12 ವರ್ಷಗಳ ನಂತರ ಈ ರಾಶಿಯವರ ಜೀವನದಲ್ಲಿ ಗುರು ದೆಸೆ! ಪ್ರತೀ ಕೆಲಸದಲ್ಲಿಯೂ ಸಿಗಲಿದೆ ಅದ್ಭುತ ಯಶಸ್ಸು

Wed, 11 Jan 2023-8:49 am,

ಮೇಷ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಒಡೆಯ ಗುರು, ಏಪ್ರಿಲ್ 22 ರಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ಮೇಷ ರಾಶಿಯವರು ಏನೇ ಕೆಲಸ ಮಾಡಿದರೂ ನೀವು ಬಯಸುವ ಫಲಿತಾಂಶವೇ ಸಿಗಲಿದೆ. ಉದ್ಯೋಗದಲ್ಲಿರುವವರಿಗೆ ಈ ಅವಧಿಯಲ್ಲಿ ಬಡ್ತಿ ಸಿಗಲಿದೆ.  ವ್ಯಾಪಾರಸ್ಥರು ವ್ಯಾಪಾರದಲ್ಲಿ ಉತ್ತಮ ಲಾಭ ಗಳಿಸಲಿದ್ದಾರೆ. ಅವಿವಾಹಿತರಿಗೆ ವಿವಾಹ ಸಂಬಂಧ ಮಾತುಕತೆ ಸಫಲವಾಗಲಿದೆ.   

ಕರ್ಕಾಟಕ ರಾಶಿ : ಗುರುವಿನ ಈ ಸಂಚಾರವು ಕರ್ಕಾಟಕ ರಾಶಿಯವರಿಗೂ ಮಂಗಳಕರವೆಂದು ಸಾಬೀತಾಗಲಿದೆ.  ಕರ್ಕಾಟಕ ರಾಶಿಯವರ ಜಾತಕದಲ್ಲಿ ಗುರುವಿನ ಸಂಕ್ರಮಣ ವು ಕಾರ್ಯದ ಮನೆಯಲ್ಲಿ ನಡೆಯಲಿದೆ. ಹಾಗಾಗಿ ಈ ಸಮಯದಲ್ಲಿ ಆರ್ಥಿಕ ಲಾಭವಾಗಲಿದೆ. ವೃತ್ತಿಜೀವನಕ್ಕೆ ಕಾಲಿಡುವವರಿಗೆ ಈ ಸಮಯ ಅದ್ಭುತವಾಗಿರಲಿದೆ. ನೀವು ಬಯಸುವ ಉದ್ಯೋಗ ಸಿಗಲಿದೆ. ವ್ಯಾಪಾರಸ್ಥರಿಗೂ ಉತ್ತಮ ಲಾಭವಾಗಲಿದೆ. 

ಮೀನ ರಾಶಿ :ಗುರುವಿನ ಸಂಕ್ರಮಣವು ಮೀನ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ರಾಶಿಯವರ ಜಾತಕದ ಎರಡನೇ ಮನೆಯಲ್ಲಿ ಈ ಸಂಕ್ರಮಣ ನಡೆಯಲಿದೆ. ಇದನ್ನು ಸಂಪತ್ತು ಮತ್ತು ಮಾತಿನ ಸ್ಥಳವೆಂದು ಹೇಳಲಾಗುತ್ತದೆ. ಈ ಹೊತ್ತಿನಲ್ಲಿ ಹಠಾತ್ ವಿತ್ತೀಯ ಲಾಭವಾಗಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link