ಕೇವಲ 15 ಸಾವಿರ ರೂಪಾಯಿಯಲ್ಲಿ ಈ ಉದ್ಯಮ ಆರಂಭಿಸಿ, 3 ತಿಂಗಳಲ್ಲಿ 3 ಲಕ್ಷ ಸಂಪಾದಿಸಿ

Thu, 25 Nov 2021-11:36 am,

ತುಳಸಿ ವಿಶೇಷ ಔಷಧೀಯ ಗುಣವನ್ನು ಹೊಂದಿರುತ್ತದೆ. ಈ ಗಿಡದ ಬೇರು, ಕಾಂಡ, ಎಲೆ ಸೇರಿದಂತೆ ಎಲ್ಲಾ ಭಾಗಗಳು ಔಷಧ ತಯಾರಿಕೆಗೆ ತುಂಬಾ ಉಪಯುಕ್ತವಾಗಿದೆ. ಇಂದಿನ ದಿನಗಳಲ್ಲಿ ತುಳಸಿ ಗಿಡವನ್ನು ಆಯುರ್ವೇದ ಔಷಧಗಳು, ಯುನಾನಿ, ಹೋಮಿಯೋಪತಿ ಹಾಗೂ ಅಲೋಪತಿ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಈ ಕಾರಣದಿಂದ ತುಳಸಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜನರು ತುಳಸಿ ಎಲೆಗಳನ್ನು ಬಳಸುತ್ತಾರೆ.   

ಮರಳು ಮಿಶ್ರಿತ ಮಣ್ಣು ತುಳಸಿ ಕೃಷಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಅದರ ಕೃಷಿಗಾಗಿ, ಮೊದಲನೆಯದಾಗಿ, ಜೂನ್-ಜುಲೈನಲ್ಲಿ ಬೀಜಗಳನ್ನು ಹಾಕಿ ನರ್ಸರಿ ತಯಾರಿಸಲಾಗುತ್ತದೆ. ನರ್ಸರಿ ಸಿದ್ಧವಾದ ನಂತರ ಅದನ್ನು ಕಸಿ ಮಾಡಲಾಗುತ್ತದೆ. ಸಾಮಾನ್ಯ ಸಸ್ಯಗಳನ್ನು 45 x 45 ಸೆಂ.ಮೀ ಅಂತರದಲ್ಲಿ ನೆಡಬೇಕು, ಆದರೆ RRLOC 12 ಮತ್ತು RRLOC 14 ಜಾತಿಯ ಸಸಿಗಳಿಗೆ 50 x 50 ಸೆಂ.ಮೀ ಅಂತರವನ್ನು ಇಡಬೇಕು. ಈ ಸಸ್ಯಗಳನ್ನು ನೆಟ್ಟ ತಕ್ಷಣ ಸ್ವಲ್ಪ ನೀರು ನೀಡುವುದು ಅಗತ್ಯ.  ಬೆಳೆ ಕಟಾವು ಮಾಡುವ 10 ದಿನಗಳ ಮೊದಲು ನೀರೂ ನೀಡುವುದನ್ನು ನಿಲ್ಲಿಸಬೇಕು ಎನ್ನುತ್ತಾರೆ ತುಳಸಿ ಬೇಸಾಯದ ತಜ್ಞರು. . ತುಳಸಿ ಗಿಡಗಳ ಎಲೆಗಳು ದೊಡ್ಡದಾಗಿದ್ದಾಗ ಈ ಗಿಡವನ್ನು ಕೊಯ್ಲು ಮಾಡಲಾಗುತ್ತದೆ. 

ತುಳಸಿ ಗಿಡಗಳನ್ನು ಮಾರಾಟ ಮಾಡಲು ಮಾರುಕಟ್ಟೆಯ ಏಜೆಂಟರನ್ನು ಸಂಪರ್ಕಿಸಿ ಅಥವಾ ನೇರವಾಗಿ ಮಾರುಕಟ್ಟೆಗೆ ತೆರಳಿ ಗ್ರಾಹಕರನ್ನು ಸಂಪರ್ಕಿಸಿ ಈ ಗಿಡಗಳನ್ನು ಮಾರಾಟ ಮಾಡಬಹುದು. ಇದರ ಹೊರತಾಗಿ, ಔಷಧೀಯ ಕಂಪನಿ ಅಥವಾ ಅಂತಹ ಏಜೆನ್ಸಿಗಳಿಗೆ ಒಪ್ಪಂದದ ಮೇಲೆ ನಿಮ್ಮ ಸಸ್ಯಗಳನ್ನು ಮಾರಾಟ ಮಾಡಬಹುದು. ಸಸಿಗಳನ್ನು ಮಾರಾಟ ಮಾಡಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ.  

ಸಾಮಾನ್ಯವಾಗಿ, ತುಳಸಿ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದೆ. ಆದರೆ ಔಷಧೀಯ ಗುಣಗಳನ್ನು ಹೊಂದಿರುವ ತುಳಸಿಯನ್ನು ಬೆಳೆಸಬಹುದು. ತುಳಸಿಯಲ್ಲಿ ಹಲವು ವಿಧಗಳಿವೆ. ಇದರಲ್ಲಿ ಯುಜೆನಾಲ್ ಮತ್ತು ಮೀಥೈಲ್ ಸಿನ್ನಮೇಟ್ ಇರುತ್ತದೆ. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಔಷಧಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಒಂದು ಹೆಕ್ಟೇರ್ ಜಮೀನಿನಲ್ಲಿ ತುಳಸಿ ಬೆಳೆಯಲು ಕೇವಲ 15 ಸಾವಿರ ರೂ. ಹೂಡಿಕೆ ಸಾಕು. ಆದರೆ 3 ತಿಂಗಳ ನಂತರ ಈ ಬೆಳೆ 3 ಲಕ್ಷಕ್ಕೆ ಮಾರಾಟವಾಗುತ್ತದೆ.   

ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವ ಅನೇಕ ಕಂಪನಿಗಳಿಗೆ ತುಳಸಿ ಸಸ್ಯಗಳ ಅಗತ್ಯವಿರುತ್ತದೆ. ಆದ್ದರಿಂದ ಅವರು ಅದನ್ನು ಒಪ್ಪಂದದ ಮೇಲೆ ಖರೀದಿಸುತ್ತಾರೆ. ಪತಂಜಲಿ, ಡಾಬರ್, ವೈದ್ಯನಾಥ್ ಮೊದಲಾದ ತುಳಸಿ ಕೃಷಿ ಮಾಡುವ ಕಂಪನಿಗಳು, ಆಯುರ್ವೇದ ಔಷಧಗಳು ಗುತ್ತಿಗೆ ಕೃಷಿ ಮಾಡುತ್ತಿವೆ. ತುಳಸಿ ಬೀಜ ಮತ್ತು ಎಣ್ಣೆಗೆ ದೊಡ್ಡ ಮಾರುಕಟ್ಟೆ ಇದೆ. ಎಣ್ಣೆ ಮತ್ತು ತುಳಸಿ ಕಾಳುಗಳನ್ನು ಪ್ರತಿದಿನ ಹೊಸ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link