ಸಿಲ್ಕ್‌ ಸ್ಮಿತಾ ಅರ್ಧ ಕಚ್ಚಿದ ಸೇಬು ಹರಾಜು... ದಾಖಲೆಯ ಬೆಲೆಗೆ ಮಾರಾಟವಾಗಿತ್ತಂತೆ ಆ ಆ್ಯಪಲ್!

Thu, 22 Aug 2024-8:19 am,

Silk Smitha bitten apple auction: ವಿಜಯಲಕ್ಷ್ಮಿ ವಡ್ಲಪಟ್ಲ 1981ರಲ್ಲಿ ತಮಿಳು ಸಿನಿಮಾ ವಂಡಿಚಕ್ಕರಂ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 

ಸಿಲ್ಕ್ ಪಾತ್ರದಿಂದ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರ ಹೃದಯ ಗೆದ್ದರು. ಆ ಬಳಿಕ ಸಿಲ್ಕ್ ಸ್ಮಿತಾ ಎಂದೇ ಖ್ಯಾತಿ ಪಡೆದರು.

ಹಸಿಬಿಸಿ ದೃಶ್ಯಗಳ ಮೂಲಕವೇ ಸಿಲ್ಕ್‌ ಸ್ಮಿತಾ ಹುಡುಗರ ಹಾಟ್‌ ಫೆವರೇಟ್‌ ಆದರು. ಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿ 450 ಚಿತ್ರಗಳಲ್ಲಿ ನಟಿಸಿದ್ದಾರೆ. 

ಸಿಲ್ಕ್‌ ಸ್ಮಿತಾ ಚಿತ್ರೀಕರಣದ ಸಂದರ್ಭದಲ್ಲಿ ಸೇಬು ಹಿಡಿದು ಅದನ್ನು ಕಚ್ಚಿದರು. ಆದರೆ, ನಿರ್ದೇಶಕರು ಆಕೆಯನ್ನು ಶಾಟ್‌ಗೆ ಕರೆದಿದ್ದರಿಂದ ಅದನ್ನು ಪಕ್ಕಕ್ಕೆ ಇರಿಸಿದ್ದರು. 

ಈ ವೇಳೆ ಸೆಟ್‌ನಲ್ಲಿದ್ದ ವ್ಯಕ್ತಿಯೊಬ್ಬ ಆಕೆ ಕಚ್ಚಿದ ಸೇಬನ್ನು ಗಮನಿಸಿ ಅದನ್ನು ಎತ್ತಿಕೊಂಡಿದ್ದಾನೆ. ವರದಿಯ ಪ್ರಕಾರ, ಅವರು ಕಚ್ಚಿದ ಸೇಬು ಹಣ್ಣನ್ನು ನಂತರ ಹರಾಜು ಹಾಕಲಾಯಿತು. ಅದಕ್ಕೆ ಅವರು ಪಡೆದ ಬೆಲೆಯ ಸುತ್ತ ಅನೇಕ ಊಹಾಪೋಹಗಳಿವೆ.

ಕೆಲವು ವರದಿಗಳ ಪ್ರಕಾರ, ಈ ಸೇಬು 200 ರೂ. ಗೆ ಮಾರಾಟವಾಯ್ತು. ಸಿಲ್ಕ್‌ ಸ್ಮಿತಾ ಕಚ್ಚಿದ ಸೇಬು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link