ಭಾರತದಲ್ಲಿರುವ ಈ ವಿಚಿತ್ರ ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡರೆ ನೀವು ಹೌಹಾರುವುದು ಗ್ಯಾರೆಂಟಿ..!

Sat, 02 Oct 2021-2:47 pm,

ತಮಿಳುನಾಡಿನಲ್ಲಿ ವಿಚಿತ್ರವಾದ ಹಬ್ಬವೊಂದನ್ನು ಆಚರಿಸಲಾಗುತ್ತಿದೆ. ಇಲ್ಲಿನ ಭಕ್ತರು ತಮ್ಮ ಚರ್ಮವನ್ನು ಚೂಪಾದ ಕಬ್ಬಿಣದ ಉಂಗುರಗಳಿಂದ ಚುಚ್ಚುಸಿಕೊಳ್ಳುತ್ತಾರೆ. ನಂತರ ಅದರ ಮೂಲಕ ಭಾರವಾದ ವಸ್ತುಗಳನ್ನು ಎಳೆಯುತ್ತಾರೆ. ಕೆಲವು ಜನರು ತಮ್ಮ ದೇಹದಲ್ಲಿ ಸೂಜಿಗಳನ್ನು ಚುಚ್ಚುಸಿಕೊಳ್ಳುತ್ತಾರೆ. ಈ ಹಬ್ಬದ ಹೆಸರು ಥೈಪುಸಂ. ಥೈಪುಸಂ 48 ದಿನಗಳವರೆಗೆ ಆಚರಿಸುವ ವಿಶಿಷ್ಟ ಹಬ್ಬವಾಗಿದೆ.    

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಕ್ಕಳನ್ನು ಎತ್ತರದಿಂದ ಎಸೆಯುವ ವಿಚಿತ್ರ ಪದ್ಧತಿ ಇದೆ. ಪ್ರಸಿದ್ಧ ಬಾಬಾ ಉಮರ್ ಅವರ ದರ್ಗಾ ಇಲ್ಲಿದೆ. ಇಲ್ಲಿ ಯಾರಿಗಾದರೂ ಮಗು ಹೊಂದುವ ಬಯಕೆ ಈಡೇರಿದರೆ, ಅವರು ತಮ್ಮ ಮಗುವನ್ನು ಎತ್ತರದಿಂದ ಎಸೆಯುತ್ತಾರೆ. ಇತರರು ಎತ್ತರದಿಂದ ಎಸೆದ ಮಗುವನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

ಹಿಂದೂ ಧರ್ಮದಲ್ಲಿ ಹೆಚ್ಚಿನ ಜನರು ಜಾತಕಗಳನ್ನು ನೋಡಿ  ಮದುವೆಯಾಗುತ್ತಾರೆ. ಜಾತಕದಲ್ಲಿ ಮಂಗಳಿಕ ದೋಷ ಹೊಂದಿರುವ ಜನರಿಗೆ ಮದುವೆ ತುಂಬಾ ಕಷ್ಟಕರವಾಗುತ್ತದೆ. ಈ ದೋಷವನ್ನು ಹೋಗಲಾಡಿಸಲು ಅವರು ನಾಯಿ ಅಥವಾ ಇನ್ನಾವುದೇ ಪ್ರಾಣಿಯನ್ನು ಮದುವೆಯಾಗಬೇಕು. ಇನ್ನು ಕೆಲವು ಕಡೆ ಮರಗಳನ್ನು ಮದುವೆಯಾಗುವ ಪದ್ಧತಿಯೂ ಜಾರಿಯಲ್ಲಿದೆ.

ರಾಜಸ್ಥಾನದ ಜೋಧಪುರದಲ್ಲಿ ಈ ವಿಶಿಷ್ಟ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಹೆಸರು ಧಿಂಗ ಗವರ್. ಇದರಲ್ಲಿ ಮಹಿಳೆಯರು ದೇವರ ರೂಪವನ್ನು ಪಡೆಯುತ್ತಾರೆ. ಈ ಸಂದರ್ಭದಲ್ಲಿ ಮೆರವಣಿಗೆಯನ್ನು ಸಹ ಆಯೋಜಿಸಲಾಗುತ್ತದೆ. ಜಾತ್ರೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾವುಗಳನ್ನು ದೇವರ ರೂಪದಲ್ಲಿ ಕಂಡು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಹಿಳೆಯರು ನಾಗರ ಪಂಚಮಿಯಂದು ಹುತ್ತಕ್ಕೆ ಹಾಲು ಎರೆದು ಪೂಜಿಸುತ್ತಾರೆ. ಹಿಂದೂ ಧರ್ಮದ ಜನರು ಈ ಹಬ್ಬವನ್ನು ಆಚರಿಸುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link