ಅಕ್ಟೋಬರ್ ಒಂದರಿಂದ ಬದಲಾಗುವುದು ಸುಕನ್ಯ ಸಮೃದ್ದಿ ನಿಯಮ!ಬಡ್ಡಿಯ ಮೇಲೆಯೇ ನೇರ ಪರಿಣಾಮ !
ಆರ್ಥಿಕ ವ್ಯವಹಾರಗಳ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎನ್‌ಎಸ್‌ಎಸ್ ಅಡಿಯಲ್ಲಿ ಅನಿಯಮಿತವಾಗಿ ತೆರೆಯಲಾದ ಉಳಿತಾಯ ಖಾತೆಗಳನ್ನು ಕ್ರಮಬದ್ಧಗೊಳಿಸುವ ಉದ್ದೇಶದಿಂದ ಹೊಸ ಮಾರ್ಗಸುಚಿಗಳನ್ನು ಹೊರಡಿಸಲಾಗಿದೆ.
ಇದರ ಅಡಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ ಒಂದರಿಂದ ಈ ನಿಯಮ ಜಾರಿಗೆ ಬರಲಿದೆ.
ಸುಕನ್ಯ ಸಮೃದ್ದಿ ಯೋಜನೆಯ ಖಾತೆಯನ್ನು ಪೋಷಕರು ತಮ್ಮ ಮಗುವಿನ ಹೆಸರಿನಲ್ಲಿ ತೆರೆಯಬೇಕು ಎನ್ನುವುದು ನಿಯಮ.ಆದರೆ ನಿಯಮ ಮೀರಿ ಅಜ್ಜಿಯಂದಿರು ಕೂಡಾ ತೆರೆದಿರುವ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳನ್ನು ಪೋಷಕರ ಹೆಸರಿಗೆ ವರ್ಗಾಯಿಸುವುದು ಈಗ ಕಡ್ಡಾಯ.
ಅನೇಕ ಕಡೆಗಳಲ್ಲಿ ಅಜ್ಜಿಯರು ಕೂಡಾ SSY ಖಾತೆಗಳನ್ನು ತೆರೆದಿರುವುದು ಗಮನಕ್ಕೆ ಬಂದಿದೆ.ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಮಕ್ಕಳ ಹೆತ್ತವರು ಅಥವಾ ಕಾನೂನು ಪಾಲಕರು ಮಾತ್ರ ಈ ಖಾತೆಗಳನ್ನು ತೆರೆಯಬಹುದು.
ಹಳೆಯ ಖಾತೆಯನ್ನು ಮುಚ್ಚಲು ಅಥವಾ ಖಾತೆಯನ್ನು ವರ್ಗಾಯಿಸಲು ಮೂಲ ಖಾತೆಯ ಪಾಸ್‌ಬುಕ್,ಹುಡುಗಿಯ ಜನ್ಮ ಪ್ರಮಾಣಪತ್ರ, ಹುಡುಗಿಯೊಂದಿಗಿನ ಸಂಬಂಧದ ಪ್ರಮಾಣಪತ್ರ ಅಥವಾ ಇತರ ಕಾನೂನು ದಾಖಲೆಗಳು ಸೇರಿವೆ.
ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಖಾತೆಯನ್ನು ವರ್ಗಾಯಿಸಲು ಅಂಚೆ ಕಚೇರಿ ಅಥವಾ ಬ್ಯಾಂಕ್ ನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ.ಭರ್ತಿ ಮಾಡಬೇಕಾದ ಫಾರ್ಮ್ ನಲ್ಲಿ ಪ್ರಸ್ತುತ ಪೋಷಕರ ಅಂದರೆ ಅಜ್ಜಿಯರ ಸಹಿಗಳ ಅಗತ್ಯವಿರುತ್ತದೆ.
ಇದರ ನಂತರ ನೀವು ಈ ಎಲ್ಲಾ ದಾಖಲೆಗಳನ್ನು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಸಲ್ಲಿಸಬೇಕಾಗುತ್ತದೆ. ಇದಾದ ನಂತರ ಪರಿಶೀಲನೆಯನ್ನು ಪ್ರಕ್ರಿಯೆಗೊಳಿಸುತ್ತಾರೆ.ಅಗತ್ಯ ಬಿಡದೆ ಇನ್ನೂ ಕೆಲವು ದಾಖಲೆಗಳನ್ನು ಕೇಳಬಹುದು.