Sudden Weight Loss: ಇದ್ದಕ್ಕಿದ್ದಂತೆ ತೂಕ ಇಳಿಕೆಯಾಗಿದ್ಯಾ? ಈ ರೋಗಗಳ ಲಕ್ಷಣವೂ ಆಗಿರಬಹುದು ಎಚ್ಚರ
ಯಾವುದೇ ಉದ್ದೇಶವಿಲ್ಲದೆ ಇದ್ದಕ್ಕಿದ್ದಂತೆ ನಿಮ್ಮ ತೂಕ ಕಡಿಮೆಯಾಗಿದ್ದರೆ ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಇದು ಕೆಲವು ಆರೋಗ್ಯ ಸಮಸ್ಯೆಗಳ ಲಕ್ಷಣವೂ ಆಗಿರಬಹುದು.
ಮಧುಮೇಹ ಅಥವಾ ಡಯಾಬಿಟಿಸ್ ಸಮಸ್ಯೆ ಇದ್ದಾಗಲೂ ಕೂಡ ನಿಮ್ಮ ದೇಹದ ತೂಕ ಇದ್ದಕ್ಕಿದ್ದಂತೆ ಇಳಿಕೆಯಾಗಬಹುದು.
ದಿಢೀರ್ ತೂಕ ಇಳಿಕೆ ಜಠರ ಹುಣ್ಣಿನ ಅಥವಾ ಹೊಟ್ಟೆ ಹುಣ್ಣಿನ ಪ್ರಮುಖ ಲಕ್ಷಣವಾಗಿದೆ.
ಕರುಳಿನಲ್ಲಿ ಪರಾವಲಂಬಿ ಮುತ್ತಿಕೊಳ್ಳುವಿಕೆ ಅಥವಾ ಕರುಳಿನ ಸೋಂಕಿನ ಸಂದರ್ಭದಲ್ಲೂ ಹಠಾತ್ ತೂಕ ನಷ್ಟ ಉಂಟಾಗಬಹುದು.
ನಿಮ್ಮ ಮನಸ್ಸಿನಲ್ಲಿ ಆತಂಕ, ಭಯ, ಕೋಪ, ಹತಾಶೆಯಂತಹ ಭಾವನೆಗಳಿಂದಾಗ್ಯೂ ಉದ್ದೇಶಪೂರ್ವಕವಲ್ಲದ ತೂಕ ನಷ್ಟಕ್ಕೆ ಕಾರಣವಾಗಬಹುದು.
ಸ್ತನ, ಶ್ವಾಸಕೋಶ, ಮೇದೋಜ್ಜೀರಕ ಗ್ರಂಥಿ, ಅಂಡಾಶಯ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ಯಾವುದೇ ರೀತಿಯ ಕ್ಯಾನ್ಸರ್‌ಗಳ ಸಂದರ್ಭದಲ್ಲೂ ತೂಕ ಇಳಿಕೆ ಅದರ ಮೊದಲ ಗಮನಾರ್ಹ ಚಿಹ್ನೆಯಾಗಿದೆ.
ದೇಹದಲ್ಲಿ ಥೈರಾಯ್ಡ್ ಸಮಸ್ಯೆ ಇದ್ದಾಗಲೂ ಕೂಡ ಹಠಾತ್ ತೂಕ ಇಳಿಕೆಗೆ ಕಾರಣವಾಗಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.