Surya Gochar: ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ನಿಮ್ಮ ರಾಶಿಗೆ ಅನುಗುಣವಾಗಿ ಈ ರೀತಿ ಪರಿಹಾರ ಕೈಗೊಳ್ಳಿ
ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯನು ಜುಲೈ 17, 2023 ರಂದು ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುವ ಮೂಲಕ ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ನಿಮ್ಮ ರಾಶಿಗೆ ಅನುಗುಣವಾಗಿಯೇ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಶುಭ ಫಲಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಸೂರ್ಯ ದೋಷ ಪರಿಹಾರಕ್ಕಾಗಿ ಯಾವ ರಾಶಿಯವರು ಯಾವ ಪರಿಹಾರಗಳನ್ನು ಕೈಗೊಳ್ಳಬೇಕು ತಿಳಿಯಿರಿ.
ಮೇಷ ರಾಶಿಯವರು ನಿತ್ಯ ಮುಂಜಾನೆ ಸೂರ್ಯೋದಯಕ್ಕೆ ಮುಂಚೆಯೇ ಎದ್ದು ಕೆಂಪು ಬಣ್ಣದ ಹೂವುಗಳನ್ನು ಹೊಂದಿರುವ ಸಸ್ಯಗಳು ಮತ್ತು ಮರಗಳಿಗೆ ನೀರು ಹಾಕುವುದರಿಂದ ಶುಭವಾಗಲಿದೆ.
ವೃಷಭ ರಾಶಿಯವರು ಸೂರ್ಯದೇವನ ಕೃಪೆಗೆ ಪಾತ್ರರಾಗಲು ಪ್ರತಿ ಭಾನುವಾರ ಸಂಜೆ ಅರಳಿ ಮರದ ಕೆಳಗೆ ನಾಲ್ಕು ಮುಖದ ದೀಪವನ್ನು ಹಚ್ಚಿ ಮತ್ತು ಹಸುವಿಗೆ ಬೆಲ್ಲವನ್ನು ತಿನ್ನಿಸಿ.
ಮಿಥುನ ರಾಶಿಯವರು ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಿ. ಹಸುವಿಗೆ ಹಸಿರು ಮೇವು, ಮೀನಿಗೆ ಆಹಾರವನ್ನು ನೀಡಿದರೆ ಸೂರ್ಯ ದೋಷ ಪರಿಹಾರವಾಗುತ್ತದೆ.
ಕರ್ಕಾಟಕ ರಾಶಿಯವರು ಪ್ರತಿ ಭಾನುವಾರ ಬೆಳಿಗ್ಗೆ ಸ್ನಾನದ ನಂತರ, ಕೆಂಪು ಚಂದನ, ಕೆಂಪು ಹೂವು, ಅಕ್ಷತೆ ಮತ್ತು ದೂರ್ವಾವನ್ನು ಶುದ್ಧ ನೀರಿನಲ್ಲಿ ಬೆರೆಸಿ ಪಾತ್ರೆಯಲ್ಲಿ ಇರಿಸಿ. ನಂತರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಸೂರ್ಯ ಬಲಗೊಳ್ಳುವನು.
ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ಸಿಂಹ ರಾಶಿಯವರು ಕೆಂಪು, ಹಳದಿ ಬಟ್ಟೆ, ಬೆಲ್ಲ, ಚಿನ್ನ, ಗೋಧಿ, ಕೆಂಪು ಕಮಲ, ಉದ್ದಿನಬೇಳೆ ಇತ್ಯಾದಿಗಳನ್ನು ದಾನ ಮಾಡಿ. ಜೊತೆಗೆ "ಓಂ ಭೂರ್ಭುವ: ಸ್ವಃ ತತ್ಸವಿತುರ್ವರೇಣ್ಯ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್" ಎಂಬ ಗಾಯತ್ರಿ ಮಂತ್ರವನ್ನು ನಿತ್ಯ 108 ಬಾರಿ ಪಠಿಸಿ.
