ಬುಧನ ಮನೆಯಲ್ಲಿ ಮಿತ್ರ ಸೂರ್ಯನ ಜೊತೆಗೆ ಭೂಮಿ ಪುತ್ರನ ಯುತಿ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಭಾಗ್ಯ!
ವೈದಿಕ ಪಂಚಾಂಗದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ರಾಶಿ ಪರಿವರ್ತನೆಯನ್ನು ನಡೆಸುವ ಮೂಲಕ ಪರಸ್ಪರ ಮೈತ್ರಿಯನ್ನು ಮಾಡಿಕೊಳ್ಳುತ್ತದೆ (Spiritual News In Kannada). ಇದರ ಪ್ರಭಾವ ಎಲ್ಲಾ ದ್ವಾಶದ ರಾಶಿಗಳ ಜಾತಕದವರ ಮೇಲೆ ಗೋಚರಿಸುತ್ತದೆ. ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಬುಧನ ಅಧಿಪತ್ಯದ ರಾಶಿಯಾಗಿರುವ ಕನ್ಯಾ ರಾಶಿಯಲ್ಲಿ ಭೂಮಿ ಪುತ್ರ ಎಂದೇ ಕರೆಯಲಾಗುವ ಮಂಗಳ ಹಾಗೂ ಗ್ರಹಗಳ ರಾಜನಾಗಿರುವ ಸೂರ್ಯನ ಮೈತ್ರಿ ನೆರವೇರಲಿದೆ. ಈ ಇಬ್ಬರ ಮೈತ್ರಿಯಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅಪಾರ ಧಣಪ್ರಾಪ್ತಿಯ ಯೋಗ, ಆಕಷ್ಮಿಕ ಧನಲಾಭ ಯೋಗ ಹಾಗೂ ಭಾಗ್ಯೋದಯ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಸಿಂಹ ರಾಶಿ: ಸೂರ್ಯ-ಮಂಗಳರ ಈ ಯುತಿ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ನೆರವೇರುತ್ತಿದೆ. ಹೀಗಾಗಿ ಇದು ನಿಮಗೆ ಲಾಭದಾಯಕ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧಣಪ್ರಾಪ್ತಿಯ ಸಕಲ ಯೋಗಗಳು ರೂಪುಗೊಳ್ಳುತ್ತಿವೆ. ಇದಲ್ಲದೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ಈ ಅವಧಿಯಲ್ಲಿ ನೀವು ನಿಮ್ಮ ಸಾಮಾಜಿಕ ಸಂಪರ್ಕವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಗುವಿರಿ. ಇದರಿಂದ ನಿಮ್ಮ ಮಾತಿನಲ್ಲಿ ಹೆಚ್ಚಾದ ಪ್ರಭಾವವೂ ಕೂಡ ನಿಮಗೆ ಗೋಚರಿಸಲಿದೆ. ಜನರು ನಿಮ್ಮಿಂದ್ರ ಪ್ರಭಾವಿತರಾಗಲಿದ್ದಾರೆ. ವಿದೇಶಗಳೊಂದಿಗೆ ವ್ಯಾಪಾರ ಸಂಬಂಧ ಇಟ್ಟುಕೊಂಡವರಿಗೆ ವ್ಯಾಪಾರದಲ್ಲಿ ಭಾರಿ ಲಾಭ ಉಂಟಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ಸೂರ್ಯ - ಮಂಗಳರ ಈ ಯುತಿ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ ಈ ಯುತಿ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದರೆ, ನಿಮ್ಮ ವ್ಯಾಪಾರದಲ್ಲಿ ನೀವು ವೃದ್ಧಿಯನ್ನು ಕಾಣಲಿರುವಿರಿ. ಈ ಅವಧಿಯಲ್ಲಿ ನಿಮಗೆ ನಿಮ್ಮ ಹಳೆ ಹೂಡಿಕೆಯಿಂದ ಲಾಭ ಸಿಗಲಿದೆ. ನಿಮ್ಮ ಹಲವು ಯೋಜನೆಗಳು ಯಶಸ್ಸನ್ನು ಕಾಣಲಿವೆ. ಸ್ಟಾಕ್ ಮಾರ್ಕೆಟ್, ಲಾಟರಿ ವ್ಯವಹಾರಗಳಿಂದ ನಿಮಗೆ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಮಕ್ಕಳಿಗೆ ಸಂಬಂಧಿಸಿದಂತೆ ಸಂತಸದ ಸುದ್ದಿ ನಿಮಗೆ ಪ್ರಾಪ್ತಿಯಾಗಲಿದೆ.
ಮಕರ ರಾಶಿ: ಮಂಗಳ-ಸೂರ್ಯನ ಈ ಮೈತ್ರಿ ನಿಮ್ಮ ಗೋಚರ ಜಾತಕದ ಭಾಗ್ಯ ಸ್ಥಾನದಲ್ಲಿ ನೆರವೇರುತ್ತಿದೆ. ಹೀಗಾಗಿ ಈ ಮೈತ್ರಿ ನಿಮಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ ಮತ್ತು ಈ ಅವಧಿಯಲ್ಲಿ ಅದು ನಿಮ್ಮ ಭಾಗ್ಯೋದಯಕ್ಕೆ ಕಾರಣವಾಗಲಿದೆ. ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ವಿಧ್ಯಾರ್ಥಿಗಳ ಪಾಲಿಗೆ ಸಮಯ ಅನುಕೂಲಕರ ಮತ್ತು ಲಾಭದಾಯಕ ವಾಗಿರಲಿದೆ. ಯಾವುದಾದರೊಂದು ಪರೀಕ್ಷೆಯಲ್ಲಿ ನಿಮಗೆ ನಿಮ್ಮ ಇಚ್ಚೆಗೆ ಅನುಗುಣವಾಗಿಯೇ ಫಲಿತಾಂಶ ಹೊರಬೀಳಲಿದೆ. ಧರ್ಮ-ಕರ್ಮ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ನೀವು ಯಾತ್ರೆಯ ಮೇಲೆ ಹೋಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)