Sukanya Samriddhi Yojana Changes: SSY ಯೋಜನೆಯ ಈ ಐದು ಬದಲಾವಣೆಗಳನ್ನು ನೀವೂ ತಿಳಿಯಿರಿ

Fri, 11 Dec 2020-12:51 pm,

ಈ ಮೊದಲು ಎರಡು ಸಂದರ್ಭಗಳಲ್ಲಿ ನೀವು ಈ ಯೋಜನೆಯನ್ನು ಮೊಟಕುಗೊಳಿಸಬಹುದಾಗಿತ್ತು. ಒಂದು ವೇಳೆ ಮಗಳ ಆಕಸ್ಮಿಕ ಮೃತ್ಯುವಾದರೆ ಹಾಗೂ ಎರಡನೆಯದಾಗಿ ಮಗಳ ವಾಸಸ್ಥಾನ ಬದಲಾದ ಸಂದರ್ಭದಲ್ಲಿ ನೀವು ಈ ಖಾತೆಯನ್ನು ಬಂದ್ ಮಾಡಬಹುದಾಗಿತ್ತು. ಆದರೆ, ಖಾತೆದಾರರ ಪ್ರಾಣಕ್ಕೆ ಅಪಾಯ ತರುವ ಕಾಯಿಲೆಯನ್ನು ಕೂಡ ಇದರಲ್ಲಿ ಜೋಡಿಸಲಾಗಿದೆ. ಒಂದು ವೇಳೆ ಪೋಷಕರ ಮೃತ್ಯುವಾದ ಸಂದರ್ಭದಲ್ಲಿಯೂ ಕೂಡ ನೀವು ಈ ಖಾತೆಯನ್ನು ಬಂದ್ ಮಾಡಬಹುದು.

ಈ ಯೋಜನೆಯಡಿ ನೀವು ಒಟ್ಟು ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದಾಗಿತ್ತು. ಮೂರನೇ ಹೆಣ್ಣು ಮಗುವಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಆದರೆ ಹೊಸ ನಿಯಮಾನುಸಾರ, ಒಂದು ಹೆಣ್ಣು ಮಗುವಿನ ಜನನದ ಬಳಿಕ ಇಬ್ಬರು ಅವಳಿ ಹೆಣ್ಣುಮಕ್ಕಳು ಜನಿಸಿದರೆ, ಅವರಿಬ್ಬರ ಹೆಸರಿನಲ್ಲಿಯೂ ಕೂಡ ನೀವು ಖಾತೆ ತೆರೆಯಬಹುದು. ನೂತನ ನಿಯಮದ ಪ್ರಕಾರ ಎರಡಕ್ಕಿಂತ ಹೆಚ್ಚು ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬೇಕಾದರೆ ಜನನ ಪ್ರಮಾಣಪತ್ರದ ಜೊತೆಗೆ ಮುಚ್ಚಳಿಕೆ ಸಲ್ಲಿಸಬೇಕು. ಹಳೆ ನಿಯಮದಲ್ಲಿ ಕೇವಲ ಪೋಷಕರು ಕೇವಲ ಮೆಡಿಕಲ್ ಸರ್ಟಿಫಿಕೆಟ್ ಮಾತ್ರ ನೀಡಬೇಕಾಗಿತ್ತು.

ಈ ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ ಅಂದರೆ 250 ರೂ.ಜಮಾ ಮಾಡಬೇಕು. ಒಂದು ವೇಳೆ ನೀವು ಈ ಹಣವನ್ನು ಜಮಾ ಮಾಡದೆ ಹೋದಲ್ಲಿ ಖಾತೆ ಕಟಬಾಕಿ ಪಟ್ಟಿ ಸೇರುತ್ತದೆ. ಆದರೆ, ಇದೀಗ ನೂತನ ನಿಯಮದ ಅನುಸಾರ ಒಂದು ವೇಳೆ ಖಾತೆಯನ್ನು ಸಕ್ರೀಯಗೊಳಿಸದಿದ್ದರೆ, ಈ ಯೋಜನೆಗಾಗಿ ಇರುವ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದು ಖಾತೆ ಹೊಂದಿದವರಿಗೆ ಒಂದು ಉತ್ತಮ ಸುದ್ದಿಯಾಗಿದೆ. ಹಳೆ ನಿಯಮದ ಪ್ರಕಾರ ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ಗೆ ಸಿಗುವ ಬಡ್ಡಿದರ ಸಿಗುತ್ತಿತ್ತು. ಪೋಸ್ಟಲ್ ಎಸ್.ಬಿ ಖಾತೆಗೆ ಶೇ.4 ರಷ್ಟು ಬಡ್ಡಿ ಸಿಗುತ್ತಿದ್ದರೆ. ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆದಾರರಿಗೆ ಶೇ.7.6ರಷ್ಟು ಬಡ್ಡಿ ಸಿಗುತ್ತದೆ.

ಇದುವರೆಗೆ ನಿಮ್ಮ ಮಗಳು ತನ್ನ ವಯಸ್ಸಿನ 10ನೇ ವರ್ಷಕ್ಕೆ ತಲುಪಿದ ಬಳಿಕ ಈ ಖಾತೆಯನ್ನು ನಿರ್ವಹಿಸಬಹುದಾಗಿತ್ತು. ಆದರೆ ನೂತನ ನಿಯಮಗಳ ಅನುಸಾರ ಮಗಳು 18 ವರ್ಷ ತಲಪುವವರೆಗೆ ಅವಳಿಕೆ ಖಾತೆ ನಿರ್ವಹಿಸಲು ಅನುಮತಿ ನೀಡಲಾಗುವುದಿಲ್ಲ. ಅಲ್ಲಿಯವರೆಗೆ ಖಾತೆಹೊಂದಿದವರ ಪೋಷಕರು ಮಾತ್ರ ಖಾತೆಯನ್ನು ನಿರ್ವಹಿಸಬೇಕು.

ಹೊಸ ನಿಯಮದ ಪ್ರಕಾರ ಖಾತೆಗೆ ತಪ್ಪಾದ ಬಡ್ಡಿಯನ್ನು ಸೇರಿಸಿದ ಸಂದರ್ಭದಲ್ಲಿ ಅದನ್ನು ವಾಪಸ್ ಪಡೆಯುವ ನಿಯಮವನ್ನು ತೆಗೆದುಹಾಕಲಾಗಿದೆ. ಇದಲ್ಲದೆ ಆರ್ಥಿಕ ವರ್ಷದ ಅಂತ್ಯಕ್ಕೆ ಖಾತೆಗೆ ಬಡ್ಡಿಯನ್ನು ಸೇರಿಸಲಾಗುವುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link