14 ವರ್ಷಗಳ ಸಿನಿಜರ್ನಿ, ಖಾನ್‌ಗಳ ಜೊತೆ ಒಂದೂ ಸಿನಿಮಾ ಮಾಡಿಲ್ಲ ಈ ಸ್ಟಾರ್‌ ನಟಿ..! ಕಾರಣವೇನು ಗೊತ್ತೆ.?

Sun, 25 Aug 2024-7:47 pm,

ಇತ್ತೀಚೆಗೆ ನಟಿ ಶ್ರದ್ಧಾ ಕಪೂರ್ ಸಂದರ್ಶನವೊಂದರಲ್ಲಿ ತನ್ನ ಸುದೀರ್ಘ ವೃತ್ತಿಜೀವನದಲ್ಲಿ ಈ ಮೂವರು ಬಾಲಿವುಡ್ ಖಾನ್‌ಗಳೊಂದಿಗೆ ಏಕೆ ಕೆಲಸ ಮಾಡಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ.. ಇದರ ಹಿಂದಿನ ಕಾರಣ ಏನು ಎಂದು ತಿಳಿಯೋಣವೇ ಬನ್ನಿ  

ಬಾಲಿವುಡ್‌ನ ಟಾಪ್ ನಟಿ ಶ್ರದ್ಧಾ, ತನ್ನ ವೃತ್ತಿಜೀವನದಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಿಲ್ಲ. ಈ ಮೂವರು ಬಾಲಿವುಡ್‌ನ ಬಿಗ್‌ ಸ್ಟಾರ್‌ಗಳು ಅಂತ ಕರೆಯಲಾಗುತ್ತದೆ.. ಇವರ ಜೊತೆ ನಟಿಸೋಕೆ ತುದಿಗಾಲಿನಲ್ಲಿ ನಟಿಯರು ನಿಂತಿದ್ದಾರೆ..  

ನಟಿ ಶ್ರದ್ಧಾ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮೂವರೂ ಖಾನ್ ಗಳ ಜೊತೆ ಕೆಲಸ ಮಾಡದಿದ್ದರೂ ಅವರ ಜನಪ್ರಿಯತೆ ಕಡಿಮೆಯಾಗಲಿಲ್ಲ. ಇದಕ್ಕೆ ಅವರ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಫಲ ಅಂದರೆ ತಪ್ಪಾಗಲಾರದು..  

ಹಿಂದಿ ಚಿತ್ರರಂಗದ ಹಿರಿಯ ನಟ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ಹಿಟ್‌ಗಳನ್ನು ನೀಡಿದ್ದಾರೆ. ಇತ್ತೀಚೆಗೆ, ಅವರ ಹಾರರ್-ಕಾಮಿಡಿ ಚಿತ್ರಗಳಲ್ಲಿ ಒಂದಾದ 'ಸ್ಟ್ರೀ 2' ತೆರೆ ಕಂಡಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.  

ಇದೇ ವೇಳೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶ್ರದ್ಧಾ ಹಿಂದಿ ಚಿತ್ರರಂಗದ ಮೂವರು ದೊಡ್ಡ ಸೂಪರ್‌ಸ್ಟಾರ್‌ಗಳಾದ ಖಾನ್‌ಗಳೊಂದಿಗೆ ಏಕೆ ಕೆಲಸ ಮಾಡಿಲ್ಲ ಎಂಬ ಪ್ರಶ್ನೆಯನ್ನು ಎದುರಿಸಿದರು.. ಈ ಪ್ರಶ್ನೆಗೆ ಅವರು ಉತ್ತರನ್ನೂ ಸಹ ನೀಡಿದ್ದಾರೆ.   

ಮೂವರು ಖಾನ್‌ಗಳೊಂದಿಗೆ ಕೆಲಸ ಮಾಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಈ ಹಿಂದೆ ಶಾರುಖ್, ಅಮೀರ್ ಅಥವಾ ಸಲ್ಮಾನ್ ಜೊತೆ ಸಿನಿಮಾ ಆಫರ್ ಬಂದಿದ್ದರೂ ಕಾರಣಾಂತರಗಳಿಂದ ಅವರ ಜೊತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ಶ್ರದ್ಧಾ ಹೇಳಿದ್ದಾರೆ.   

ಅಲ್ಲದೆ, 'ಒಳ್ಳೆಯ ಚಿತ್ರಗಳು, ಒಳ್ಳೆಯ ಕಥೆಗಳುಳ್ಳ ಆಸಕ್ತಿದಾಯಕ ಚಿತ್ರಗಳ ಭಾಗವಾಗಲು ನಾನು ಬಯಸುತ್ತೇನೆ. ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡಬೇಕು ಮತ್ತು ಒಳ್ಳೆಯ ಕೆಲಸ ಮಾಡಬೇಕು ಎಂಬ ಆಸೆ ನನಗಿದೆ ಎಂದು ನಟಿ ಶ್ರದ್ಧಾ ಹೇಳಿಕೊಂಡರು.   

ಈ ಹಿಂದೆ, ಶ್ರದ್ಧಾ ಒಮ್ಮೆ ಸಲ್ಮಾನ್ ಖಾನ್ ಅವರೊಂದಿಗಿನ ಚಿತ್ರಕ್ಕಾಗಿ ಆಫರ್ ಅನ್ನು ಸ್ವೀಕರಿಸಿದ್ದರು, ಆ ಸಮಯದಲ್ಲಿ ಅವರು ಕೇವಲ 16 ವರ್ಷ ವಯಸ್ಸಿನವರಾಗಿದ್ದರು. ಆಗ ಅವರು ತಮ್ಮ ಅಧ್ಯಯನದ ಮೇಲೆ ೊತ್ತು ನೀಡಲು ಬಯಸಿದ್ದರು ಎಂಬ ಅಂಶವನ್ನು ಉಲ್ಲೇಖಿಸಿ ಆಫರ್‌ ತಿರಸ್ಕರಿಸಿದ್ದರು. .   

ಪ್ರಸ್ತುತ ಶ್ರದ್ಧಾ ನಟನೆಯ 'ಸ್ತ್ರೀ 2' ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್, ಅಪರಶಕ್ತಿ ಖುರಾನಾ, ಅಭಿಷೇಕ್ ಬ್ಯಾನರ್ಜಿ ಮತ್ತು ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಚಿತ್ರ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 2018 ರಲ್ಲಿ ತೆರೆಕಮಡ ಸ್ಟ್ರೀ ಚಿತ್ರದ ಮುಂದುವರಿದ ಭಾಗ ಸ್ತ್ರೀ 2. ಚಿತ್ರ ಒಂದೇ ವಾರದಲ್ಲಿ 300 ಕೋಟಿ ರೂ.ಗಳಿಕೆ ಕಂಡಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link