Summer foods : ಬೇಸಿಗೆಯಲ್ಲಿ ಖಂಡಿತವಾಗಿಯೂ ಸೇವಿಸಲೇ ಬೇಕಾದ ವಸ್ತುಗಳು ಇವು..!
ಟೊಮ್ಯಾಟೋ ನಲ್ಲಿ ಆಂಟಿಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಕ್ಯಾನ್ಸರ್ ನಂತಹ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಲು ಇದು ಸಹಕಾರಿಯಾಗಿದೆ.
ಬೇಸಿಗೆಯಲ್ಲಿ ಹಿರೇಕಾಯಿ ಸೇವನೆ ಬಹಳ ಮುಖ್ಯವಾಗಿದೆ. ಹಿರೇಕಾಯಿ ಹೆಚ್ಚಿನ ಪ್ರಮಾಣದ ಫೈಬರ್ ಒಳಗೊಂಡಿದೆ. ಇದು ಹೃದ್ರೋಗ ತಡೆಯುವಲ್ಲಿಯೂ ಸಹಕಾರಿಯಾಗಿದೆ. ಕೊಲೆಸ್ಟ್ರಾಲನ್ನು ಕೂಡಾ ಇದು ಕಡಿಮೆ ಮಾಡುತ್ತದೆ
ಪ್ರೋಟೀನ್ ಹೇರಳವಾಗಿರುವ ಮೊಸರು ಬೇಸಿಗೆಯಲ್ಲಿ ದೇಹ ತಂಪಾಗಿಡಲು ಸಹಕರಿಸುತ್ತದೆ. ಮೊಸರಿನಲ್ಲಿರುವ ಪ್ರೊಬಯೋಟಿಕ್ ಅಂಶ ಜೀರ್ಣಕ್ರಿಯೆಯನ್ನು ಸಹಾ ಉತ್ತಮಗೊಳಿಸುತ್ತದೆ.
ಕಲ್ಲಂಗಡಿ ಹಣ್ಣು ಬೇಸಿಗೆ ಬೇಗೆಯಲ್ಲಿ ನಮ್ಮ ದೇಹ ತಂಪಾಗಿಡಲು ಸಹಕಾರಿಯಾಗಿರುತ್ತದೆ. ಅಲ್ಲದೆ ಡಿಹೈಡ್ರೆಶನ್ ದೂರ ಮಾಡುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುತ್ತದೆ. ಹೀಗಾಗಿ, ಇದನ್ನು ತಿಂದ ನಂತರ ಸುಮಾರು ಹೊತ್ತಿನವರೆಗೆ ಹಸಿವಾಗುವುದಿಲ್ಲ. ಕಲ್ಲಂಗಡಿ ಹಣ್ಣಿನಲ್ಲಿರುವ ಲೈಕೋಫಿನ್ ಬಿಸಿಲಿನ ಕಾರಣ ಚರ್ಮದ ಮೇಲಾಗುವ ಕೆಟ್ಟ ಪರಿಣಾಮಗಳನ್ನು ತಡೆಯುತ್ತದೆ.
ಬೇಸಿಗೆಯಲ್ಲಿ ಹಸಿರು ತರಕಾರಿಗಳಿರುವ ಸಲಾಡ್ ಸೇವನೆ ಬಹಳ ಮುಖ್ಯವಾಗಿದೆ. ಹಸಿರು ತರಕಾರಿಗಳಲ್ಲಿ ವಿಟಮಿನ್ ಎ ಇರುತ್ತದೆ. ಇದು ಬಿಸಿಲಿನ ಕಾರಣದಿಂದ ಚರ್ಮಕ್ಕಾಗುವ ಸಮಸ್ಯೆಗಳಿಂದ ಕಾಪಾಡುತ್ತದೆ.