ಈ ಐದು ಸೂಪರ್ ಹಿಟ್ ಫಿಲಂಗಳನ್ನು ತಿರಸ್ಕರಿಸಿದ ನಟ ನಟಿಯರು ಇವರೇ ..!

Fri, 27 May 2022-3:50 pm,

ಯೇ ಜವಾನಿ ಹೈ ದೀವಾನಿ: ದೀಪಿಕಾ ಪಡುಕೋಣೆ ಅವರು ರಣಬೀರ್ ಕಪೂರ್ ಜೊತೆಗೆ ಅಯಾನ್ ಮುಖರ್ಜಿ ಅವರ ಚಲನಚಿತ್ರ ಯೇ ಜವಾನಿ ಹೈ ದೀವಾನಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಈ ಮೊದಲು ನೈನಾ ಪಾತ್ರವನ್ನು ಕತ್ರಿನಾ ಕೈಫ್‌ಗೆ ಆಫರ್ ಮಾಡಲಾಗಿತ್ತು. ವರದಿಗಳ ಪ್ರಕಾರ, ಕತ್ರಿನಾ ಮತ್ತು ರಣಬೀರ್ ಅವರ ಹದಗೆಡುತ್ತಿರುವ ಸಂಬಂಧ ಮತ್ತು ಡೇಟ್ಸ್ ಇಲ್ಲದ ಕಾರಣ ಕತ್ರಿನಾ ಈ ಚಿತ್ರವನ್ನು ಮಾಡುವುದು ಸಾಧ್ಯವಾಗಲಿಲ್ಲ.

ಮುನ್ನಾಭಾಯ್ ಎಂಬಿಬಿಎಸ್: ಮುನ್ನಾಭಾಯ್ ಎಂಬಿಬಿಎಸ್  ಚಿತ್ರವನ್ನು ಕೂಡಾ ಮೊದಲು ಸಂಜಯ್ ದತ್ ಬದಲು ವಿವೇಕ್ ಒಬೆರಾಯ್ ಅವರಿಗೆ ಆಫರ್ ಮಾಡಲಾಗಿತ್ತು. ವಿವೇಕ್ ಒಬೆರಾಯ್ ಮುರಳಿ ಪ್ರಸಾದ್ ಶರ್ಮಾ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ಮ್ಯಾಚ್ ಆಗದ ಕಾರಣ  ವಿವೇಕ್ ಒಬೆರಾಯ್ ಈ ಚಿತ್ರವನ್ನು ಕೈ ಬಿಡುವಂತಾಯಿತು.   

ಅಂದಾಧುನ್: ಆಯುಷ್ಮಾನ್ ಖುರಾನಾ ಅವರ ಅತ್ಯಂತ ಅದ್ಭುತವಾದ ಚಿತ್ರವಾದ  ಅಂದಾಧುನ್ ಅನ್ನು ಮೊದಲು ಅನಿಲ್ ಕಪೂರ್ ಅವರ ಮಗ ಹರ್ಷವರ್ಧನ್ ಕಪೂರ್ ಅವರಿಗೆ ನೀಡಲಾಯಿತು. ಬೇರೆ ಯೋಜನೆಗಳಿಂದಾಗಿ ಅವರು ಈ ಚಿತ್ರವನ್ನು ತಿರಸ್ಕರಿಸಿದರು. 

ಪಿಕು: ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಪಿಕು ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಚಿತ್ರವನ್ನು ಮೊದಲು ಪರಿಣಿತಿ ಚೋಪ್ರಾಗೆ ನೀಡಲಾಯಿತು. ಕೆಲವು ಕಾರಣಗಳಿಂದ ಈ ಚಿತ್ರದಲ್ಲಿ ನಟಿಸುವುದು  ಪರಿಣಿತಿ ಚೋಪ್ರಾಗೆ   ಸಾಧ್ಯವಾಗಲಿಲ್ಲ.

ರಾಮ್ ಲೀಲಾ: ಸಂಜಯ್ ಲೀಲಾ ಬನ್ಸಾಲಿಯವರ ಅತ್ಯುತ್ತಮ ಚಿತ್ರ, ರಾಮ್ ಲೀಲಾವನ್ನು ಮೊದಲು ರಣಬೀರ್ ಕಪೂರ್ ಗೆ ಆಫರ್ ಮಾಡಲಾಗಿತ್ತು. ಆದರೆ ನಂತರ ರಣವೀರ್ ಸಿಂಗ್ ಈ ಚಿತ್ರದಲ್ಲಿ ನಟಿಸಿದರು. ನಂತರ ಇದು ಬಹು ದೊಡ್ಡ ಹಿಟ್ ಚಿತ್ರವಾಗಿ ಹೊರಹೊಮ್ಮಿತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link