Sudeep Birthday: ಸುದೀಪ್ ನಟನೆಯ ಮೊದಲ ಸಿನಿಮಾ‌ `ಸ್ಪರ್ಶ` ಅಲ್ಲ.!

Mon, 02 Sep 2024-10:22 am,

ಕಿಚ್ಚ ಸುದೀಪ್‌ ಇಂದು 50 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟ ಸುದೀಪ್‌ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ಹುಚ್ಚ ಸಿನಿಮಾ ಬಳಿಕ ಸುದೀಪ್ ಸಿನಿ ಕರಿಯರ್‌ ಗೋಲ್ಡನ್‌ ಅಧ್ಯಾಯ ಶುರುವಾಯಿತು. ಕನ್ನಡ ಮಾತ್ರವಲ್ಲ ತೆಲುಗು, ಹಿಂದಿ, ಹಾಗೂ ತಮಿಳು ಸೇರಿದಂತೆ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅನೇಕರು ಸುದೀಪ್‌ ನಟಿಸಿದ ಮೊದಲ ಸಿನಿಮಾ ಸ್ಪರ್ಶ ಎಂದುಕೊಂಡಿದ್ದಾರೆ. ಆದರೆ ಸುದೀಪ್‌ ನಟನೆಯ ಮೊದಲ ಚಿತ್ರ ಸ್ಪರ್ಶ ಅಲ್ಲ. 

ಕ್ಯಾಮರಾ ಮುಂದೆ ಮೊದಲ ಬಾರಿಗೆ ಸುದೀಪ್‌ ನಿಂತಿದ್ದು 28 ವರ್ಷಗಳ ಹಿಂದೆ ಜನವರಿ 31ರಂದು. ಸುದೀಪ್ ಮೊದಲು ಅಭಿನಯಿಸಿದ ಈ ಚಿತ್ರ ʻಬ್ರಹ್ಮʼ. ಈ ಸಿನಿಮಾದಲ್ಲೇ ಸುದೀಪ್‌ ಮೊದಲ ಬಾರಿಗೆ ಬಣ್ಣ ಹಚ್ಚಿದರು. 

ಸ್ಪರ್ಶ ಸಿನಿಮಾಗಿಂತ ಮೊದಲು ಸುದೀಪ್‌ ಬ್ರಹ್ಮ ಚಿತ್ರದಲ್ಲಿ ನಟಿಸಿದ್ದರು. ಸುದೀಪ್ ನಟನೆಯ ಮೊದಲ ಸಿನಿಮಾ ಬ್ರಹ್ಮ ರಿಲೀಸ್‌ ಆಗಲೇ ಇಲ್ಲ.

ಕಿಚ್ಚನ ಮೊದಲ ಮೂರು ಸಿನಿಮಾಗಳಲ್ಲಿ ಬ್ರಹ್ಮ, ಓ ಕುಸುಮ ಬಾಲೆ ಬಿಡುಗಡೆ ಭಾಗ್ಯ ಕಾಣಲಿಲ್ಲ. 

ಸ್ಪರ್ಶ ಚಿತ್ರದ ಮೂಲಕ ನಟ ಸುದೀಪ್‌ ಖ್ಯಾತಿ ಪಡೆದರು. ನಂತರ ಬಂದ ಹುಚ್ಚ ಸಿನಿಮಾ ಸೋಲಿನ ನೋವು ಮರೆಯುವಂತಹ ಯಶಸ್ಸು ನೀಡಿತು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link