ಕೇವಲ 25 ಸಾವಿರ ಬಂಡವಾಳದೊಂದಿಗೆ ಈ ವ್ಯವಹಾರ ಆರಂಭಿಸಿ ಮೂರು ಲಕ್ಷ ಲಾಭ ಪಡೆಯಿರಿ

Tue, 09 Aug 2022-3:24 pm,

ಮುತ್ತು ಕೃಷಿ ಬಹಳ ಆಸಕ್ತಿದಾಯಕ ವ್ಯವಹಾರವಾಗಿದೆ. ನಗರ ಪ್ರದೇಶಗಳಲ್ಲಿ, ಇದು ತುಂಬಾ ಜನರಿಗೆ ತಿಳಿದಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದರತ್ತ ಗಮನ ಹೆಚ್ಚುತ್ತಿದೆ.  ಗುಜರಾತಿನ ಪ್ರದೇಶಗಳಲ್ಲಿ  ಮುತ್ತಿನ ಕೃಷಿಯಿಂದಾಗಿ ಅನೇಕ ರೈತರು  ಲಕ್ಷಾಧಿಪತಿಗಳಾಗಿದ್ದಾರೆ. ಒಡಿಶಾ ಮತ್ತು ಬೆಂಗಳೂರಿನಲ್ಲೂ ಈ ಉದ್ಯಮ ಉತ್ತಮ ವ್ಯಾಪ್ತಿಯನ್ನು ಹೊಂದಿದೆ

ಮುತ್ತುಗಳ ಕೃಷಿಗೆ ಕೊಳದ ಅಗತ್ಯವಿದೆ. ಮುತ್ತು ಕೃಷಿಗೆ ರಾಜ್ಯ ಮಟ್ಟದಲ್ಲೂ ತರಬೇತಿ ನೀಡಲಾಗುತ್ತದೆ. ಒಂದು ವೇಳೆ ಕೊಳ ಇಲ್ಲದೆ ಹೋದರೆ ಅದನ್ನು ಕೂಡ ವ್ಯವಸ್ಥೆಗೊಳಿಸಬಹುದು. ನಿಮ್ಮ ಹೂಡಿಕೆಯ ಮೇಲೆ ಸರ್ಕಾರದಿಂದ 50 ಪ್ರತಿಶತದಷ್ಟು ಸಬ್ಸಿಡಿ ಪಡೆಯಬಹುದು.   

ಕೃಷಿ ಆರಂಭಿಸಲು ನುರಿತ ವಿಜ್ಞಾನಿಗಳಿಂದ ತರಬೇತಿ ಪಡೆಯುವುದು ಅಗತ್ಯ. ಸರ್ಕಾರ ಕೂಡಾ ಈ ಕೃಷಿ ಬಗ್ಗೆ ಉಚಿತ ತರಬೇತಿ ನೀಡುತ್ತದೆ. ಈ ಕೃಷಿ ಆರಂಭಿಸಲು ಸರ್ಕಾರಿ ಸಂಸ್ಥೆಗಳು ಅಥವಾ ಮೀನುಗಾರರಿಂದ ಸಿಂಪಿಯನ್ನು ಖರೀದಿಸಬೇಕು.  ಹೀಗೆ ಖರೀದಿಸಿದ  ಸಿಂಪಿಗಳನ್ನು ಎರಡು ದಿನಗಳ ಕಾಲ ಕೊಳದ ನೀರಿನಲ್ಲಿ ಇಡಲಾಗುತ್ತದೆ. ಸೂರ್ಯನ ಬೆಳಕು ಮತ್ತು ಗಾಳಿಗೆ ಒಡ್ಡಿಕೊಂಡ ನಂತರ, ಸಿಂಪಿಯ ಶೆಲ್ ಮತ್ತು ಸ್ನಾಯುಗಳು ಸಡಿಲವಾಗುತ್ತವೆ. ಸ್ನಾಯುಗಳು ಸಡಿಲವಾದಾಗ, ಸಿಂಪಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅದರೊಳಗೆ ಅಚ್ಚನ್ನು ಹಾಕಲಾಗುತ್ತದೆ. ಅಚ್ಚು ಸಿಂಪಿಯನ್ನು ಚುಚ್ಚಿದಾಗ, ಒಳಗಿನಿಂದ ಒಂದು ಪದಾರ್ಥ ಹೊರಬರುತ್ತದೆ. ಸ್ವಲ್ಪ ಸಮಯದ ನಂತರ, ಅಚ್ಚು ಮುತ್ತಿನ ಆಕಾರದಲ್ಲಿ ಸಿದ್ಧವಾಗುತ್ತದೆ. ಅಚ್ಚಿನಲ್ಲಿ ಯಾವ ಆಕಾರವನ್ನು ಹಾಕಲಾಗುತ್ತದೆಯೋ ಆ ವಿನ್ಯಾಸದ  ಮುತ್ತು ಸಿದ್ಧವಾಗುತ್ತದೆ. ಡಿಸೈನರ್ ಮುತ್ತುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ.

ಒಂದು ಸಿಂಪಿ ತಯಾರಿಸಲು ಸುಮಾರು 25 ರಿಂದ 35 ರೂ.  ಬೀಳುತ್ತದೆ . ಒಂದು ಸಿಂಪಿಯಿಂದ 2 ಮುತ್ತುಗಳನ್ನು ತಯಾರಿಸಲಾಗುತ್ತದೆ. ಒಂದು ಮುತ್ತಿನ ಬೆಲೆ ಸುಮಾರು 120 ರೂಪಾಯಿಗಳು. ಗುಣಮಟ್ಟ ಉತ್ತಮವಾಗಿದ್ದರೆ, 200 ರೂಪಾಯಿಯನ್ನು ಪಡೆಯುವುದು ಕೂಡಾ ಸಾಧ್ಯವಾಗುತ್ತದೆ. ಒಂದು ಎಕರೆ ಕೆರೆಯಲ್ಲಿ 25 ಸಾವಿರ ಸಿಂಪಿ ಹಾಕಬಹುದು. ಇದರ ಮೇಲೆ ನಿಮ್ಮ ಹೂಡಿಕೆ ಸುಮಾರು 8 ಲಕ್ಷ ರೂ. 50% ಸಿಂಪಿಗಳು ಉತ್ತಮವಾಗಿದ್ದು, ಅವುಗಳನ್ನು ಮಾರುಕಟ್ಟೆಗೆ ತಂದರೆ, ವಾರ್ಷಿಕ 30 ಲಕ್ಷದವರೆಗೆ ಆದಾಯವನ್ನು ಸುಲಭವಾಗಿ ಗಳಿಸಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link