WhatsAppನಲ್ಲಿ ಡಿಲೀಟ್ ಆಗಿರುವ ವಿಡಿಯೋ ಮತ್ತು ಫೋಟೋವನ್ನು ಹೀಗೆ ರಿಸ್ಟೋರ್ ಮಾಡಿ
WhatsApp ಡೀಫಾಲ್ಟ್ ಆಗಿ, ಫೋನ್‌ನ ಗ್ಯಾಲರಿಯಲ್ಲಿ ಫೋಟೋಗಳನ್ನು ಸೇವ್ ಮಾಡುತ್ತದೆ. ಹೀಗಾಗಿ ವಾಟ್ಸಾಪ್‌ನಿಂದ ಫೋಟೋ ಅಥವಾ ವೀಡಿಯೊ ಡಿಲೀಟ್ ಮಾಡಿದರೂ ಅದನ್ನು ಗ್ಯಾಲರಿಯಿಂದ ಪಡೆದುಕೊಳ್ಳಬಹುದು .
ಅಪ್ಲಿಕೇಶನ್ Android ಬಳಕೆದಾರರಿಗೆ Google ಡ್ರೈವ್ ಮತ್ತು iOS ಬಳಕೆದಾರರಿಗೆ iCloud ಗೆ ಚಾಟ್‌ಗಳು ಮತ್ತು ಮಿಡಿಯಾ ವನ್ನು ಬ್ಯಾಕಪ್ ಮಾಡಲಾಗುತ್ತದೆ. ದೈನಂದಿನ ಬ್ಯಾಕಪ್ ನಂತರ ಮಿದಯಾವನ್ನು ಡಿಲೀಟ್ ಮಾಡಿದರೆ Google ಡ್ರೈವ್ ಅಥವಾ iCloud ನಿಂದ ಫೋಟೋ ಮತ್ತು ವಿಡಿಯೋವನ್ನು ಮತ್ತೆ ರಿಸ್ಟೋರ್ ಮಾಡಬಹುದು.
ಮೊದಲು ನಿಮ್ಮ ಫೋನ್ ನಲ್ಲಿ WhatsApp ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತೆ ಪುನಃ ಇನ್ಸ್ಟಾಲ್ ಮಾಡಿ. ಅದೇ ನಂಬರ್ ನೊಂದಿಗೆ ಸೆಟಪ್ ಮಾಡಿ.
ಬ್ಯಾಕಪ್‌ನಿಂದ ಡೇಟಾವನ್ನು ರಿಕವರ್ ಮಾಡುವ ಮೊದಲು ನಿಮ್ಮಲ್ಲಿ ಒಪ್ಪಿಗೆ ಕೇಳಲಾಗುತ್ತದೆ. ಆಗ ರಿಕವರ್ ಮಾಡುವಂತೆ ಸೂಚಿಸಿ. ಒಮ್ಮೆ ಸೆಟಪ್ ಪೂರ್ಣಗೊಂಡರೆ, ಮಿಡಿಯ ಮಾತು ಚಾಟ್ ಗಳ ಬ್ಯಾಕಪ್‌ಗಳನ್ನು ರಿಕವರ್ ಮಾಡುವುದು ಸಾಧ್ಯವಾಗುತ್ತದೆ.
whatsapp ಮೀಡಿಯಾ ಫೋಲ್ಡರ್ ಚೆಕ್ ಮಾಡಿಕೊಳ್ಳಿ ಮೀಡಿಯಾ ಫೋಲ್ಡರ್‌ನಿಂದ WhatsApp ಮಾಧ್ಯಮವನ್ನು ರಿಸ್ಟೋರ್ ಮಾಡುವ ಆಯ್ಕೆಯು ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಇರುತ್ತದೆ. ಮೊದಲು ಫೈಲ್ ಎಕ್ಸ್‌ಪ್ಲೋರರ್ ಅಪ್ಲಿಕೇಶನ್ ಓಪನ್ ಮಾಡಿ. WhatsApp ಫೋಲ್ಡರ್‌ಗೆ ಹೋಗಿ. ನಂತರ ಮಿಡಿಯಾ ಮತ್ತು WhatsApp ಇಮೇಜ್ ಫೋಲ್ಡರ್‌ಗೆ ಹೋಗಿ. ಇಲ್ಲಿ ಎಲ್ಲಾ ಫೋಟೋ ಗಳು ಇರುತ್ತವೆ.