ಐಪಿಎಲ್ ಹರಾಜಿನಲ್ಲಿ ಅತೀ ಕಡಿಮೆ ಬೆಲೆ ಸೇಲ್ ಆದ ಸ್ಟಾರ್ ಆಟಗಾರರು..! ಪಟ್ಟಿಯಲ್ಲಿರುವ ಹೆಸರು ಕೇಳಿದ್ರೆ ನೀವು ಶಾಕ್ ಆಗ್ತೀರ..!!
IPL Auction 2025: ಐಪಿಎಲ್ ಮೆಗಾ ಹರಾಜಿನಲ್ಲಿ ಆಟಗಾರರ ಮೇಲೆ ಹಣದ ಮಳೆ ಹರಿಯುತ್ತಿದೆ. ಒಂದು ಕಡೆ ಕೆಲವು ಆಟಾಗರರು ನಿರೀಕ್ಷೆಗೂ ಮೀರಿದ ಬೆಲೆಗೆ ಸೇಲ್ ಆಗ್ತಾ ಇದ್ರೆ, ಇನ್ನೂ ಕೆಲವರು ನಿರೀಕ್ಷಿಸಿದ ಕಡಿಮೆ ಬೆಲೆಗೆ ಸೇಲ್ ಆಗಿರುವುದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ಮಾಜಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್‌ಗಾಗಿ ಲಕ್ನೋ ಸೂಪರ್‌ಜೈಂಟ್ಸ್ ರೂ.27 ಕೋಟಿಗಳನ್ನು ಖರ್ಚು ಮಾಡಿದೆ. ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಗಾಗಿ ಪಂಜಾಬ್ ಕಿಂಗ್ಸ್ 26.75 ಕೋಟಿ ರೂ. ಆಲ್ ರೌಂಡರ್ ಸೇಲ್ ಆಗಿದ್ದರು.
ಸ್ಟಾರ್‌ಡಮ್‌ಗೆ ಹೋಲಿಸಿದರೆ, ಪಡೆದ ಮೊತ್ತ ಕಡಿಮೆ. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್ ಅಗ್ರಸ್ಥಾನದಲ್ಲಿದ್ದಾರೆ.
20 ಕೋಟಿ ರೂ. ಗೆ ಹರಾಜಿಗೆ ಪ್ರವೇಶಿಸಿದ್ದ ಕೆ ಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿ ರೂ.ಗೆ ಖರೀದಿಸಿದೆ, ನಿರೀಕ್ಷಿಸಿದ ಬೆಲೆಗಿಂತಲೂ ಕಡಿಮೆ ಬೆಲೆ ರಾಹುಲ್ ಸೇಲ್ ಆಗಿರುವುದು ಇದೀಗ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.
ನ್ಯೂಜಿಲೆಂಡ್ ಆಟಗಾರರಾದ ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಅವರನ್ನು ಸಿಎಸ್‌ಕೆ ತಂಡ ಅತೀ ಕಡಿಮೆ ಬೆಲೆಗೆ ಖರೀದಿಸಿದೆ. ಡೆವೊನ್ ಕಾನ್ವೆ ಅವರನ್ನು 6.25 ಕೋಟಿ ರೂ. ಗೆ ಖರೀದಿಸಿದ್ದರೆ, ರಚಿನ್ ರವೀಂದ್ರ ಅವರನ್ನು ರೂ. 4 ಕೋಟಿಗೆ ಸಿಎಸ್‌ಕೆ ತಂಡ ಖರೀದಿ ಮಾಡಿದೆ.
ಭಾರತದ ಸ್ಟಾರ್ ಯುವ ಆಟಗಾರ ರಾಹುಲ್ ತ್ರಿಪಾಠಿ ರೂ. 3.40 ಕೋಟಿಗೆ ಸೇಲ್ ಆಗಿದ್ದಾರೆ.
ದಕ್ಷಿಣ ಆಫ್ರಿಕಾದ ನಾಯಕ ಮತ್ತು ಸ್ಟಾರ್ ಆಲ್‌ರೌಂಡರ್ ಏಡೆನ್ ಮಾರ್ಕ್‌ರಾಮ್ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ ಅವರ ಕನಿಷ್ಠ ಬೆಲೆ ರೂ.2 ಕೋಟಿಗೆ ಖರೀದಿ ಮಾಡಿದೆ, ಇದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ.
ಆಸ್ಟ್ರೇಲಿಯಾದ ಕೆಲ ಆಟಗಾರರು ನಿರೀಕ್ಷಿತ ಮೊತ್ತ ಪಡೆಯಲಿಲ್ಲ. ಕಳೆದ ಹರಾಜಿನಲ್ಲಿ 24.75 ಕೋಟಿ ರೂ.ಗೆ ಪಡೆದಿದ್ದ ಮಿಚೆಲ್ ಸ್ಟಾರ್ಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಭಾರಿ 11.75 ಕೋಟಿ ರೂ.ಗೆ ಖರೀದಿಸಿದೆ.
ಆಲ್‌ರೌಂಡರ್‌ಗಳಾದ ಮಿಚೆಲ್ ಮಾರ್ಷ್ ಅವರನ್ನು ಲಕ್ನೋ ರೂ.3.40 ಕೋಟಿಗೆ, ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ರೂ.4.20 ಕೋಟಿಗೆ ಪಂಜಾಬ್ ಕಿಂಗ್ಸ್ ಮತ್ತು ಆಡಮ್ ಜಂಪಾ ಅವರನ್ನು ರೂ.2.40 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿದೆ.
ಆಲ್‌ರೌಂಡರ್‌ಗಳಾದ ಮಿಚೆಲ್ ಮಾರ್ಷ್ ಅವರನ್ನು ಲಕ್ನೋ ರೂ.3.40 ಕೋಟಿಗೆ, ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ರೂ.4.20 ಕೋಟಿಗೆ ಪಂಜಾಬ್ ಕಿಂಗ್ಸ್ ಮತ್ತು ಆಡಮ್ ಜಂಪಾ ಅವರನ್ನು ರೂ.2.40 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿದೆ.