ಸುದೀಪ್‌ ಬಿಗ್‌ ಬಾಸ್‌ ತೊರೆಯಲು ಅಸಲಿ ಕಾರಣವೇ ಇದು.. ಕಿಚ್ಚನ ಮನಸ್ಸಿಗೆ ಘಾಸಿ ಮಾಡಿದ್ದೇ ಆ ಒಂದು ವಿಚಾರ !!

Mon, 14 Oct 2024-11:52 am,

Sudeep quit bigg boss kannada : ಸುದೀಪ್‌ ನಿನ್ನೆ ಬಿಗ್‌ ಬಾಸ್‌ ತೊರೆಯುವ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ. 

ಬಾದ್‌ಷಾ ಸುದೀಪ್‌ ಬಿಗ್‌ ಬಾಸ್‌ ಗೆ ಇವರೇ ಮುಕುಟ. ಸುದೀಪ್‌ ನಿರೂಪಣೆ ಮಾಡುವ ಕೊನೆಯ ಬಿಗ್‌ ಬಾಸ್‌ ಸೀಸನ್‌ ಇದಾಗಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಸುದೀಪ್‌  ನೋಡಲು ಸಿಗೋದಿಲ್ಲ. ಈ ಬೇಸರ ಎಲ್ಲ ಬಿಗ್‌ ಬಾಸ್‌ ಪ್ರೇಮಿಗಳನ್ನೂ ಕಾಡುತ್ತಿದೆ. 

ಸುದೀಪ್‌ ನಿನ್ನೆ ಅಧಿಕೃತವಾಗಿ ಇದೇ ನನ್ನ ಬಿಗ್‌ ಬಾಸ್‌ ಕೊನೆಯ ಸೀಸನ್.‌ ಮುಂದಿನ ಸೀಸನ್‌ ಹೋಸ್ಟ್‌ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದ್ದಕ್ಕಿದ್ದಂತೆ ಸುದೀಪ್‌ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ. 

ಸುದೀಪ್‌ ಮನಸ್ಸಿಗೆ ಒಂದು ವಿಚಾರ ಘಾಸಿ ಮಾಡಿದೆ. ಇದೇ ಕಾರಣಕ್ಕೆ ಸುದೀಪ್‌ ಬಿಗ್‌ ಬಾಸ್‌ ನಿರೂಪಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. 

ಸುದೀಪ್‌ ಬಿಗ್‌ ಬಾಸ್‌ ಕನ್ನಡಕ್ಕಾಗಿ ಮೂರು ತಿಂಗಳನ್ನು ಮೀಸಲಿಡಬೇಕಾಗುತ್ತದೆ. ಇದರಲ್ಲಿ ಪ್ರತಿ ಶುಕ್ರವಾರವೂ ಸುದೀಪ್‌ ಎಲ್ಲ ಕೆಲಸಗಳನ್ನು ಬಿಟ್ಟು ಬಿಗ್‌ ಬಾಸ್‌ ಸೆಟ್‌ಗೆ ಬರಬೇಕಾಗುತ್ತದೆ.

ಇಲ್ಲಿ ಎರಡು ದಿನಗಳನ್ನು ಸುದೀಪ್‌ ಕಳೆಯುತ್ತಾರೆ. ಇದು ಸುದೀಪ್‌ ಅವರ ಸಿನಿಮಾಗಳ ಮೇಲೆ ಪರಿಣಾಮ ಬೀರುತ್ತಿದೆ. 

2022 ರ ವಿಕ್ರಾಂತ್‌ ರೋಣ ಬಳಿಕ ಸುದೀಪ್‌ ಯಾವ ಸಿನಿಮಾಗಳನ್ನೂ ರಿಲೀಸ್‌ ಮಾಡಿಲ್ಲ. ಇದು ಸುದೀಪ್‌ ಮನಸ್ಸಿಗೆ ಬೇಸರ ತಂದಿರಬಹುದು ಎನ್ನಲಾಗಿದೆ. 

ನಟನಾಗಿ ಸಾಕಷ್ಟು ಹೆಸರು ಖ್ಯಾತಿ ಗಳಿಸಿರುವ ಸುದೀಪ್‌  ಗೆ ಸಿನಿಮಾ ಮೊದಲ ಆದ್ಯತೆ.  ಹೀಗಾಗಿ ಇನ್ನು ಮುಂದೆ ವರ್ಷಕ್ಕೆ ಮೂರು ಸಿನಿಮಾಗಳನ್ನಾದರೂ ಮಾಡಬೇಕು ಎಂದು ಸುದೀಪ್‌ ನಿರ್ಧರಿಸಿದ್ದಾರಂತೆ. 

ಇದೇ ಕಾರಣಕ್ಕೆ ಸುದೀಪ್‌ ಬಿಗ್‌ ಬಾಸ್‌ ನಿರೂಪಣೆ ತೊರೆದು ತಮ್ಮ ಸಂಪೂರ್ಣ ಸಮಯವನ್ನು ಸಿನಿಮಾ ಮಾಡುವಲ್ಲಿ ಮೀಸಲಿಡಲಿದ್ದಾರೆ ಎನ್ನಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link