ಖ್ಯಾತ ಆಂಕರ್‌ಗೆ ಕೂಡಿಬಂತು ಕಂಕಣ ಭಾಗ್ಯ! ಸ್ಟಾರ್ ನಿರೂಪಕನ ಕುಡಿಯೊಂದಿಗೆ ಮದುವೆ ನಿಶ್ಚಯ!!
Anchor Sudheer Marriage: ಸಿನಿಮಾದಲ್ಲಿ ಚ್ಯಾನ್ಸ್ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸಿನಿಮಾದಲ್ಲಿ ಸ್ಟಾರ್ ಆಗಿ ಮೆರೆಯಬೇಕೆಂದರೆ ಅದಕ್ಕೆ ನಾನಾ ಕಷ್ಟಗಳು ಪಡಬೇಕು, ಅದರಲ್ಲೂ ಚ್ಯಾನ್ಸ್ ಗಿಟ್ಟಿಸಿಕೊಳ್ಳಬೇಕು ಅಂದ್ರೆ ತಪ್ಪಸ್ಸು ಮಾಡಬೇಕು. ಈ ರೀತಿ ಒಂದು ಸಣ್ಣ ಕಾರ್ಯಕ್ರಮದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸುಧೀರ್ ಇಂದು ಬಹುಬೇಡಿಕೆ ಆಂಕರ್ ಹಾಗೂ ನಟ ಕೂಡ ಹೌದು.
ಸುಡಿಗಾಲಿ ಸುಧೀರ್ ಅವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ ಅಂದ್ರೆ ಆ ಕಾರ್ಯಕ್ರಮಕ್ಕೆ ಇರುವ ಕ್ರೇಜ್ ಬೇರೆಯದ್ದೆ ರೀತಿ ಇರುತ್ತೆ. ಪ್ರೇಕ್ಷಕರು ಮೆಚ್ಚಿ ಆ ಕಾರ್ಯಕ್ರಮವನ್ನು ನೋಡುತ್ತಾರೆ. ನಿರೂಪಣೆ ಮೂಲಕ ಸುಡಿಗಾಲಿ ಸುಧೀರ್ ಮನೆಮಗನಾಗಿದ್ದಾರೆ.
ಜಬರ್ದಸ್ತ್ ಎಂಬ ಕಾರ್ಯಕ್ರಮದ ಮೂಲಕ ಸಿನಿಮಾ ಜೀವನವನ್ನು ಆರಂಭಿಸಿದ ಸುದೀರ್ ಇಂದು ಸ್ಟಾರ್ ಅಂತಲೇ ಹೇಳಬಹುದು. ಈ ಕಾರ್ಯಕ್ರಮದೊಂದಿಗೆ ಸುಧೀರ್ ಅವರಿಗೆ ಆಂಕರ್ ಆಗುವ ಅವಕಾಶ ಸಿಕ್ಕಿತು. ಸಾಫ್ಟ್‌ವೇರ್ ಸುಧೀರ್, 3 ಮಂಕೀಸ್, ವಾಂಟೆಡ್ ಫೆಸ್ಟಿವಲ್, ಗಲೋಡು ಮುಂತಾದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಸುಧೀರ್ ಕುರಿತು ಇದೀಗ ಬಿಗ್ ಅಪ್ಡೇಟ್ ಒಂದು ಸಿಕ್ಕಿದೆ.
ನಟಿ, ನಿರೂಪಕಿ ರಶ್ಮಿ ಅವರೊಂದಿಗೆ ಸುಧೀರ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿರುತ್ತದೆ, ಈ ಇಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರ ಫೆವರೆಟ್ ಅಂತಲೇ ಹೇಳಬಹುದು. ಈ ಇಬ್ಬರ ಜೋಡಿಗೆ ಒಂದು ಸೆಪೆರೇಟ್ ಫ್ಯಾನ್ಸ್ ಬೇಸ್ ಇದೆ ಅಂತಲೇ ಹೇಳಬಹುದು.
ಆನ್ ಸ್ಕ್ರೀನ್‌ನಲ್ಲಿ ಈ ಜೋಡಿಯನ್ನು ನೋಡಿ ಪ್ರೇಕ್ಷಕರು ಇವರಿಬ್ಬರು ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎಂದುಕೊಂಡಿದ್ದರು. ಇದೀಗ ಈ ನಂಬಿಕೆ ಇದೀಗ ಹುಸಿಯಾಗಿದೆ. ಸುಧೀರ್‌ಅ ವರ ಮದುವೆ ಸುದ್ದಿ ಇದೀಗ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ.
ಸುಧೀರ್ ಮದುವೆಯ ಕುರಿತಾದ ಚರ್ಚೆಗಳು ಇದೀಗ ಶುರುವಾಗಿದ್ದು, ನಟ-ನಿರೂಪಕ ಶೀಘ್ರವೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಸುಧೀರ್ ಯಾರನ್ನು ಮದುವೆಯಾಗಲಿದ್ದಾರೆ ಎನ್ನುವ ಅನುಮಾನ ನಿಮಗೂ ಕೂಡ ಇರಬಹುದು. ಈತ ಖ್ಯಾತ ನಿರ್ಮಾಪಕನ ಮಗಳನ್ನು ಕೈ ಹಿಡಿಯಲಿದ್ದಾನೆ ಎನ್ನು ಸುದ್ದಿ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಇನ್ನೂ, ಈ ಮದುವೆ ಸುದ್ದಿ ನಿಜವೋ ಸುಳ್ಳೋ ಎಂಬ ಸತ್ಯದ ಕುರಿತು ಸುಡಿಗಾಲಿ ಸುಧೀರ್ ಅವರೆ ಸ್ಪಷ್ಟನೆ ಕೊಡಬೇಕಿದೆ.