ನಿಮ್ಮ ಜಾತಕದಲ್ಲಿ ಸೂರ್ಯ ಬಲಹೀನನಾಗಿದ್ದರೆ 12 ಭಾನುವಾರಗಳು ಸೂರ್ಯೋದಯದ ಸಮಯದಲ್ಲಿ ನಿರಂತರವಾಗಿ ಸೂರ್ಯಾಷ್ಟಕವನ್ನು ಪಠಿಸುವುದು ನಿಮಗೆ ಮಂಗಳಕರವಾಗಿರುತ್ತದೆ.
ತುಲಾ ರಾಶಿಯವರು ನಿತ್ಯ ಸೂರ್ಯೋದಯದ ಸಮಯದಲ್ಲಿ ಅರ್ಘ್ಯವನ್ನು ಅರ್ಪಿಸಿ. ನಂತರ ನಿಮ್ಮ ಹಣೆಯ ಮೇಲೆ ಕೆಂಪು ಚಂದನದ ತಿಲಕವನ್ನು ಅನ್ವಯಿಸಿ. ದೇವಸ್ಥಾನದಲ್ಲಿ ಗೋಧಿ ಮತ್ತು ಬೆಲ್ಲವನ್ನು ದಾನ ಮಾಡುವುದರಿಂದ ಶುಭಫಲ.
ವೃಶ್ಚಿಕ ರಾಶಿಯವರು ಭಾನುವಾರದಂದು ಉಪವಾಸವನ್ನು ಆಚರಿಸಿ ಓಂ ಘ್ರಿಣಿ: ಸೂರ್ಯ ನಮಃ ಎಂಬ ಮಂತ್ರವನ್ನು ಪಠಿಸಿ ಇಂದರಿಂದ ಮಂಗಳಕರ ಫಲಗಳು ಲಭ್ಯವಾಗಲಿದೆ.
ಧನು ರಾಶಿಯವರು ಸೂರ್ಯನನ್ನು ಬಲಪಡಿಸಲು, ತಾಮ್ರದ ಪಾತ್ರೆಯಲ್ಲಿ ನೀರನ್ನು ಇರಿಸಿ, ಅದರಲ್ಲಿ ಪುಡಿಮಾಡಿದ ಅರಿಶಿನ ಪುಡಿಯನ್ನು ಹಾಕಿ, ನಂತರ ಅದನ್ನು ಸೂರ್ಯ ದೇವರಿಗೆ ಅರ್ಪಿಸಿ.
ಮಕರ ರಾಶಿಯವರು ಭಾನುವಾರದ ದಿನ ಅಗತ್ಯವಿರುವವರಿಗೆ ಗೋಧಿಯನ್ನು ದಾನ ಮಾಡುವುದರಿಂದ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಶುಭವಾಗುತ್ತದೆ.
ಕುಂಭ ರಾಶಿಯವರು ಭಾನುವಾರದಂದು ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಸೂರ್ಯನಿಗೆ ಅರ್ಪಿಸಿ, ನಂತರ ಹಸುವಿಗೆ ಹಸಿರು ಮೇವನ್ನು ತಿನಿಸುವುದರಿಂದ ಸೂರ್ಯ ದೋಷದಿಂದ ಪರಿಹಾರ ದೊರೆಯುತ್ತದೆ.
ಮೀನ ರಾಶಿಯವರು ಬೆಳಿಗ್ಗೆ ಒಂದು ಪಾತ್ರೆಯಲ್ಲಿ ಕೆಂಪು ಚಂದನ, ಕೆಂಪು ಹೂವುಗಳು, ಅಕ್ಷತೆ ಮತ್ತು ದೂರ್ವಾವನ್ನು ಶುದ್ಧ ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ, ಬಳಿಕ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿದರೆ ಸೂರ್ಯನಿಗೆ ಸಂಬಂಧಿಸಿದ ಎಂತಹದ್ದೇ ದೋಷವಿದ್ದರೂ ಪರಿಹಾರವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.