Sugar Free Mangoes: Diabetes ರೋಗಿಗಳಿಗೊಂದು ಸಂತಸದ ಸುದ್ದಿ
1. ಇನ್ಮುಂದೆ ಸಕ್ಕರೆ ಕಾಯಿಲೆ (Diabetes) ಇರುವವರೂ ಕೂಡ ಮಾವು ಸೇವಿಸಬಹುದು - ಇದೀಗ ಮಧುಮೇಹ ರೋಗಿಗಳು ಕೂಡ ಬೇಸಿಗೆಯಲ್ಲಿ ಮಾವಿನಹಣ್ಣು ತಿನ್ನುವ ಹವ್ಯಾಸವನ್ನು ಪೂರೈಸಬಹುದು. ಪಾಕಿಸ್ತಾನದಲ್ಲಿ (Pakistan) ಮೂರು ಹೊಸ ಜಾತಿಯ ಸಕ್ಕರೆ ಮುಕ್ತ ಮಾವಿನಹಣ್ಣನ್ನು ತಯಾರಿಸಲಾಗಿದೆ. ಯಾವುದೇ ಮಧುಮೇಹ ರೋಗಿಯು ಈ ಜಾತಿಯ ಮಾವಿನಹಣ್ಣನ್ನು ಸುಲಭವಾಗಿ ತಿನ್ನಬಹುದು. ವರದಿಯ ಪ್ರಕಾರ, ಸಿಂಧ್‌ನ ತಾಂಡೋ ಅಲ್ಲಾಹಾರ್‌ನಲ್ಲಿರುವ ಖಾಸಗಿ ಜಮೀನಿನಲ್ಲಿ ವೈಜ್ಞಾನಿಕವಾಗಿ ಮಾರ್ಪಡಿಸುವ ಮೂಲಕ ಈ ಮೂರು ಪ್ರಜಾತಿಯ ಮಾವನ್ನು ತಯಾರಿಸಲಾಗಿದೆ.
2. ಪಾಕಿಸ್ತಾನದಲ್ಲಿ ಸಿದ್ಧಗೊಂಡಿವೆ ಶುಗರ್ ಫ್ರೀ ಮಾವು - ತಾಂಡೋ ಅಲ್ಲಾಹಾರ್‌ನಲ್ಲಿ ಮಾವಿನ ಕೃಷಿ ಮಾಡುತ್ತಿರುವ ರೈತ ಗುಲಾಮ್ ಸರ್ವಾರ್ (Ghulam Sarvar) ಈ ಹೊಸ ಪ್ರಭೇದದ ಮಾವಿನ ಹಣ್ಣುಗಳನ್ನು ಸಿದ್ಧಪಡಿಸಿದ್ದಾರೆ. ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸರ್ವಾರ್ ಅವರು ಈ ಮೂರು ಜಾತಿಗಳಿಗೆ ಸೋನಾರೊ (Sonaro), ಗ್ಲೆನ್ (Glen) ಮತ್ತು ಕೀಟ್ (Keeth) ಎಂದು ಹೆಸರಿಸಿರುವುದಾಗಿ ಹೇಳಿದ್ದಾರೆ. ಈ ಪ್ರಭೇದಗಳನ್ನು ಬೆಳೆಯಲು ವಿಶೇಷ ತಂತ್ರಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. ಮಧುಮೇಹ ರೋಗಿಗಳ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹಣ್ಣುಗಳಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಅನೇಕ ಪ್ರಯೋಗಗಳನ್ನು ಮಾಡಲಾಗಿದೆ.
