ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು ಬೇಸಿಗೆಯಲ್ಲಿ ಈ ಆಹಾರಗಳಿಂದ ಇರಲಿ ಅಂತರ!

Mon, 22 Apr 2024-1:23 pm,

ಸ್ಟ್ರೀಟ್ ಫುಡ್, ಬೀದಿ ಬದಿ ಆಹಾರಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ, ಬೇಸಿಗೆಯಲ್ಲಿ ಸ್ಟ್ರೀಟ್ ಫುಡ್ ಸೇವನೆಯಿಂದ ಜೀರ್ಣಕ್ರಿಯೆಗೆ ಸಮಸ್ಯೆ ಆಗಬಹುದು.  ಆರೋಗ್ಯ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಇಂತಹ ಆಹಾರಗಳ ಸೇವನೆ  ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದಕ್ಕಾಗಿ, ಕೆಲವು ಆಹಾರಗಳಿಂದ ದೂರ ಉಳಿಯುವಂತೆ ಸಲಹೆ ನೀಡಲಾಗುತ್ತದೆ. ಅಂತಹ ಆಹಾರಗಳೆಂದರೆ... 

ಸಲಾಡ್‌ಗಳು ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಬೀದಿ ಬದಿಯಲ್ಲಿ ಕತ್ತರಿಸಿಟ್ಟಿರುವ ಹಣ್ಣು-ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ವಾಸ್ತವವಾಗಿ, ಬಿಸಿಲಿನಲ್ಲಿ ಕತ್ತರಿಸಿಟ್ಟ ಹಣ್ಣು ತರಕಾರಿಗಳು ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ತ್ವರಿತವಾಗಿ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಸ್ಥಳವಾಗಬಹುದು. ಇದರ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ. 

ಕರಾವಳಿ ಭಾಗದವರಿಗೆ ಸಮುದ್ರಾಹಾರ ಬಲು ಪ್ರಿಯವಾದ ಭಕ್ಷ್ಯ. ಆದರೆ, ಬೇಸಿಗೆಯಲ್ಲಿ ಅತಿಯಾದ ಶಾಖದಿಂದಾಗಿ ಸಮುದ್ರಾಹಾರಗಳು ಬಲುಬೇಗ ಹಾಳಾಗುತ್ತವೆ. ಸಮುದ್ರಾಹಾರದಿಂದ ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಪರಾವಲಂಬಿ ಕಾಯಿಲೆಗಳು ಹರಡುವ ಅಪಾಯ ಇರುವುದರಿಂದ ಬೇಸಿಗೆಯಲ್ಲಿ  ಈ ಆಹಾರ ಅಷ್ಟು ಸೂಕ್ತವಲ್ಲ ಎನ್ನಲಾಗುತ್ತದೆ. 

ಬೇಸಿಗೆಯಲ್ಲಿ ಕುಲ್ಫಿ, ಐಸ್ ಕ್ರೀಂ, ಮಿಲ್ಕ್ ಶೇಕ್ ಸವಿಯುವುದೆಂದರೆ ಏನೋ ಒಂದು ರೀತಿಯ ಆನಂದ. ಆದರೆ, ಇಂತಹ ಆಹಾರಗಳಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಲು ಸರಿಯಾದ ಶೈತ್ಯೀಕರಣದ ಅಗತ್ಯವಿರುತ್ತದೆ. ಬಿಸಿಲಿನಲ್ಲಿ ಸರಿಯಾಗಿ ಶೈತ್ಯೀಕರಣ ಇಲ್ಲದೆ ಇಟ್ಟಿರುವ ಇಂತಹ ಡೈರಿ ಆಧಾರಿತ ಉತ್ಪನ್ನಗಳ ಸೇವನೆಯು ಉದಾರ ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. 

ಬೀದಿ ಬದಿಯಲ್ಲಿ ಮಾರಾಟ ಮಾಡುವ ಮಾಂಸಾಹಾರಗಳ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ವಾಸ್ತವವಾಗಿ, ಮಾಂಸಾಹಾರವನ್ನು ಸರಿಯಾಗಿ ಬೇಯಿಸದೆ ಇದ್ದಾಗ ಇವುಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹೆಚ್ಚಾಗುತ್ತದೆ. ಇಂತಹ ಆಹಾರದ ಸೇವನೆ ವಿಷಕಾರಿ ಆಗಿರಬಹುದು. 

ಬೇಸಿಗೆಯಲ್ಲಿ ಮಸಾಲೆಯುಕ್ತ ಆಹಾರ, ಕಾಂಡಿಮೆಂಟ್‌ಗಳ ಬಳಕೆಯು ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ, ಬೇಸಿಗೆಯಲ್ಲಿ ಎಣ್ಣೆಯಿಂದ ಕರಿದ, ಮಸಾಲೆಯುಕ್ತ ಆಹಾರಗಳ ಬಳಕೆಯನ್ನು ತಪ್ಪಿಸಿ. 

ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಬಳಕೆಯಿಂದಲೂ  ಸೋಂಕುಗಳು ಮತ್ತು ಜಠರಗರುಳಿನ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ, ರಾಸಾಯನಿಕಯುಕ್ತ ತಂಪು ಪಾನೀಯಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link