ಕ್ರೆಡಿಟ್ ಕಾರ್ಡ್ ನ ಸಾಲ ಹೆಚ್ಚಾಗುತ್ತಿದೆಯೇ ? ಈ ನಾಲ್ಕು ವಿಧಾನಗಳಿಂದ ಸಿಗಲಿದೆ ಪರಿಹಾರ
ಕ್ರೆಡಿಟ್ ಕಾರ್ಡ್ ಸಾಲದಿಂದ ಹೊರಬರಲು ಒಂದು ಪ್ರಮುಖ ಮಾರ್ಗವೆಂದರೆ ಆಕ್ಟಿವ್ ಅಪ್ರೋಚ್ . ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್ ಅಥವಾ ಕಂಪನಿಯೊಂದಿಗೆ ಮರುಪಾವತಿ ನಿಯಮಗಳಲ್ಲಿ ಏನು ಮತ್ತು ಎಷ್ಟು ರಿಯಾಯಿತಿ ಪಡೆಯಬಹುದು ಎಂಬುದರ ಕುರಿತು ಮಾತನಾಡುವುದು ಮೊದಲ ಹೆಜ್ಜೆ. ಬಾಕಿ ಬಿಲ್ ತುಂಬಾ ಅಧಿಕವಾಗಿದ್ದರೆ, ಹೆಚ್ಚಿನ ಬ್ಯಾಂಕುಗಳು ಅದಕ್ಕೆ ದಾರಿ ಮಾಡಿಕೊಡುತ್ತವೆ.
ಕ್ರೆಡಿಟ್ ಕಾರ್ಡ್ ಸಾಲದಿಂದ ಹೊರ ಬರಲು ರಿ ಪೇಮೆಂಟ್ ಗೋಲ್ ಮತ್ತು ಅದರ ಸ್ಟಾಟರ್ಜಿ ಮಾಡುವುದು ಮುಖ್ಯ. ಇದರಲ್ಲಿ ನಾಲ್ಕು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ನಿಮ್ಮ ಸೇವಿಂಗ್ಸ್ ಜಾಸ್ತಿಯಿದ್ದರೆ, ಕನಿಷ್ಠ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಿ. ಇದು ನಿಮ್ಮ ಬಡ್ಡಿಯನ್ನು ಕಡಿಮೆ ಮಾಡುತ್ತದೆ. ಎರಡನೇಯದ್ದು, ಡೆಟ್ ಸ್ಲೋಬಾಲ್, ಇದರರ್ಥ ನೀವು ಮೊದಲು ಸಣ್ಣ ಸಾಲಗಳನ್ನು ಪಾವತಿಸಿ. ನಂತರ, ದೊಡ್ಡ ಸಾಲವನ್ನು ಮರುಪಾವತಿಸಲು ಸಾಕಷ್ಟು ಮೊತ್ತ ನಿಮ್ಮ ಬಳಿ ಉಳಿಯುತ್ತದೆ.
ನಿಮ್ಮ ಕ್ರೆಡಿಟ್ ಮಿತಿಯನ್ನು ವೈಯಕ್ತಿಕ ಸಾಲವಾಗಿ ಪರಿವರ್ತಿಸುವುದು ಮತ್ತು ಸುಲಭ ಕಂತುಗಳಲ್ಲಿ ಪಾವತಿಸುವುದು. ಸಾಮಾನ್ಯವಾಗಿ, ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳು ಕ್ರೆಡಿಟ್ ಕಾರ್ಡ್ ಬಡ್ಡಿಗಳ ಬಡ್ಡಿದರಗಳಿಗಿಂತ ಕಡಿಮೆ ಇರುತ್ತದೆ. ಕ್ರೆಡಿಟ್ ಕಾರ್ಡ್ ಪೇಮೆಂಟ್ ಅನ್ನು ಮರೆಯದಂತೆ, ಆಟೋಮ್ಯಾಟಿಕ್ ಪೇಮೆಂಟ್ ಅನ್ನು ಸೆಟ್ ಮಾಡಿ. ಇದರಿಂದ ಪೇಮೆಂಟ್ ವಿಳಂಬವಾಗುವುದಿಲ್ಲ.
ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಪಾವತಿಸಬೇಕಾದರೆ, ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಒಂದೇ ಖಾತೆಯಲ್ಲಿ ಮಾಡಬಹುದು. ಹೀಗೆ ಮಾಡಿದಾಗ, ಪ್ರತ್ಯೇಕ ಪಾವತಿ ಮಾಡುವ ಬದಲು ಒಂದೇ ಪಾವತಿಯನ್ನು ಮಾಡಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಸಾಲವು ಭಾರೀ ಪರಿಣಾಮ ಬೀರುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಖರ್ಚುಗಳನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಬೇಕು. ನೀವು ಸಂಬಳ ಪಡೆದ ತಕ್ಷಣ, ಮೊದಲು ಕ್ರೆಡಿಟ್ ಕಾರ್ಡ್ ಬಾಕಿಗಳನ್ನು ತೆರವುಗೊಳಿಸಲು ಪ್ರಯತ್ನಿಸಬೇಕು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸಹ ಸುಧಾರಿಸುತ್ತದೆ.