2025ರವರೆಗೆ ಈ ರಾಶಿಯವರಿಗೆ ಗುರು ಬಲ ! ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ನಿಮ್ಮದೇ! ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಸಮಯ ಇದು

Mon, 01 Jul 2024-8:34 am,

ನವ ಗ್ರಹಗಳ ಪೈಕಿ ಗುರು ಅತ್ಯಂತ ಮಂಗಳಕರ ಗ್ರಹ. ಗುರು ಭಗವಾನ್ ಜ್ಞಾನ, ಶಿಕ್ಷಣ, ಸಂಪತ್ತು, ಮದುವೆ, ಮಕ್ಕಳ ಅಂಶ ಗ್ರಹ.ಗುರು ವರ್ಷಕ್ಕೊಮ್ಮೆ ತನ್ನ ರಾಶಿ ಬದಲಿಸುತ್ತಾನೆ.   

ಇತ್ತೀಚೆಗೆ ಅಂದರೆ ಮೇ 1 ರಂದು ಗುರು ವೃಷಭರಾಶಿಯಲ್ಲಿ ಸಂಕ್ರಮಿಸಿದ್ದಾನೆ. ಗುರುವಿನ ಈ ಸಂಕ್ರಮಣವನ್ನು ವರ್ಷದ ಅತಿ ದೊಡ್ಡ ಜ್ಯೋತಿಷ್ಯ ಘಟನೆ ಎಂದು ಪರಿಗಣಿಸಲಾಗಿದೆ.2025ರವರೆಗೆ ಗುರು ಈ ರಾಶಿಯಲ್ಲಿ ಇರುತ್ತಾನೆ.ಹಾಗಾಗಿ ಮುಂದಿನ ಒಂದು ವರ್ಷ ಕೆಲವು ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಾರೆ. 

ವೃಷಭ ರಾಶಿಯವರಿಗೆ ಬಡ್ತಿಯಾಗಿ ವೇತನ ಹೆಚ್ಚಳವಾಗುವ ಸಾಧ್ಯತೆಯಿದೆ. ವೃತ್ತಿಯಲ್ಲಿ ಉತ್ತಮ ಬೆಳವಣಿಗೆ ಮತ್ತು ಅನೇಕ ಹೊಸ ಅವಕಾಶಗಳು ಕಂಡುಬರುತ್ತವೆ. ಈ ಅವಧಿಯಲ್ಲಿ ನೀವು ಏನೇ ಮಾಡಿದರೂ ಲಾಭ ನಿಮ್ಮದೇ. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. 

ಈ ಸಮಯ ನಿಮ್ಮ ಜೀವನದಲ್ಲಿ ವರದಾನವಿದದ ಹಾಗೆ. ಹಿಡಿದ ಕೆಲಸಕ್ಕೆ ಅದೃಷ್ಟದ ಬೆಂಬಲ ಸಂಪೂರ್ಣವಾಗಿ ಇರುತ್ತದೆ. ಸಮಾಜದಲ್ಲಿ ಮೌಲ್ಯ ಮತ್ತು ಗೌರವ ಹೆಚ್ಚಾಗುತ್ತದೆ. ಇನ್ನು ನಿಮ ಜೀವನದಲ್ಲಿ ಸೋಲಿಗೆ ಜಾಗವಿಲ್ಲ. ಹಳೆಯ ಸಾಲಗಳಿಂದ ಮುಕ್ತರಾಗುತ್ತೀರಿ.

ವ್ಯಾಪಾರದಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದೆ.ಆರ್ಥಿಕ ಲಾಭಕ್ಕಾಗಿ ಹಲವು ಹೊಸ ಅವಕಾಶಗಳು ದೊರೆಯಲಿವೆ.ಆದಾಯಕ್ಕೆ ಹೊಸ ಅವಕಾಶಗಳು ದೊರೆಯಲಿವೆ.  ಹೊಸ ಆಸ್ತಿ, ವಾಹನ ಇತ್ಯಾದಿಗಳನ್ನು ಖರೀದಿಸಬಹುದು.ಅದೃಷ್ಟ ನಿಮ್ಮ ಕಡೆ ಇರುತ್ತದೆ.  

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link