3. ಐದು ವರ್ಷಗಳ ಪ್ರಯತ್ನದ ಬಳಿಕ ದೊರೆತ ಫಲ - ಈ ಮೂರು ಪ್ರಭೇದಗಳನ್ನು ತಾವು ಖುದ್ದಾಗಿ ಅಭಿವೃದ್ಧಿಪಡಿಸಿರುವುದಾಗಿ ಸರ್ವಾರ್ ಹೇಳಿದ್ದಾರೆ. ಇದರಲ್ಲಿ ಅವರಿಗೆ ಸರ್ಕಾರದಿಂದ ಸಹಾಯ ಸಿಕ್ಕಿಲ್ಲ. ಈ ಸಕ್ಕರೆ ಮುಕ್ತ ಮಾವಿನಹಣ್ಣನ್ನು (Mangoes) ತಯಾರಿಸಲು ಸುಮಾರು ಐದು ವರ್ಷಗಳ ಸಮಯಾವಕಾಶ ತಗುಲಿದೆ ಎಂದು ಅವರು ಹೇಳಿದ್ದಾರೆ. ಈ ಮಾವಿನಹಣ್ಣನ್ನು ಶೀಘ್ರದಲ್ಲೇ ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ.ಗೆ 150 ರೂ.ಗೆ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
4. ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಇಲ್ಲ - ಮಾರುಕಟ್ಟೆಯಲ್ಲಿ ಕಂಡು ಬರುವ ಚೌಸಾ ಮಾವಿನ ಹಣ್ಣಿನಲ್ಲಿ ಸಕ್ಕರೆಯ ಪ್ರಮಾಣ ಶೇ. 12 ರಿಂದ ಶೇ.15 ರವರೆಗೆ ಇರುತ್ತದೆ ಎಂದು ಗುಲಾಮ್ ಸರ್ವಾರ್ ಹೇಳಿದ್ದಾರೆ. ಈ ಕಾರಣಕ್ಕಾಗಿ ಮಧುಮೇಹಿಗಳಿಗೆ ಇದನ್ನು ತಿನ್ನದಂತೆ ಸೂಚಿಸಲಾಗುತ್ತದೆ. ಹೀಗಿರುವಾಗ, ಸೋನಾರೊದಲ್ಲಿ ಶೇ. 5.6, ಗ್ಲೆನ್‌ನಲ್ಲಿ ಶೇ. 6 ಮತ್ತು ಕೀತ್‌ನಲ್ಲಿ ಕೇವಲ ಶೇ. 4.7 ರಷ್ಟು ಸಕ್ಕರೆಯ ಪ್ರಮಾಣ (Sugar Level) ಇರುತ್ತದೆ ಎಂದು ಸರ್ವಾರ್ ಹೇಳುತ್ತಾರೆ.
5. ಮಾವಿನಲ್ಲಿ ಹೇರಳ ಪ್ರಮಾಣದ ವಿಟಮಿನ್ ಗಳಿವೆ - ಮಾವಿನಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ಈ ವಿಟಮಿನ್ ದೇಹವ ಗಾಯಗಳನ್ನು (Wounds) ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಮಾವಿನಲ್ಲಿ ವಿಟಮಿನ್ ಕೆ ಕೂಡ ಇದೆ. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಮತ್ತು ರಕ್ತಹೀನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಾವಿನ ಹಳದಿ ಮತ್ತು ಕಿತ್ತಳೆ ಭಾಗಗಳಲ್ಲಿ ಬೀಟಾ ಕ್ಯಾರೋಟಿನ್ ಕಂಡುಬರುತ್ತದೆ. ಈ ಅಂಶವು ಮಾವಿನಲ್ಲಿ ಕಂಡುಬರುವ ಅನೇಕ ರೀತಿಯ ಆಂಟಿ-ಆಕ್ಸಿಡೆಂಟ್‌ಗಳಲ್ಲಿ (Anti-Oxidents) ಒಂದಾಗಿದೆ. ಈ ಆಂಟಿ-ಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುತ್ತವೆ. ಫ್ರೀ ರಾಡಿಕಲ್ ಗಳು (Free Radicals) ಕ್ಯಾನ್ಸರ್ (Cancer) ಕೋಶ ಬೆಳವಣಿಗೆಗೆ ಕಾರಣ ಎನ್ನಲಾಗುತ್ತದೆ.