Post Office Franchise: ಕೇವಲ ಐದು ಸಾವಿರ ರೂಪಾಯಿ ಮೂಲಕ ಆರಂಭಿಸಿ ಪೋಸ್ಟ್ ಆಫೀಸ್ ನ ಈ ವ್ಯವಹಾರ, ಸಿಗಲಿದೆ ಭರ್ಜರಿ ಲಾಭ
ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ಯೋಜನೆಯಡಿ, ಯಾವುದೇ ವ್ಯಕ್ತಿಯು ಅಲ್ಪ ಮೊತ್ತವನ್ನು ಠೇವಣಿ ಇರಿಸುವ ಮೂಲಕ ಅಂಚೆ ಕಚೇರಿಯನ್ನು ತೆರೆಯಬಹುದು. ಇದಕ್ಕಾಗಿ ಕೆಲವು ಮೂಲಭೂತ ಪ್ರಕ್ರಿಯೆಯನ್ನು ಮಾಡಬೇಕಾಗಿದೆ. ಪೋಸ್ಟ್ ಆಫೀಸ್ ಉತ್ತಮ ವ್ಯವಹಾರ ಮಾದರಿಯಾಗಿದ್ದು ಅದು ಬಹಳಷ್ಟು ಹಣವನ್ನು ಗಳಿಸುತ್ತದೆ. ಅಂಚೆ ಕಚೇರಿ ಮುಖ್ಯವಾಗಿ ಎರಡು ರೀತಿಯ ಫ್ರಾಂಚೈಸಿಗಳನ್ನು ನೀಡುತ್ತದೆ. ಮೊದಲ - ಫ್ರ್ಯಾಂಚೈಸೀ ಔಟ್ ಲೆಟ್ ಮತ್ತು ಎರಡನೆಯದು - ಪೋಸ್ಟಲ್ ಏಜೆಂಟ್.
ಇಂಡಿಯಾ ಪೋಸ್ಟ್ ನ ಅಡಿಯಲ್ಲಿ ಮಾಡುವ ಎಲ್ಲಾ ಕೆಲಸಗಳು, ಫ್ರ್ಯಾಂಚೈಸೀ ಔಟ್ ಲೆಟ್ ಅಡಿಯಲ್ಲೂ ಬರುತ್ತದೆ. ಆದರೆ ಇದರಲ್ಲಿ ವಿತರಣೆಯನ್ನು ಸೇವಾ ಇಲಾಖೆಯಿಂದಲೇ ಮಾಡಲಾಗುತ್ತದೆ.
ಅಂಚೆ ಕಚೇರಿ ತೆರೆಯಲು, ಕನಿಷ್ಠ 200 ಚದರ ಅಡಿ ಕಚೇರಿ ವಿಸ್ತೀರ್ಣವನ್ನು ಹೊಂದಿರುವುದು ಅವಶ್ಯಕ. 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಅಂಚೆ ಕಚೇರಿ ತೆರೆಯಬಹುದು. ಇದಕ್ಕಾಗಿ 8 ನೇ ತರಗತಿ ಉತ್ತೀರ್ಣರಾಗಿರುವುದು ಅವಶ್ಯಕ. ಇದರೊಂದಿಗೆ ಇನ್ನೊಂದು ಪ್ರಮುಖ ವಿಷಯವೆಂದರೆ ಕುಟುಂಬ ಸದಸ್ಯರು ಅಂಚೆ ಇಲಾಖೆಯಲ್ಲಿ ಇರಬಾರದು.
ಅಂಚೆ ಕಚೇರಿ ತೆರೆಯಲು ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ. ಅದರ ಹೂಡಿಕೆ ಕಡಿಮೆ. ಆದರೆ ಪೋಸ್ಟಲ್ ಏಜೆಂಟ್ ಗಾಗಿ ಹೆಚ್ಚಿನ ಹೂಡಿಕೆ ಮಾಡಬೇಕಾಗುತ್ತದೆ. ಯಾಕೆಂದರೆ ಸ್ಟೇಷನರಿ ಸಾಮಗ್ರಿಗಳನ್ನು ಖರೀದಿಸಬೇಕಾಗುತ್ತದೆ.
ಪೋಸ್ಟ್ ಆಫೀಸ್ ಫ್ರ್ಯಾಂಚೈಸ್ ತೆರೆಯಲು, ನೀವು ಕನಿಷ್ಟ 5000 ರೂ. ಸೆಕ್ಯುರಿಟಿ ಹಣ ನೀಡಬೇಕಾಗುತದೆ. ಇದಕ್ಕಾಗಿ ಅರ್ಜಿ ಸಲ್ಲಿಸುವುದು ಕೂಡಾ ಅವಶ್ಯಕ. Https://www.indiapost.gov.in/VAS/DOP_PDFFiles/Franchise.pdf ನ ಅಧಿಕೃತ ಲಿಂಕ್‌ಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಸ್ಪೀಡ್ ಪೋಸ್ಟ್‌ಗೆ 5 ರೂ., ಮನಿ ಆರ್ಡರ್‌ಗೆ 3-5 ರೂ., ಪೋಸ್ಟಲ್ ಸ್ಟಾಂಪ್ ಮತ್ತು ಸ್ಟೇಷನರಿಗಳಲ್ಲಿ 5% ಕಮಿಷನ್ ಸಿಗುತ್ತದೆ. ಈ ರೀತಿಯಾಗಿ, ಬೇರೆ ಬೇರೆ ಸೇವೆಗಳಿಗೆ ಬೇರೆ ಬೇರೆ ಕಮಿಷನ್ ಸಿಗಲಿದೆ.