್ತು ಅಂಜುಮ್ ಈಗ ಸುಖೀ ಸಂಸಾರ ನಡೆಸುತ್ತಿದ್ದಾರೆ. ಅಂದಹಾಗೆ ತನ್ನ ಪ್ರೀತಿಗಾಗಿ ಎರಡೂ ಧರ್ಮದ ಪ್ರಕಾರ ಮದುವೆಯಾಗಿದ್ದರು .

ZEENEWS TRENDING STORIES

By continuing to use the site, you agree to the use of cookies. You can find out more by Tapping this link