ಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ.. ಈ ಸಿಂಪಲ್ ಹುಡುಗಿ ಬಾದ್ ಷಾ ಮನದರಸಿ ಆಗಿದ್ದು ಹೇಗೆ?
ಕಿಚ್ಚ ಸುದೀಪ್ ಚಿಕ್ಕ ವಯಸ್ಸಿನಲ್ಲಿಯೇ ನಟನೆಯಲ್ಲಿ ಆಸಕ್ತಿ ಹೊಂದಿದ್ದರು. ಈ ಕಾರಣಕ್ಕೆ ಕಾಲೇಜೊಂದರಲ್ಲಿ ನಾಟಕ ತರಬೇತಿಗೆ ಸೇರಿಕೊಳ್ಳುತ್ತಾರೆ.
ಅಲ್ಲಿಂದ ಶುರುವಾಗುತ್ತೆ ಇವರ ಫಸ್ಟ್ ಲವ್. ಆ ಹುಡುಗಿ ಸಹ ಇದೇ ಕಾಲೇಜಿನಲ್ಲಿ ಓದುತ್ತಿದ್ದರು. ನಿತ್ಯ ನಾಟಕ ಪ್ರ್ಯಾಕ್ಟೀಸ್ ಮಾಡಲು ಬರುತ್ತಿದ್ದ ಸುದೀಪ್ ಕಣ್ಣಿಗೆ ಆ ಸುಂದರಿ ಬೀಳುತ್ತಾರೆ.
ಮೊದಲ ನೋಟದಲ್ಲಿಯೇ ಆಕೆಯ ಮೇಲೆ ಪ್ರೀತಿ ಹುಟ್ಟುತ್ತೆ. ತುಂಬಾ ಇಷ್ಟವಾಗಿ ಬಿಡುತ್ತಾರೆ. ಆ ಹುಡುಗಿಗೂ ಸುದೀಪ್ ಧ್ವನಿ ಕೇಳಿ ಪ್ರೀತಿ ಶುರುವಾಗುತ್ತೆ. ಇಬ್ಬರೂ ಮನಸಲ್ಲಿಯೇ ಗುಟ್ಟಾಗಿ ಒಬ್ಬರನ್ನೊಬ್ಬರು ಇಷ್ಟಪಡಲು ಶುರು ಮಾಡುತ್ತಾರೆ.
ಕೇರಳದ ಹುಡುಗಿ ಮಲೆನಾಡಿನ ಹುಡುಗನಿಗೆ ಮನಸೋಲುತ್ತಾರೆ. ಇಬ್ಬರೂ ಒಬ್ಬರ ಪ್ರೀತಿಯನ್ನು ಇನ್ನೊಬ್ಬರಿಗೆ ಹೇಳಿಕೊಳ್ಳುತ್ತಾರೆ.
ಸುದೀಪ್ ಮೊದಲು ಪ್ರೀತಿಸಿದ ಆ ಹುಡುಗಿಯೇ ಅವರ ಬಾಳ ಸಂಗಾತಿಯಾಗಿ ಜೀವನದ ಎಲ್ಲ ಏಳು ಬೀಳುಗಳಲ್ಲಿ ಜೊತೆಯಾಗಿದ್ದಾರೆ.
ಕಿಚ್ಚನ ಆ ಮನದರಸಿಯೇ ಪ್ರಿಯಾ ಸುದೀಪ್. ಪ್ರಿಯಾ ಮದುವೆಗೂ ಮುನ್ನ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದರು. ಸುದೀಪ್ ಜೀವನದ ಪ್ರತಿ ಹಂತದಲ್ಲೂ ಪ್ರಿಯಾ ಪಾತ್ರ ಬಹಳ ಪ್ರಮುಖವಾಗಿದೆ.