ಈ ದೇಶದಲ್ಲಿ ಕೇವಲ 40 ನಿಮಿಷಗಳವರೆಗೆ ಮಾತ್ರ ಕತ್ತಲಾಗುತ್ತದೆ
ನಾರ್ವೆಯಲ್ಲಿ, ಸೂರ್ಯ ಮಧ್ಯಾಹ್ನ 12:43 ಕ್ಕೆ ಅಸ್ತಮಿಸುತ್ತಾನೆ. 40 ನಿಮಿಷಗಳ ನಂತರ ಮತ್ತೆ ಉದಯಿಸುತ್ತಾನೆ. ಅದಕ್ಕಾಗಿಯೇ ಇದನ್ನು 'ಕಂಟ್ರಿ ಆಫ್ ಮಿಡ್ನೈಟ್ ಸನ್' ಎಂದೂ ಕರೆಯುತ್ತಾರೆ. ಈ ದೇಶವು ಆರ್ಕ್ಟಿಕ್ ವೃತ್ತದಲ್ಲಿ ಬರುತ್ತದೆ. ಈ ಕಾರಣದಿಂದಾಗಿ, ಮೇ ಮತ್ತು ಜುಲೈ ನಡುವೆ ಸುಮಾರು 76 ದಿನಗಳವರೆಗೆ ಇಲ್ಲಿ ಸೂರ್ಯ ಮುಳುಗುವುದಿಲ್ಲ.
ಉತ್ತರ ನಾರ್ವೆಯಲ್ಲಿ ಚಳಿಗಾಲದಲ್ಲಿ ಸೂರ್ಯ ಉದಯಿಸುವುದಿಲ್ಲ. ಆದರೆ, ಬೇಸಿಗೆ ಕಾಲದಲ್ಲಿ ಈ ಪ್ರದೇಶದಲ್ಲಿ ಸೂರ್ಯ ಮುಳುಗುವುದಿಲ್ಲ. ನಾರ್ವೆಯ ರೋರೋಸ್ ನಗರವನ್ನು ಅತ್ಯಂತ ಶೀತ ಸ್ಥಳವೆಂದು ಪರಿಗಣಿಸಲಾಗಿದೆ. ಇಲ್ಲಿ ತಾಪಮಾನ ಮೈನಸ್ 50 ಡಿಗ್ರಿಗೆ ಇಳಿಯುತ್ತದೆ.
ನಾರ್ವೆಯ ಸೌಂದರ್ಯ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದು ಪ್ರಕೃತಿ ಪ್ರಿಯರಿಗೆ ಬಹಳ ಇಷ್ಟವಾಗುವ ತಾಣವಾಗಿದೆ. ಇಲ್ಲಿನ ನೈಸರ್ಗಿಕ ಹುಲ್ಲುಗಾವಲುಗಳು ಎಲ್ಲರ ಮನ ಸೂರೆಗೊಳ್ಳುತ್ತವೆ.
ನಾರ್ವೆ ನಿಜವಾಗಿಯೂ ಭೂಮಿಯ ಮೇಲಿನ ಸ್ವರ್ಗವಾಗಿದೆ. ಹಿಮದಿಂದ ಆವೃತವಾದ ಪರ್ವತಗಳು ಮತ್ತು ಹಚ್ಚ ಹಸಿರಿನ ಇಳಿಜಾರುಗಳು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಹಿಮಪಾತದ ನಂತರ, ನಗರಗಳ ನೋಟವು ಮತ್ತಷ್ಟು ಸುಂದರವಾಗಿ ಕಾಣುತ್ತದೆ.
ಇಲ್ಲಿ ಮನೆಯ ಮಧ್ಯದಿಂದ ಕಾಣುವ ಸಮುದ್ರ ನೋಟ ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿನ ಸುಂದರ ನೀಲಿ ನೀರಿನ ದಡದಲ್ಲಿ ಕಟ್ಟಿರುವ ಮನೆಗಳಲ್ಲಿ ವಾಸಿಸುವುದು ಸ್ವರ್ಗದ ಅನುಭೂತಿಗಿಂತ ಕಡಿಮೆಯಿಲ್ಲ.