Gold Rate Hike:ಸತತ ಕುಸಿತದ ಬಳಿಕ ಚಿನ್ನದ ಬೆಲೆ ಭಾರೀ ಏರಿಕೆ.. 7,600 ರೂಪಾಯಿ ಹೆಚ್ಚಳ, 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ನಾಲ್ಕು ದಿನಗಳ ಸತತ ಕುಸಿತದ ನಂತರ ಸೋಮವಾರ ಚಿನ್ನದ ಬೆಲೆ ಏರಿಕೆಯಾಗಿದೆ.
ದೇಶಿಯ ಚಿನ್ನದ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.
ನವೆಂಬರ್ ಆರಂಭದಿಂದಲೂ ದಾಖಲೆ ಕುಸಿತ ಕಂಡ ಚಿನ್ನದ ಬೆಲೆ ಇದೀಗ ಏರಿಕೆಯಾಗಿದೆ.
ಒಂದೇ ದಿನದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 7,600 ರೂಪಾಯಿ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 7,000 ರೂಪಾಯಿ ಏರಿಕೆಯಾಗಿದೆ.
10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 77,070 ರೂಪಾಯಿ ಆಗಿದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 70,650 ರೂಪಾಯಿ ಆಗಿದೆ.
ಬೆಳ್ಳಿ ಬೆಲೆಯಲ್ಲೂ ಬಹುದೊಡ್ಡ ಏರಿಕೆ ಕಂಡುಬಂದಿದೆ. ನಿನ್ನೆ 89,500 ರೂಪಾಯಿ ಆಗಿದ್ದ ಬೆಳ್ಳಿಯ ಬೆಲೆ ಇಂದು 91,500 ರೂಪಾಯಿ ಆಗಿದೆ.
ಗಮನಿಸಿ: ಚಿನ್ನ ಖರೀದಿಸುವ ಮುನ್ನ ಒಮ್ಮೆ ಬೆಲೆಯನ್ನು ಪರಿಶೀಲಿಸಲು, ನೀವು 8955664433 ಗೆ ಮಿಸ್ಡ್ ಕಾಲ್ ನೀಡಬಹುದು.